ಏನಿದು ಅಯೋಧ್ಯೆ ಭೂ ವಿವಾದ: ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಏನಿದು ಅಯೋಧ್ಯೆ ಭೂ ವಿವಾದ: ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಅಯೋಧ್ಯೆ ಭೂ ವಿವಾದದ ಇತಿಹಾಸವೇ ಒಂದು ರಣರೋಚಕ ಕಹಾನಿ. ಕಳೆದ ಎರಡೂವರೆ ದಶಕಗಳಿಂದ ಕೋರ್ಟ್​ ಕಟೆಕಟೆಯಲ್ಲಿದ್ದ ಕೇಸ್​ಗೆ, ಬರೋಬ್ಬರಿ ನಾಲ್ಕು ಶತಮಾನಗಳ ಇತಿಹಾಸವಿದೆ. ಮೊಘಲ್ ಅರಸ ಬಾಬರ್​ ದೇವಸ್ಥಾನ ಧ್ವಂಸಗೊಳಿಸಿ ಬಾಬ್ರಿ ಮಸೀದಿ ನಿರ್ಮಿಸಿದ. ಇದು 1853ರಲ್ಲಿ ಕೋಮುಗಲಭೆಗೆ ಕಾರಣವಾಯ್ತು. 1992ರಲ್ಲಿ ಮಸೀದಿ ಧ್ವಂಸಗೊಳ್ಳುತ್ತಲೇ ರಾಷ್ಟ್ರ ರಾಜಕೀಯ, ಧಾರ್ಮಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.

ಅಯೋಧ್ಯೆ ಭೂ ವಿವಾದ ಪ್ರಕರಣ ಕೋರ್ಟ್​ ಮೆಟ್ಟಿಲೇರಿ ಏಳು ದಶಕಗಳೇ ಕಳೆದು ಹೋಗಿದೆ. ಅಷ್ಟೇ ಯಾಕೆ ಅಯೋಧ್ಯೆ ವಿವಾದ ಆರಂಭವಾಗಿ ಅನಮಾತ್ತು ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲವಾಗಿದೆ. ಸ್ವಾತಂತ್ರ್ಯ ಭಾರತದ ಅತ್ಯಂತ ಸೂಕ್ಷ್ಮ ಮತ್ತು ದೇಶದ ಇತಿಹಾಸದ ಅತ್ಯಂತ ಪುರಾತನ ಕೇಸ್ ಅಂದ್ರೆ ಅಯೋಧ್ಯೆ ಭೂ ವಿವಾದ.

ಅಯೋಧ್ಯೆಯ ಕೇವಲ 2.77 ಎಕರೆ ಜಾಗ ಕಳೆದ ಕೆಲ ದಶಕಗಳಿಂದ ರಾಷ್ಟ್ರ ರಾಜಕೀಯದಲ್ಲಿ, ಧಾರ್ಮಿಕ ವಲಯದಲ್ಲಿ ಸದ್ದು ಮಾಡುತ್ತಲೇ ಇದೆ. ದೇಶದ ಮೂಲೆ ಮೂಲೆಯಲ್ಲೂ ಅಯೋಧ್ಯೆ ವಿಚಾರ ಚರ್ಚೆಯಾಗುತ್ತಲೇ ಇತ್ತು. ಹಾಗಿದ್ರೆ. ಅಯೋಧ್ಯೆ ವಿವಾದ ಆರಂಭವಾಗಿದ್ದು ಯಾವಾಗ? ಕೋರ್ಟ್​ ಮೆಟ್ಟಿಲೇರಿದ್ದು ಯಾವಾಗ? ಕೇಸ್​ನ ಇತಿಹಾಸವೇನು ಅನ್ನೋದು ಇಲ್ಲಿದೆ ನೋಡಿ.

