ಕಲ್ಲು ತುಂಬಿದ್ದ ಟ್ರ್ಯಾಕ್ಟರ್-ಬೊಲೆರೊ ಡಿಕ್ಕಿ: ವಿಠ್ಠಲನ ದರ್ಶನಕ್ಕೆ ಹೊರಟ 5 ಭಕ್ತರು ಸ್ಥಳದಲ್ಲೇ ಸಾವು

sadhu srinath

sadhu srinath |

Updated on: Nov 08, 2019 | 1:29 PM

ಮಾಂಡೋಳಿ, ಮಹಾರಾಷ್ಟ್ರ: ಕಲ್ಲು ತುಂಬಿದ್ದ ಟ್ರ್ಯಾಕ್ಟರ್​ಗೆ ಬೊಲೆರೊ ಡಿಕ್ಕಿ ಹೊಡೆದ ಪರಿಣಾಮ ಬೊಲೆರೊ ವಾಹನದಲ್ಲಿ ಪ್ರಯಾಣಿಸ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಮಹಾರಾಷ್ಟ್ರದ ಸಾಂಗೋಲ್ಯಾ ಗ್ರಾಮದ ಬಳಿ ಬೆಳಗಿನ ಜಾವ ಐದು ಗಂಟೆಯಲ್ಲಿ ಈ ಭೀಕರ ಅಪಘಾತವಾಗಿದೆ. ಡಿಕ್ಕಿಯ ರಭಸಕ್ಕೆ ಐದೂ ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ಸಂಜೆ ಮಾಂಡೋಳಿ ಗ್ರಾಮದಿಂದ ಪಂಢರಪುರಕ್ಕೆ ಹೊರಟಿದ್ದ ಭಕ್ತರು. ಹೀಗೆ ದುರಂತ ಸಾವನ್ನು ಕಂಡವರು ಪಂಢರಪುರ ವಿಠ್ಠಲನ ದರ್ಶನಕ್ಕೆ ಹೊರಟ ಐದು […]

ಕಲ್ಲು ತುಂಬಿದ್ದ ಟ್ರ್ಯಾಕ್ಟರ್-ಬೊಲೆರೊ ಡಿಕ್ಕಿ: ವಿಠ್ಠಲನ ದರ್ಶನಕ್ಕೆ ಹೊರಟ 5 ಭಕ್ತರು ಸ್ಥಳದಲ್ಲೇ ಸಾವು

ಮಾಂಡೋಳಿ, ಮಹಾರಾಷ್ಟ್ರ: ಕಲ್ಲು ತುಂಬಿದ್ದ ಟ್ರ್ಯಾಕ್ಟರ್​ಗೆ ಬೊಲೆರೊ ಡಿಕ್ಕಿ ಹೊಡೆದ ಪರಿಣಾಮ ಬೊಲೆರೊ ವಾಹನದಲ್ಲಿ ಪ್ರಯಾಣಿಸ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಮಹಾರಾಷ್ಟ್ರದ ಸಾಂಗೋಲ್ಯಾ ಗ್ರಾಮದ ಬಳಿ ಬೆಳಗಿನ ಜಾವ ಐದು ಗಂಟೆಯಲ್ಲಿ ಈ ಭೀಕರ ಅಪಘಾತವಾಗಿದೆ. ಡಿಕ್ಕಿಯ ರಭಸಕ್ಕೆ ಐದೂ ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ಸಂಜೆ ಮಾಂಡೋಳಿ ಗ್ರಾಮದಿಂದ ಪಂಢರಪುರಕ್ಕೆ ಹೊರಟಿದ್ದ ಭಕ್ತರು.

ಹೀಗೆ ದುರಂತ ಸಾವನ್ನು ಕಂಡವರು ಪಂಢರಪುರ ವಿಠ್ಠಲನ ದರ್ಶನಕ್ಕೆ ಹೊರಟ ಐದು ಜನ ಭಕ್ತರು. ಇವರೆಲ್ಲ ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದವರು. ಚಾಲಕ ಅದಾ ಪಾಟೀಲ್(44), ಮಂಡೋಳಿ ಗ್ರಾಮದ ಕೃಷ್ಣಾ ಕಣಬರಕರ(46), ಮಹಾದೇವಪ್ಪ ಕಣಬರಕರ(48), ಬಾಳು ಅಂಬೇವಾಡಿಕರ(50), ಅರುಣ ಮುತಗೇಕರ(37) ಮೃತ ದುರ್ದೈವಿಗಳು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada