ದೆಹಲಿ: ನಾಮನಿರ್ದೇಶಿತ ಸದಸ್ಯರಿಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡುವುದರ ಕುರಿತು ಎಎಪಿ (AAP) ಗದ್ದಲವುಂಟು ಮಾಡಿದ್ದು, ದೆಹಲಿ ಮುನ್ಸಿಪಲ್ ಹೌಸ್ (Municipal House) ಒಂದು ತಿಂಗಳಲ್ಲಿ ಮೂರನೇ ಬಾರಿಗೆ ಮೇಯರ್ ಅನ್ನು ಆಯ್ಕೆ ಮಾಡಲು ವಿಫಲವಾಗಿದೆ. ದೆಹಲಿಯ ಮುನ್ಸಿಪಲ್ ಹೌಸ್ ಅನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಗಿದೆ ಎಂದು ಅಧ್ಯಕ್ಷ ಸತ್ಯ ಶರ್ಮಾ ತಿಳಿಸಿದ್ದಾರೆ. ಅರ್ಧ ಗಂಟೆ ತಡವಾಗಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCDmunicipal) ಸದನವು ಬೆಳಿಗ್ಗೆ 11:30ರ ಸುಮಾರಿಗೆ ಸಭೆ ಸೇರಿದ ನಂತರ, ಶರ್ಮಾ ಅವರು ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿ ಸದಸ್ಯರ ಹುದ್ದೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿದರು. “ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಮತ ಚಲಾಯಿಸಲು ಆಲ್ಡರ್‌ಮೆನ್‌ಗೆ ಅವಕಾಶ ನೀಡಲಾಗುತ್ತದೆ” ಎಂದು ಅವರು ಹೇಳಿದಾಗ ಇದಕ್ಕೆ ಆಮ್ ಆದ್ಮಿ ಪಕ್ಷ ಆಕ್ಷೇಪ ವ್ಯಕ್ತ ಪಡಿಸಿದೆ.
ಎಎಪಿ ಕೌನ್ಸಿಲರ್‌ಗಳು ಪ್ರತಿಭಟನೆ ನಡೆಸಿದ್ದು, ಆಲ್ಡರ್‌ಮೆನ್ ಮತ ಚಲಾಯಿಸುವಂತಿಲ್ಲ ಎಂದು ಎಎಪಿ ನಾಯಕ ಮುಖೇಶ್ ಗೋಯೆಲ್ ಹೇಳಿದ್ದಾರೆ. ಜನರು ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದು ಅವರ ಸೇವೆ ಮಾಡಲು, ಚುನಾವಣೆ ನಡೆಯಲಿ ಎಂದು ಶರ್ಮಾ ಹೇಳಿದ್ದಾರೆ. ಇದಾದ ನಂತರ ಸದನವನ್ನು ಕೆಲಕಾಲ ಮುಂದೂಡಲಾಯಿತು.
#WATCH | MCD mayor election called off for the third time after ruckus in the Delhi Civic Centre. pic.twitter.com/irCfHIoycP
— ANI (@ANI) February 6, 2023
ಡಿಸೆಂಬರ್ 4 ರಂದು ಮುನ್ಸಿಪಲ್ ಚುನಾವಣೆಯ ನಂತರ ಇದು ಸದನದ ಮೂರನೇ ಅಧಿವೇಶನವಾಗಿದೆ.
ಜನವರಿ 6 ಮತ್ತು ಜನವರಿ 24 ರಂದು ನಡೆದ ಮೊದಲ ಎರಡು ಅಧಿವೇಶನಗಳು ನಡೆದಿತ್ತು. ಈ ಅಧಿವೇಶನಗಳಲ್ಲಿ ಬಿಜೆಪಿ ಮತ್ತು ಎಎಪಿ ಸದಸ್ಯರ ನಡುವಿನ ಗದ್ದಲ ಮತ್ತು ತೀವ್ರ ಮಾತಿನ ಚಕಮಕಿಯ ನಂತರ ಮೇಯರ್ ಅನ್ನು ಆಯ್ಕೆ ಮಾಡದೆ ಸಭಾಧ್ಯಕ್ಷರು ಮುಂದೂಡಿದರು.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (DMC) ಕಾಯಿದೆ, 1957 ರ ಪ್ರಕಾರ, ನಾಗರಿಕ ಚುನಾವಣೆಯ ನಂತರ ಸದನದ ಮೊದಲ ಅಧಿವೇಶನದಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯಾಗಬೇಕು. ಆದರೆ, ಮುನ್ಸಿಪಲ್ ಚುನಾವಣೆ ನಡೆದು ಎರಡು ತಿಂಗಳಾದರೂ ದೆಹಲಿಗೆ ಮೇಯರ್ ಸಿಕ್ಕಿಲ್ಲ.
ಎಎಪಿ ಈ ಹಿಂದೆ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ನಗರಾಡಳಿತವನ್ನು ಸಂಪರ್ಕಿಸದೆ ಎಂಸಿಡಿ ಮನೆಗೆ 10 ಆಲ್ಡರ್‌ಮೆನ್‌ಗಳನ್ನು ನಾಮನಿರ್ದೇಶನ ಮಾಡಿರುವುದನ್ನು ಆಕ್ಷೇಪಿಸಿತ್ತು. ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿಯ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಆಲ್ಡರ್‌ಮೆನ್‌ಗಳನ್ನು ಡಿಬಾರ್ ಮಾಡುವಂತೆ ಕೋರಿ ಭಾನುವಾರ ಎಎಪಿ ಕೌನ್ಸಿಲರ್‌ಗಳು ಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ. ಇದು ಸಂಭವಿಸಿದರೆ ಅದು ದೆಹಲಿಯ ಜನರಿಗೆ ಅವಮಾನವಾಗಿದೆ ಎಂದು ಎಎಪಿ ಹೇಳಿದೆ. ನಾಮನಿರ್ದೇಶಿತ ಸದಸ್ಯರು ಸಂವಿಧಾನ ಮತ್ತು ಡಿಎಂಸಿ ಕಾಯ್ದೆಗೆ ಅನುಗುಣವಾಗಿ ಮತ ಚಲಾಯಿಸುವಂತಿಲ್ಲ ಎಂದು ಎಎಪಿ ಕೌನ್ಸಿಲರ್‌ಗಳು ವಾದಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