ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದ ಚುನಾವಣಾ ಆಯೋಗ; ಇಂದು ಕಾಂಗ್ರೆಸ್ ನಿಯೋಗದ ಭೇಟಿಗೆ ಒಪ್ಪಿಗೆ
ಚುನಾವಣಾ ಆಯೋಗವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದೆ. "ಈ ನಡುವೆ ಪ್ರತಿಪಕ್ಷದ ನಾಯಕರ ಹೇಳಿಕೆಗಳನ್ನು ಆಯೋಗವು ಗಮನಿಸಿದೆ. ಅವರು ಹರಿಯಾಣದ ಫಲಿತಾಂಶಗಳನ್ನು ಅನಿರೀಕ್ಷಿತ ಎಂದು ಬಣ್ಣಿಸಿದ್ದಾರೆ ಮತ್ತು ಚುನಾವಣಾ ಸೋಲನ್ನು ಪರಿಶೀಲಿಸಲು ಇಂದು ಕಾಂಗ್ರೆಸ್ ನಿಯೋಗವನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದೇವೆ" ಎಂದು ಚುನಾವಣಾ ಆಯೋಗ ಹೇಳಿದೆ.
ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಚುನಾವಣಾ ಆಯೋಗವು ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದು, ಚುನಾವಣೆಯ ಫಲಿತಾಂಶವನ್ನು ಪರಿಶೀಲಿಸಲು ಕಾಂಗ್ರೆಸ್ ಪಕ್ಷದ ನಿಯೋಗವನ್ನು ಭೇಟಿ ಮಾಡಲು ಒಪ್ಪಿಗೆ ನೀಡಿದೆ. “ಈ ಮಧ್ಯೆ ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ಆಯೋಗವು ಗಮನಿಸಿದೆ. ನೀವು ಹರಿಯಾಣದ ಫಲಿತಾಂಶಗಳನ್ನು ಅನಿರೀಕ್ಷಿತ ಎಂದು ಬಣ್ಣಿಸಿದ್ದೀರಿ ಮತ್ತು INC ಅದನ್ನು ವಿಶ್ಲೇಷಿಸಲು ಬಯಸುವುದರಿಂದ ನಿಮ್ಮ ಭೇಟಿಗೆ ಅವಕಾಶ ನೀಡಲಾಗಿದೆ” ಎಂದು ಚುನಾವಣಾ ಆಯೋಗ ಖರ್ಗೆಗೆ ಪತ್ರ ಬರೆದಿದೆ.
“ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಹೇಳಿಕೆಯು ಚುನಾವಣೆಯ ಫಲಿತಾಂಶದ ಬಗ್ಗೆ ಪಕ್ಷದ ಅಧಿಕೃತ ಅಭಿಪ್ರಾಯವಾಗಿದೆ. ಚುನಾವಣಾ ಆಯೋಗ ಇಂದು ಸಂಜೆ 6 ಗಂಟೆಗೆ ಕಾಂಗ್ರೆಸ್ ನಿಯೋಗವನ್ನು ಭೇಟಿ ಮಾಡಲು ಒಪ್ಪಿಗೆ ನೀಡಿದೆ” ಎಂದು ಚುನಾವಣಾ ಆಯೋಗ ಪತ್ರದಲ್ಲಿ ತಿಳಿಸಿದೆ.
ಇದನ್ನೂ ಓದಿ: ‘ಹರಿಯಾಣದ ಗೆಲುವು ದೇಶಾದ್ಯಂತ ಪ್ರತಿಧ್ವನಿಸಲಿದೆ’; ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು
ಹಿರಿಯ ಕಾಂಗ್ರೆಸ್ ನಾಯಕರ ‘ಹರಿಯಾಣ ಚುನಾವಣೆಯ ಫಲಿತಾಂಶಗಳು ಸ್ವೀಕಾರಾರ್ಹವಲ್ಲ’ ಎಂಬ ಹೇಳಿಕೆಯನ್ನು ಭಾರತೀಯ ಚುನಾವಣಾ ಆಯೋಗ ದೇಶದ ಪ್ರಜಾಪ್ರಭುತ್ವ ಪರಂಪರೆಯಲ್ಲಿ ಕೇಳಿರದ ಮತ್ತು ವಾಕ್ ಸ್ವಾತಂತ್ರ್ಯದ ಕಾನೂನುಬದ್ಧ ಭಾಗದಿಂದ ದೂರವಿದೆ ಎಂದು ಬಣ್ಣಿಸಿದೆ.
