ಕುಡಿದ ಅಮಲಿನಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಕಾರು ಓಡಿಸಿದ ಪೊಲೀಸ್​​ ಇನ್ಸ್​​ಪೆಕ್ಟರ್: ಆಟೋಗೆ ಡಿಕ್ಕಿ, ಮೂವರಿಗೆ ಗಾಯ

|

Updated on: Aug 26, 2023 | 3:51 PM

ಕಂಠಪೂರ್ತಿ ಮದ್ಯ ಸೇವಿಸಿದ್ದ ಇನ್ಸ್ ಪೆಕ್ಟರ್.. ಅಪಘಾತದ ವೇಳೆ ಅತಿಯಾಗಿ ಮದ್ಯ ಸೇವಿಸಿದ್ದನ್ನು ಸ್ಥಳೀಯ ಪೊಲೀಸರು ಪತ್ತೆ ಮಾಡಿದ್ದಾರೆ. ಬ್ರೆತ್ ಅನಲೈಸರ್ ಪರೀಕ್ಷೆಯಲ್ಲಿ ಇನ್ಸ್ ಪೆಕ್ಟರ್ ಮದ್ಯ ಸೇವನೆ ಪ್ರಮಾಣ 210 ಅಂಕನಷ್ಟಿತ್ತು. ಶ್ರೀನಿವಾಸ್ ಪ್ರಸ್ತುತ ಪೊಲೀಸ್ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಐಟಿ ಸೆಲ್ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕುಡಿದ ಅಮಲಿನಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಕಾರು ಓಡಿಸಿದ ಪೊಲೀಸ್​​ ಇನ್ಸ್​​ಪೆಕ್ಟರ್: ಆಟೋಗೆ ಡಿಕ್ಕಿ, ಮೂವರಿಗೆ ಗಾಯ
ಕುಡಿದ ಅಮಲಿನಲ್ಲಿ ಕಾರು ಓಡಿಸಿದ ಪೊಲೀಸ್​​ ಇನ್ಸ್​​ಪೆಕ್ಟರ್​​​, ಆಟೋಗೆ ಡಿಕ್ಕಿ
Follow us on

ಹೈದರಾಬಾದ್, ಆಗಸ್ಟ್ 26: ಅವರೊಬ್ಬ ಜವಾಬ್ದಾರಿಯುತ, ಶಿಸ್ತಿಗೆ ಹೆಸರಾದ ಇಲಾಖೆಯ ಹಿರಿಯ ಅಧಿಕಾರಿ.. ಆದರೆ ಕಂಠಪೂರ್ತಿ ಕುಡಿದು (Drink and Drive) ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಓಡಿಸಿ ತರಕಾರಿ ಹೊತ್ತ ಆಟೋಗೆ (Auto) ಡಿಕ್ಕಿ ಹೊಡೆದಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಜೊತೆಗೆ ಇಬ್ಬರು ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ (Accident) ವೇಳೆ ವಾಹನವನ್ನು ಪೊಲೀಸ್ ಇನ್ಸ್‌ಪೆಕ್ಟರ್ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಹೈದರಾಬಾದ್ ನ ಬೊಳ್ಳಾರಂ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಟಿ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿ (Hyderabad CID Police Inspector) ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ್ ಕುಡಿದು ವಾಹನ ಚಲಾಯಿಸುತ್ತಿದ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಶ್ರೀನಿವಾಸ್ ಕುಡಿದ ಅಮಲಿನಲ್ಲಿ ತರಕಾರಿ ತುಂಬಿಕೊಂಡು ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಇನ್ಸ್ ಪೆಕ್ಟರ್ ಶ್ರೀನಿವಾಸ್ ಸೇರಿ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್​ ಸಿಐಡಿ ವಿಭಾಗಕ್ಕೆ ಸೇರಿದ ಈ ವಾಹನದ ಮೇಲೆ ಆರು ಟ್ರಾಫಿಕ್ ಉಲ್ಲಂಘನೆಗಳ ವಿರುದ್ಧ ದೂರು ದಾಖಲಿಸಲಾಗಿದೆ. ಹೀಗೆ ಕುಡಿದು ವಾಹನ ಚಾಲನೆ ಮಾಡಿದ್ದು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಬೇಕಾದ ಪೊಲೀಸರೇ ಟೀಕೆಗೆ ಗುರಿಯಾಗಿದ್ದಾರೆ. ಅಪಘಾತಕ್ಕೆ ಒಳಗಾದ ಕಾರಿನ ಸಂಖ್ಯೆ TS 09 EY 3330. ವಾಹನವು ಮಿತಿಮೀರಿದ ವೇಗದಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಂಠಪೂರ್ತಿ ಮದ್ಯ ಸೇವಿಸಿದ್ದ ಇನ್ಸ್ ಪೆಕ್ಟರ್.. ಅಪಘಾತದ ವೇಳೆ ಅತಿಯಾಗಿ ಮದ್ಯ ಸೇವಿಸಿದ್ದನ್ನು ಸ್ಥಳೀಯ ಪೊಲೀಸರು ಪತ್ತೆ ಮಾಡಿದ್ದಾರೆ. ಬ್ರೆತ್ ಅನಲೈಸರ್ ಪರೀಕ್ಷೆಯಲ್ಲಿ ಇನ್ಸ್ ಪೆಕ್ಟರ್ ಮದ್ಯ ಸೇವನೆ ಪ್ರಮಾಣ 210 ಅಂಕನಷ್ಟಿತ್ತು. ಶ್ರೀನಿವಾಸ್ ಪ್ರಸ್ತುತ ಪೊಲೀಸ್ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಐಟಿ ಸೆಲ್ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದೇ ವೇಳೆ ಈ ದುರ್ಘಟನೆ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಜವಾಬ್ದಾರಿಯುತ ಅಧಿಕಾರಿ ಕುಡಿದು ವಾಹನ ಚಲಾಯಿಸುತ್ತಿದ್ದಾರೆ ಎಂದು ಹಲವರು ಟೀಕಿಸುತ್ತಿದ್ದು, ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

 ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Sat, 26 August 23