CJI DY Chandrachud: ನನ್ನ ಅಧಿಕಾರಾವಧಿಯನ್ನು ಇತಿಹಾಸ ಹೇಗೆ ನಿರ್ಣಯಿಸುತ್ತದೆ ಎಂಬ ಆತಂಕವಿದೆ: ಸಿಜೆಐ ಚಂದ್ರಚೂಡ್

|

Updated on: Oct 09, 2024 | 4:28 PM

ಭೂತಾನ್‌ನ ಪಾರೋದಲ್ಲಿರುವ ಜೆಎಸ್‌ಡಬ್ಲ್ಯೂ ಕಾನೂನು ಶಾಲೆಯ ಘಟಿಕೋತ್ಸವದಲ್ಲಿ ಮಾತನಾಡಿದ ಸಿಜೆಐ ಚಂದ್ರಚೂಡ್, ನನ್ನ ದೇಶಕ್ಕೆ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ನಾನು ಈ ವರ್ಷದ ನವೆಂಬರ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿ ಹೊಂದಲಿದ್ದೇನೆ. ನನ್ನ ಅಧಿಕಾರಾವಧಿಯು ಅಂತ್ಯಗೊಳ್ಳುತ್ತಿದ್ದಂತೆ, ನನ್ನ ಮನಸ್ಸು ಭವಿಷ್ಯ ಮತ್ತು ಭವಿಷ್ಯದ ಬಗ್ಗೆ ಭಯ ಮತ್ತು ಆತಂಕಗಳಿಂದ ತುಂಬಿದೆ ಎಂದಿದ್ದಾರೆ.

CJI DY Chandrachud: ನನ್ನ ಅಧಿಕಾರಾವಧಿಯನ್ನು ಇತಿಹಾಸ ಹೇಗೆ ನಿರ್ಣಯಿಸುತ್ತದೆ ಎಂಬ ಆತಂಕವಿದೆ: ಸಿಜೆಐ ಚಂದ್ರಚೂಡ್
ಡಿವೈ ಚಂದ್ರಚೂಡ್
Follow us on

ದೆಹಲಿ ಅಕ್ಟೋಬರ್ 09:ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ (CJI) ನಿವೃತ್ತಿಯಾಗಲು ಒಂದು ತಿಂಗಳು ಬಾಕಿ ಇರುವಾಗ,  ಸಿಜೆಐ ಡಿವೈ ಚಂದ್ರಚೂಡ್ (CJI DY Chandrachud) ಅವರು ತಮ್ಮ ಅಧಿಕಾರಾವಧಿಯನ್ನು ಇತಿಹಾಸವು ಹೇಗೆ ನಿರ್ಣಯಿಸುತ್ತದೆ ಮತ್ತು ನ್ಯಾಯಾಧೀಶರು ಮತ್ತು ಕಾನೂನು ವೃತ್ತಿಪರರನ್ನು ಒಳಗೊಂಡ ಭವಿಷ್ಯದ ಪೀಳಿಗೆಗೆ ನಾನು ಯಾವ ಪರಂಪರೆ ಬಿಟ್ಟು ಹೋಗುತ್ತಿರುವೆ ಎಂಬುದರ ಬಗ್ಗೆ ನನ್ನ ಮನಸ್ಸು ಚಿಂತಿಸುತ್ತಿದೆ ಎಂದು ಹೇಳಿದ್ದಾರೆ. ಸಿಜೆಐ ಯುಯು ಲಲಿತ್ ಅವರ ನಿವೃತ್ತಿಯ ನಂತರ ನ್ಯಾಯಮೂರ್ತಿ ಚಂದ್ರಚೂಡ್ ಅವರು ನವೆಂಬರ್ 9, 2022 ರಂದು ಸಿಜೆಐ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಎರಡು ವರ್ಷಗಳ ಅವಧಿಯ ನಂತರ ಅವರು ನವೆಂಬರ್ 10ರಂದು ನಿವೃತ್ತಿ ಹೊಂದಲಿದ್ದಾರೆ. 14 ವರ್ಷಗಳ ಬಳಿಕ ಇಷ್ಟು ಸುದೀರ್ಘ ಅವಧಿಗೆ ಸಿಜೆಐ ಒಬ್ಬರು ಕಾರ್ಯ ನಿರ್ವಹಿಸಿದ್ದಾರೆ.

ಭೂತಾನ್‌ನ ಪಾರೋದಲ್ಲಿರುವ ಜೆಎಸ್‌ಡಬ್ಲ್ಯೂ ಕಾನೂನು ಶಾಲೆಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ನನ್ನ ದೇಶಕ್ಕೆ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ನಾನು ಈ ವರ್ಷದ ನವೆಂಬರ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿ ಹೊಂದಲಿದ್ದೇನೆ. ನನ್ನ ಅಧಿಕಾರಾವಧಿಯು ಅಂತ್ಯಗೊಳ್ಳುತ್ತಿದ್ದಂತೆ, ನನ್ನ ಮನಸ್ಸು ಭವಿಷ್ಯ ಮತ್ತು ಭವಿಷ್ಯದ ಬಗ್ಗೆ ಭಯ ಮತ್ತು ಆತಂಕಗಳಿಂದ ತುಂಬಿದೆ. ನಾನು ಮಾಡಬೇಕಾದ ಎಲ್ಲವನ್ನೂ ನಾನು ಸಾಧಿಸಿದ್ದೇನೆಯೇ? ಎಂಬ  ಪ್ರಶ್ನೆಗಳನ್ನು ಯೋಚಿಸುತ್ತಿದ್ದೇನೆ ಎಂದಿದ್ದಾರೆ.

