ಮಗನ ಇನ್ಶೂರೆನ್ಸ್ ಹಣಕ್ಕಾಗಿ ಪತ್ನಿಯನ್ನು ಕೊಂದು ಪತಿ ಎಸ್ಕೇಪ್.. ಆರೋಪಿ ಪತ್ತೆಗಾಗಿ ಪೊಲೀಸರ ತಲಾಶ್

|

Updated on: Apr 13, 2021 | 8:01 AM

ಆ ಅಯೋಗ್ಯ ಪತ್ನಿ ಜೊತೆ ನೆಟ್ಟಗೆ ಸಂಸಾರ ಮಾಡಿಕೊಂಡು ಇರೋದನ್ನ ಬಿಟ್ಟು ದುಶ್ಚಟದ ದಾಸನಾಗಿದ್ದ. ಸಾಲದಕ್ಕೆ ಪರ ಸ್ತ್ರೀ ವ್ಯಾಮೋಹ ಬೇರೆ. ಹೀಗೆ ಹೆಂಡತಿ, ಮಕ್ಕಳನ್ನು ಅನಾಥ ಮಾಡಿದ್ದ ಆತ ಹಣಕ್ಕಾಗಿ ಮರಳಿ ಬಂದಿದ್ದ. ಆದರೆ ವಾಪಸ್ ಬಂದವನು ಎಸಗಿದ್ದು ಮಾತ್ರ ಘನಘೋರ ಕೃತ್ಯ.

ಮಗನ ಇನ್ಶೂರೆನ್ಸ್ ಹಣಕ್ಕಾಗಿ ಪತ್ನಿಯನ್ನು ಕೊಂದು ಪತಿ ಎಸ್ಕೇಪ್.. ಆರೋಪಿ ಪತ್ತೆಗಾಗಿ ಪೊಲೀಸರ ತಲಾಶ್
ಕೊಲೆಯಾದ ಘಟನಾ ಸ್ಥಳ
Follow us on

ಆಂಧ್ರ ಪ್ರದೇಶದ ಕಡಪದಲ್ಲಿ ಪತಿ ಪತ್ನಿಯನ್ನೇ ಕೊಂದ ಘಟನೆ ನಡೆದಿದೆ. ಕೊಲೆಯಾದ ಮಹಿಳೆ ಹೆಸರು ಬೇಬಿ ಜಾನ್. ಈ ಮಹಿಳೆ ಪತಿ ದುಶ್ಚಟಗಳ ದಾಸನಾಗಿದ್ದ. ಕಡೆಗೆ ಮನೆಯವರನ್ನೂ ಬಿಟ್ಟು ಹೋಗಿದ್ದನಂತೆ. ಹೀಗಾಗಿ ಮಕ್ಕಳು, ತಾಯಿ ಎಲ್ಲರೂ ಸೇರಿಕೊಂಡು ದುಡಿದು ಮನೆ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಬೇಬಿ ಜಾನ್​ಳ ಮಗ ಅಪಘಾತದಲ್ಲಿ ಮೃತಪಟ್ಟಿದ್ದ.

ಆತನ ಇನ್ಶೂರೆನ್ಸ್ ಹಣಕ್ಕಾಗಿ ಬೇಬಿ ಜಾನ್ ಪತಿ ದಸ್ತಗೀರ್ ಮರಳಿ ಮನೆಗೆ ಬಂದಿದ್ದನಂತೆ. ಅಲ್ಲದೆ ಮನೆಯವರಿಗೆ ಕಾಟ ಕೊಡುತ್ತಾ, ಹಣ ತನಗೆ ಬೇಕು ಅಂತಾ ಪೀಡಿಸುತ್ತಿದ್ದ. ಆದರೆ ಹಣ ಕೊಡದೇ ಇದ್ದಾಗ ಪತ್ನಿ ಮೇಲೆ ಅಕ್ರಮ ಸಂಬಂಧದ ಆರೋಪ ಹೊರಿಸಿದ್ದ. ಕಡೆಗೆ ಹೆಂಡತಿಯನ್ನೇ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಕೊಲೆಮಾಡಿದ ಬಳಿಕ ಹೊರಗೆ ಬಂದು ತಾನೇ ತನ್ನ ಹೆಂಡತಿಯನ್ನ ಕೊಂದಿದ್ದು ಎಂದು ಹೇಳಿರುವ ದಸ್ತಿಗೀರ್ ಎಸ್ಕೇಪ್ ಆಗಿದ್ದಾನೆ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಕಡಪ

ಇದನ್ನೂ ಓದಿ: Husband Kills Wife: ಬಾಯಿಗೆ ಬಟ್ಟೆ ಇಟ್ಟು ಪತ್ನಿ ಕೊಲೆ ಮಾಡಿದ ಪತಿರಾಯ ಅರೆಸ್ಟ್

(Husband Kills His Wife For sons Insurance Money in Kadapa Andhra Pradesh)