ತಹಶೀಲ್ದಾರ್ ವಿಜಯಾ ಸಜೀವ ದಹನ ಪ್ರಕರಣ: ಆರೋಪಿಯೂ ಸತ್ತ

|

Updated on: Nov 07, 2019 | 2:56 PM

ಹೈದರಾಬಾದ್​: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾ ಪುರಮೇಟದಲ್ಲಿ ನಡೆದಿದ್ದ ತಹಶೀಲ್ದಾರ್​ ವಿಜಯಾ ರೆಡ್ಡಿ ಹತ್ಯೆ ಪ್ರಕರಣದ ಆರೋಪಿ ಸಹ ಸುಟ್ಟಗಾಯಗಳ ಫಲವಾಗಿ ಇಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಆರೋಪಿ ಸುರೇಶ್ ತಹಶೀಲ್ದಾರ್‌ಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ. ಆ ವೇಳೆ, ತಹಶೀಲ್ದಾರ್‌ ವಿಜಯಾ ಅವರ ವಾಹನ ಚಾಲಕ ಅವರ ನೆರವಿಗೆ ಧಾವಿಸಿದ್ದ. ಆ ವೇಳೆ ಆತನಿಗೂ ಸುಟ್ಟಗಾಯಗಳಾಗಿ ಆಸ್ಪತ್ರೆ ಸೇರಿದ್ದ. ಆದ್ರೆ ಚಿಕಿತ್ಸೆ ಫಲಿಸದೆ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಡ್ರೈವರ್​ ಸಾವನ್ನಪ್ಪಿದ್ದ. ಇನ್ನು ಘಟನೆ ವೇಳೆ ಆರೋಪಿಗೂ ತೀವ್ರ ರೀತಿಯಲ್ಲಿ […]

ತಹಶೀಲ್ದಾರ್ ವಿಜಯಾ ಸಜೀವ ದಹನ ಪ್ರಕರಣ: ಆರೋಪಿಯೂ ಸತ್ತ
Follow us on

ಹೈದರಾಬಾದ್​: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾ ಪುರಮೇಟದಲ್ಲಿ ನಡೆದಿದ್ದ ತಹಶೀಲ್ದಾರ್​ ವಿಜಯಾ ರೆಡ್ಡಿ ಹತ್ಯೆ ಪ್ರಕರಣದ ಆರೋಪಿ ಸಹ ಸುಟ್ಟಗಾಯಗಳ ಫಲವಾಗಿ ಇಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

ಆರೋಪಿ ಸುರೇಶ್ ತಹಶೀಲ್ದಾರ್‌ಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ. ಆ ವೇಳೆ, ತಹಶೀಲ್ದಾರ್‌ ವಿಜಯಾ ಅವರ ವಾಹನ ಚಾಲಕ ಅವರ ನೆರವಿಗೆ ಧಾವಿಸಿದ್ದ. ಆ ವೇಳೆ ಆತನಿಗೂ ಸುಟ್ಟಗಾಯಗಳಾಗಿ ಆಸ್ಪತ್ರೆ ಸೇರಿದ್ದ. ಆದ್ರೆ ಚಿಕಿತ್ಸೆ ಫಲಿಸದೆ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಡ್ರೈವರ್​ ಸಾವನ್ನಪ್ಪಿದ್ದ. ಇನ್ನು ಘಟನೆ ವೇಳೆ ಆರೋಪಿಗೂ ತೀವ್ರ ರೀತಿಯಲ್ಲಿ ಸುಟ್ಟಗಾಯಗಳಾಗಿದ್ದವು. ಉಸ್ಮಾನಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ ಇಂದು ಸಾವಿಗೀಡಾಗಿದ್ದಾನೆ.

Published On - 2:00 pm, Thu, 7 November 19