ಆದಾಗ್ಯೂ, ಈ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಗಳು ನನ್ನ ನಿಯಂತ್ರಣದಲ್ಲಿಲ್ಲ.ತಮ್ಮ ದೇಶಕ್ಕೆ ಅತ್ಯಂತ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದೇನೆ ಎಂಬ ಅಂಶದಲ್ಲಿ ತೃಪ್ತಿ ಇದೆ ಎಂದು ಸಿಜೆಐ ಹೇಳಿದ್ದಾರೆ.

“ಈ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಗಳು ನನ್ನ ನಿಯಂತ್ರಣವನ್ನು ಮೀರಿವೆ. ಬಹುಶಃ, ಈ ಕೆಲವು ಪ್ರಶ್ನೆಗಳಿಗೆ ನಾನು ಎಂದಿಗೂ ಉತ್ತರಗಳನ್ನು ಕಂಡುಕೊಳ್ಳುವುದಿಲ್ಲ. ಆದಾಗ್ಯೂ, ಕಳೆದ ಎರಡು ವರ್ಷಗಳಲ್ಲಿ, ನಾನು ಪ್ರತಿದಿನ ಬೆಳಿಗ್ಗೆ ಎದ್ದೇಳುತ್ತೇನೆ ಮತ್ತು ಕೆಲಸವನ್ನು ನನ್ನ ಪೂರ್ಣವಾಗಿ ನೀಡುವ ಬದ್ಧತೆಯೊಂದಿಗೆ ಮತ್ತು ನಾನು ನನ್ನ ದೇಶಕ್ಕೆ ಅತ್ಯಂತ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದೇನೆ ಎಂಬ ತೃಪ್ತಿಯೊಂದಿಗೆ ಮಲಗಲು ಹೋಗಿದ್ದೇನೆ. ಇದರಲ್ಲಿಯೇ ನಾನು ಸಮಾಧಾನವನ್ನು ಹುಡುಕುತ್ತೇನೆ. ಒಮ್ಮೆ ನೀವು ನಿಮ್ಮ ಉದ್ದೇಶಗಳು ಮತ್ತು ಸಾಮರ್ಥ್ಯಗಳಲ್ಲಿ ಈ ನಂಬಿಕೆಯ ಪ್ರಜ್ಞೆಯನ್ನು ಹೊಂದಿದ್ದರೆ, ಫಲಿತಾಂಶಗಳ ಬಗ್ಗೆ ವ್ಯಾಕುಲತೆ ಇರಲ್ಲ. ನೀವು ಫಲಿತಾಂಶದ ಬದಲು ಪ್ರಕ್ರಿಯೆ ಬಗ್ಗೆ ಮೌಲ್ಯೀಕರಣ ಮಾಡಲು ಶುರು ಮಾಡುತ್ತೀರಿ  ಎಂದು ಸಿಜೆಐ ಹೇಳಿದರು.

ಇದನ್ನೂ ಓದಿ: ದೂರುಗಳ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸುವೆ; ಹರ್ಯಾಣ ಚುನಾವಣಾ ಸೋಲು ಬಗ್ಗೆ ರಾಹುಲ್ ಗಾಂಧಿ ಮೊದಲ ಪ್ರತಿಕ್ರಿಯೆ

ನಮ್ಮ ಸಮುದಾಯಗಳ ಸಾಂಪ್ರದಾಯಿಕ ಮೌಲ್ಯಗಳು ಸ್ವಾತಂತ್ರ್ಯ, ಸಮಾನತೆ ಮತ್ತು ಭಿನ್ನಾಭಿಪ್ರಾಯದಂತಹ ಆಧುನಿಕ ಪ್ರಜಾಸತ್ತಾತ್ಮಕ ವಿಚಾರಗಳಿಗೆ ವಿರುದ್ಧವಾಗಿವೆ ಎಂಬ ತಪ್ಪು ಗ್ರಹಿಕೆಯು ಹೆಚ್ಚಾಗಿ ಕಂಡುಬರುತ್ತದೆ. ಆದಾಗ್ಯೂ, ಏಷ್ಯಾದಲ್ಲಿನ ನಮ್ಮ ಸಮುದಾಯಗಳ ಇತಿಹಾಸದ ಬಗ್ಗೆ ನಿರಾಸಕ್ತಿಯಿಂದ ನೋಡಿದಾಗ ವಿಭಿನ್ನ ಉತ್ತರವನ್ನು ನೀಡುತ್ತದೆ” ಎಂದು ಸಿಜೆಐ ಹೇಳಿದರು. ಜನರು ಚಿಕ್ಕವರಿದ್ದಾಗ, ಅವರು ಪ್ರಪಂಚದ ತಪ್ಪುಗಳನ್ನು ಸರಿಪಡಿಸುವ ತೀವ್ರ ಬಯಕೆ ಹೊಂದಿರುತ್ತಾರೆ. ಆದರೆ ಅದು ಅನನುಭವ, ಅನಿಶ್ಚಿತತೆ ಮತ್ತು ಅವಕಾಶದ ಕೊರತೆಯಿಂದ ಆ ಬಯಕೆಗಳು ಬದಲಾಗುತ್ತಾ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Wed, 9 October 24