ಮೆಟ್ರೋದಲ್ಲೂ ಬಂತು ಗ್ರೀನ್ ಕಾರಿಡಾರ್, ರವಾನೆಯಾಯ್ತು ಹೃದಯ: ಎಲ್ಲಿಂದ ಎಲ್ಲಿಗೆ?

|

Updated on: Feb 02, 2021 | 6:52 PM

ಹೃದಯವನ್ನು ಸಾಗಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವರದಾನವಾಗಿದೆ. ಅಲ್ಲದೆ, ಮೆಟ್ರೋ ಸೇವೆಗೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.

ಮೆಟ್ರೋದಲ್ಲೂ ಬಂತು ಗ್ರೀನ್ ಕಾರಿಡಾರ್, ರವಾನೆಯಾಯ್ತು ಹೃದಯ: ಎಲ್ಲಿಂದ ಎಲ್ಲಿಗೆ?
ಮೆಟ್ರೋ ಮೂಲಕ ಸಾಗಿಸಾದ ಹೃದಯ
Follow us on

ಆರೋಗ್ಯ ತುರ್ತು ಸೇವೆ ಸಮಯದಲ್ಲಿ ಗ್ರೀನ್ ಕಾರಿಡಾರ್ (ಜೀರೋ ಟ್ರಾಫಿಕ್​ ರಸ್ತೆ) ಮೂಲಕ ವ್ಯಕ್ತಿ ಅಥವಾ ವ್ಯಕ್ತಿಯ ಅಂಗವನ್ನು ಆಸ್ಪತ್ರೆಗೆ ಸಾಗಿಸಲಾಗುತ್ತದೆ.  ಈಗ ಮೆಟ್ರೋಗೂ ಗ್ರೀನ್ ಕಾರಿಡಾರ್ ಬಂದಿದ್ದು, ಕಸಿ ಮಾಡಲು ಹೃದಯ ರವಾನೆ ಮಾಡಲಾಗಿದೆ! ಕೇವಲ 30 ನಿಮಿಷಗಳಲ್ಲಿ ಹೃದಯ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆ ತಲುಪಿದೆ.

ಈ ಘಟನೆ ನಡೆದಿದ್ದು ಹೈದರಾಬಾದ್​​ನಲ್ಲಿ. ಎಲ್​ಬಿ ನಗರದ ಕಾಮಿನೇನಿ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ. ಈತನ ಹೃದಯವನ್ನು ಜುಬಿಲಿ ಹಿಲ್ಸ್​ನ ಅಪೊಲೊ ಆಸ್ಪತ್ರೆಗಳಿಗೆ ಕಸಿ ಮಾಡಲು ರವಾನೆ ಮಾಡಬೇಕಿತ್ತು. ಎರಡೂ ಆಸ್ಪತ್ರೆಗಳ ನಡುವಿನ ಅಂತರ 21 ಕಿ.ಮೀ. ರಸ್ತೆಯಲ್ಲಿ ಹೋದರೆ ಏನಿಲ್ಲವೆಂದರೂ ಒಂದೂವರೆ ಗಂಟೆ ಬೇಕು. ಹೀಗಾಗಿ, ಅಲ್ಲಿರುವ ವೈದ್ಯರು ಮೆಟ್ರೋ ಮೂಲಕ ಹೃದಯ ಸಾಗಿಸಲು ಮುಂದಾಗಿದ್ದರು.

ಎಲ್​ಬಿ ನಗರದ ಸಮೀಪ ಇರುವ ನಾಗೋಲ್ ಮೆಟ್ರೊ ನಿಲ್ದಾಣದಿಂದ ಹೃದಯವನ್ನು ಜುಬಿಲಿ ಹಿಲ್ಸ್​ಗೆ ತೆಗೆದುಕೊಂಡು ಹೋಗಲಾಗಿತ್ತು. ಈ ಮೆಟ್ರೋ ಒಂದೇ ಒಂದು ಕಡೆಯೂ ನಿಲ್ಲದೆ ನೇರವಾಗಿ ಜುಬಿಲಿ ಹಿಲ್ಸ್ ತಲುಪಿದೆ. ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ಹೃದಯವನ್ನು ಅಪೊಲೊ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೇವಲ 30 ನಿಮಿಷಗಳಲ್ಲಿ ಈ ಹೃದಯ ಆಸ್ಪತ್ರೆ ತಲುಪಿದೆ!

ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವರದಾನವಾಗಿದೆ. ಅಲ್ಲದೆ, ಮೆಟ್ರೋ ಸೇವೆಗೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.

ನಿವೃತ್ತರಾದ ಮರುದಿನವೇ.. ಕೋಲಾರದ ಯೋಧ ಹೃದಯಾಘಾತದಿಂದ ಸಾವು

Published On - 6:50 pm, Tue, 2 February 21