ಅಯೋಧ್ಯೆ ವಿವಾದ ಇತಿಹಾಸ: * 1528: ವಿವಾದಿತ ಅಯೋಧ್ಯೆ ಭೂಮಿಯಲ್ಲಿ ಬಾಬರ್​ನಿಂದ ಮಸೀದಿ ನಿರ್ಮಾಣ * 1853: ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಗಲಭೆ * 1859: ವಿವಾದಿತ ಪ್ರದೇಶಕ್ಕೆ ಬೇಲಿ ಹಾಕಿದ ಬ್ರಿಟಿಷ್ ಆಡಳಿತ ಒಳಾಂಗಣ ಭಾಗ ಮುಸ್ಲಿಮರಿಗೆ, ಹೊರಾಂಗಣ ಭಾಗ ಹಿಂದೂಗಳಿಗೆ ಹಂಚಿಕೆ * 1949: ಮಸೀದಿಯೊಳಗೆ ಶ್ರೀರಾಮನ ಪ್ರತಿಮೆ ಪ್ರತಿಷ್ಠಾಪನೆ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಲೇ ಸರ್ಕಾರದಿಂದ ಗೇಟ್​ಗೆ ಬೀಗ * 1950: ರಾಮ್​ ಲಲ್ಲಾ ಪೂಜೆಗೆ ಅನುಮತಿ ನೀಡುವಂತೆ ಕೋರಿ ಅರ್ಜಿ * 1986: ಮಸೀದಿ ಬಾಗಿಲು ತೆರವುಗೊಳಿಸಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ನ್ಯಾಯಾಲಯ ಆದೇಶ * 1990: ವಿಹೆಚ್​ಪಿ ಕಾರ್ಯಕರ್ತರಿಂದ ಮಸೀದಿಯ ಪಾರ್ಶ್ವ ಭಾಗ ಧ್ವಂಸ * 1992: ವಿಹೆಚ್​ಪಿ, ಶಿವಸೇನೆ, ಕರಸೇವಕರಿಂದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ದೇಶದ ಹಲವೆಡೆ ಭಾರಿ ಕೋಮುಗಲಭೆ, 2000ಕ್ಕೂ ಅಧಿಕ ಮಂದಿ ಸಾವು * 1993: ಎಲ್​.ಕೆ.ಅಡ್ವಾಣಿ ಸೇರಿದಂತೆ 13 ಮಂದಿ ವಿರುದ್ಧ ಚಾರ್ಜ್​ಶೀಟ್ ದಾಖಲು * 2002: ಹೈಕೋರ್ಟ್​ ತ್ರಿಸದಸ್ಯ ಪೀಠದಿಂದ ಅಯೋಧ್ಯೆ ಭೂ ವಿವಾದದ ವಿಚಾರಣೆ * 2010: ವಿವಾದಿತ ಪ್ರದೇಶ ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು ತಲಾ 3ನೇ ಒಂದು ಭಾಗ ಮುಸ್ಲಿಂ ಸಮುದಾಯ, ಹಿಂದೂಗಳಿಗೆ ಹಂಚಿಕೆ * 2011: ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಸಮುದಾಯದಿಂದ ಮೇಲ್ಮನವಿ ಅರ್ಜಿ ಅಲಹಾಬಾದ್ ಹೈಕೋರ್ಟ್​ ತೀರ್ಪು ರದ್ದು ಗೊಳಿಸಿದ ಸುಪ್ರೀಂಕೋರ್ಟ್ * 2017: ಸುಪ್ರೀಂನಲ್ಲಿ ಅಲಹಾಬಾದ್ ಹೈಕೋರ್ಟ್​ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 13 ಅರ್ಜಿಗಳ ವಿಚಾರಣೆ ಆರಂಭ ಈ ಮಧ್ಯೆ ಮಾತುಕತೆ ಮೂಲಕ ಬಗೆಹರಿಸಲು ಸಂಧಾನ ಸಮಿತಿ ರಚನೆ, ಮಧ್ಯಸ್ಥರನ್ನ ನೇಮಿಸಿದ ಸುಪ್ರೀಂಕೋರ್ಟ್ * 2019: ಅಯೋಧ್ಯೆ ಭೂವಿವಾದದ ವಿಚಾರಣೆ ಸುಪ್ರೀಂನಿಂದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಪಂಚಪೀಠ ರಚನೆ * 2019ರ ಆಗಸ್ಟ್​ನಿಂದ 40 ದಿನಗಳ ಕಾಲ ಅಯೋಧ್ಯೆ ವಿವಾದದ ಮೇಲ್ಮನವಿ ಅರ್ಜಿಯ ನಿರಂತರ ವಿಚಾರಣೆ * ಅಕ್ಟೋಬರ್ 16, 2019 : ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್​ * ನವೆಂಬರ್ 9, 2019 : ಬೆಳಗ್ಗೆ 10.30ಕ್ಕೆ ಸಾಂವಿಧಾನಿಕ ಪೀಠದಿಂದ ತೀರ್ಪು

Click on your DTH Provider to Add TV9 Kannada