ದಾಮೋಹ್ (ಮಧ್ಯಪ್ರದೇಶ): ಮಧ್ಯಪ್ರದೇಶದ (Madhya Pradesh) ದಾಮೋಹ್ (Damoh) ಜಿಲ್ಲೆಯಲ್ಲಿ ಸರಪಂಚ್ ಆಗಿ ಗೆದ್ದಿದ್ದು ಮಹಿಳೆ. ಆದರೆ ಕಚೇರಿಯಲ್ಲಿ ಅಧಿಕಾರ ವಹಿಸುವ ಮುನ್ನ ಪ್ರಮಾಣವಚನ ಸ್ವೀಕರಿಸಿದ್ದು ಆಕೆಯ ಪತಿ. ಇಲ್ಲಿನ ಗೈಸಾಬಾದ್ ಪಂಚಾಯತ್ನಲ್ಲಿ ಈ ಘಟನೆ ನಡೆದಿದ್ದು ಜಿಲ್ಲಾಡಳಿತ ವರದಿ ಕೇಳಿದೆ. ಗೈಸಾಬಾದ್ ಪಂಚಾಯತ್ನಲ್ಲಿ ಮೂರು ಹಂತದಲ್ಲಿ ಪಂಚಾಯತ್ ಚುನಾವಣೆ ನಡೆದಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಅಲ್ಲಿನ ಸರಪಂಚ್ ಆಗಿ ಗೆದ್ದಿದ್ದು, ಇನ್ನು ಕೆಲವು ಮಹಿಳೆಯರು ಕೂಡಾ ಚುನಾವಣೆ ಗೆದ್ದಿದ್ದರು. ಆದರೆ ಪ್ರಮಾಣ ವಚನ ಸ್ವೀಕರಿಸುವ ವೇಳೆ ಈ ಮಹಿಳೆಯರು ಯಾರೂ ವೇದಿಕೆ ಮೇಲಿರಲಿಲ್ಲ. ಅವರ ಬದಲಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಅವರ ಗಂಡಂದಿರು. ಚುನಾಯಿತ ಸರಪಂಚ್ ಮತ್ತು ಇತರ ಮಹಿಳೆಯರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಾಗುವುದು, ಇದಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Mockery of the Panchayat Raj system in MP, after Sagar, now in Damoh husband of newly elected woman sarpanch took the oath of office @ndtv @ndtvindia pic.twitter.com/VvC4Z2bm3f
— Anurag Dwary (@Anurag_Dwary) August 5, 2022
ಆದಾಗ್ಯೂ ,ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಮಹಿಳೆಯರ ಗಂಡಂದಿರಿಗೆ ಪ್ರಮಾಣ ವಚನ ಸ್ವೀಕರಿಸಲು ಅನುಮತಿಸಿದ್ದಾರೆ ಎಂದು ಹೇಳಿದ್ದು, ಆ ಅಧಿಕಾರಿಗಳು ಈಗ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Fri, 5 August 22