Election Commission writes to Congress President Mallikarjun Kharge.
“The Commission has meanwhile noted the statements from your good self and the Leader of Opposition which have termed the Haryana results as “unexpected” and that the INC proposes to analyse the same and… pic.twitter.com/QWJKBm0HdD
— ANI (@ANI) October 9, 2024
ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಗಮನಿಸಿರುವುದಾಗಿ ಚುನಾವಣಾ ಆಯೋಗವು ಹೇಳಿದೆ. ಹರಿಯಾಣದ ಫಲಿತಾಂಶಗಳನ್ನು “ಅನಿರೀಕ್ಷಿತ” ಎಂದು ಬಣ್ಣಿಸಿದೆ. ಕಾಂಗ್ರೆಸ್ ಪಕ್ಷವು ಅದನ್ನು ವಿಶ್ಲೇಷಿಸಲು ಮತ್ತು ಅದರ ದೂರುಗಳೊಂದಿಗೆ ಇಸಿಯನ್ನು ಸಂಪರ್ಕಿಸಲು ಪ್ರಸ್ತಾಪಿಸುತ್ತದೆ. ಹೀಗಾಗಿ, “ಚುನಾವಣಾ ಫಲಿತಾಂಶಗಳು ಸ್ವೀಕಾರಾರ್ಹವಲ್ಲ” ಎಂಬ ಹೇಳಿಕೆಯನ್ನು ನೀಡಿದವರು ಸೇರಿದಂತೆ 12 ಸದಸ್ಯರು ಚುನಾವಣಾ ಆಯೋಗವನ್ನು ಭೇಟಿಯಾಗಲಿದ್ದಾರೆ.
ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್‌ಗಾದ ಸೋಲಿನ ಗಾಯಕ್ಕೆ ಉಪ್ಪು ಸವರಿದ ಇಂಡಿಯ ಬ್ಲಾಕ್ ಮಿತ್ರಪಕ್ಷಗಳು
ಎಲ್ಲಾ ಎಕ್ಸಿಟ್ ಪೋಲ್‌ಗಳಿಂದ ಕಾಂಗ್ರೆಸ್ 50ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಹರಿಯಾಣ ರಾಜ್ಯದಲ್ಲಿ ಸರ್ಕಾರವನ್ನು ರಚಿಸುತ್ತದೆ ಎಂದು ಭವಿಷ್ಯ ನುಡಿದಿತ್ತು. ಆದರೆ ವಾಸ್ತವವಾಗಿ ಬಹುಮತದ ಕೊರತೆಯಿಂದ ಕೇವಲ 37 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ, ಈ ಫಲಿತಾಂಶಗಳನ್ನು ‘ಅನಿರೀಕ್ಷಿತ’ ಎಂದು ಕರೆದ ರಾಹುಲ್ ಗಾಂಧಿ, “ಹಲವು ವಿಧಾನಸಭಾ ಕ್ಷೇತ್ರಗಳಿಂದ ಬರುವ ದೂರುಗಳ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ (ಇಸಿ) ತಿಳಿಸುತ್ತೇವೆ” ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗವು ಇಂದು ಸಂಜೆ 6 ಗಂಟೆಗೆ 12 ಸದಸ್ಯರ ಕಾಂಗ್ರೆಸ್ ನಿಯೋಗವನ್ನು ಭೇಟಿ ಮಾಡಿ ಪಕ್ಷದ ಅಸಮಾಧಾನವನ್ನು ಪರಿಹರಿಸಲು ಒಪ್ಪಿಗೆ ನೀಡಿದೆ.
ಜೈರಾಮ್ ರಮೇಶ್, ಪವನ್ ಖೇರಾ, ಕೆ.ಸಿ ವೇಣುಗೋಪಾಲ್, ಅಶೋಕ್ ಗೆಹ್ಲೋಟ್, ಭೂಪಿಂದರ್ ಸಿಂಗ್ ಹೂಡಾ, ಪ್ರತಾಪ್ ಸಿಂಗ್ ಬಾಜ್ವಾ ಮತ್ತು ಡಾ. ಅಭಿಷೇಕ್ ಮನು ಸಿಂಘ್ವಿ ಈ ನಿಯೋಗದ ಭಾಗವಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