Video: ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಹೈದರಾಬಾದ್‌ನ ಹೋಟೆಲ್ ಸಿಬ್ಬಂದಿ ಆಹಾರ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಸುರಿದ ಅಮಾನವೀಯ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಇಬ್ರಾಹಿಂ ಖಾನ್ ಈ ಕೃತ್ಯವನ್ನು ಬಹಿರಂಗಪಡಿಸಿದ್ದಾರೆ. ಸಿಬ್ಬಂದಿಯ ನಿರ್ದಯಿ ವರ್ತನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆಗೆ ಒಳಗಾಗಿದ್ದು, ಮಾನವೀಯತೆ ಮರೆತ ಘಟನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
ಹೈದರಾಬಾದ್: ಹೋಟೆಲ್ ಒಂದಕ್ಕೆ ಆಹಾರದ ಆಸೆಯಿಂದ ಬಂದ ಭಿಕ್ಷುಕನ ಮೇಲೆ ಹೋಟೆಲ್ನ ಸಿಬ್ಬಂದಿ ಬಿಸಿನೀರು ಸುರಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈ ಅಮಾನವೀಯ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಇಬ್ರಾಹಿಂ ಖಾನ್ ಈ ಕೃತ್ಯವನ್ನು ವಿಡಿಯೋ ಮಾಡಿ ಬಹಿರಂಗಪಡಿಸಿದ ಬೆನ್ನಲ್ಲೇ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಬಿಸಿನೀರಿನಿಂದ ಕಂಗೆಟ್ಟು ನೋವಿನಿಂದ ನರಳುತ್ತಿದ್ದ ಆ ವ್ಯಕ್ತಿಯ ಪರವಾಗಿ ಹೋಟೆಲ್ನ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, “ಆತ ಪ್ರತಿದಿನ ಗ್ರಾಹಕರಿಗೆ ತೊಂದರೆ ನೀಡುತ್ತಿದ್ದ” ಎಂಬ ಬೇಜವಾಬ್ದಾರಿಯ ಸಮರ್ಥನೆ ಕೇಳಿಬಂದಿದೆ. “ಒಂದು ವೇಳೆ ತೊಂದರೆ ನೀಡುತ್ತಿದ್ದರೆ ಆತನನ್ನು ಬೆದರಿಸಿ ಕಳುಹಿಸಬೇಕಿತ್ತು ಅಥವಾ ಪೊಲೀಸರಿಗೆ ದೂರು ನೀಡಬೇಕಿತ್ತು, ಅದನ್ನು ಬಿಟ್ಟು ಇಷ್ಟು ಕ್ರೂರವಾಗಿ ವರ್ತಿಸುವುದು ಸರಿಯೇ?” ಎಂದು ಸಾಮಾಜಿಕ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಾಗ ಹೋಟೆಲ್ ಸಿಬ್ಬಂದಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ. ಸದ್ಯ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

