ನಾನು ಭಾರತೀಯ ಮುಸ್ಲಿಂ, ಚೀನಾದ ಮುಸ್ಲಿಂ ಅಲ್ಲ: ಕೇಂದ್ರ ವಿರುದ್ಧ ಫಾರೂಕ್ ಅಬ್ದುಲ್ಲಾ ವಾಗ್ದಾಳಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 13, 2022 | 7:04 PM

ಎಲ್ಲರೂ ವಿಭಿನ್ನವಾಗಿರಬಹುದು. ಆದರೆ ನಾವು ಒಟ್ಟಾಗಿ ಈ ದೇಶವನ್ನು ಕಟ್ಟಬಹುದು. ಅದನ್ನು ಪ್ರೀತಿ ಎಂದು ಕರೆಯಲಾಗುತ್ತದೆ. ಧರ್ಮಗಳು ಒಬ್ಬರನ್ನೊಬ್ಬರು ದ್ವೇಷಿಸಲು ಜನರಿಗೆ ಕಲಿಸುವುದಿಲ್ಲ. ಇದು ಹಿಂದೂಸ್ತಾನ್. ಇದು ಎಲ್ಲರಿಗೂ ಸೇರಿದೆ

ನಾನು ಭಾರತೀಯ ಮುಸ್ಲಿಂ, ಚೀನಾದ ಮುಸ್ಲಿಂ ಅಲ್ಲ: ಕೇಂದ್ರ ವಿರುದ್ಧ ಫಾರೂಕ್ ಅಬ್ದುಲ್ಲಾ ವಾಗ್ದಾಳಿ
ಛಗನ್ ಭುಜಬಲ್ ಜನ್ಮ ದಿನಾಚರಣೆ
Follow us on

ಮುಂಬೈ: ದೇಶದಲ್ಲಿ ಮುಸ್ಲಿಮರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಜಮ್ಮು ಮತ್ತು ಕಾಶ್ಮೀರದ (Jammu and Kashmir )ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah). “ನಾವು ನಿಮ್ಮೊಂದಿಗಿದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಾವು ದೇಶವನ್ನು ಒಂದಾಗಿ ಇಡಬೇಕು. ನಾನು ಮುಸ್ಲಿಂ, ಆದರೆ ಭಾರತೀಯ ಮುಸ್ಲಿಂ. ನಾನು ಚೀನಾದ ಮುಸ್ಲಿಂ ಅಲ್ಲ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಆಯೋಜಿಸಿದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಹಿರಿಯ ನಾಯಕ ಛಗನ್ ಭುಜಬಲ್ ಅವರ 75 ನೇ ಹುಟ್ಟುಹಬ್ಬವನ್ನು ಆಚರಿಸುವ ಕಾರ್ಯಕ್ರಮವಾಗಿದೆ ಇದು. ಶಿವಸೇನೆಯ ಉದ್ಧವ್ ಠಾಕ್ರೆ, ಗೀತರಚನೆಕಾರ ಜಾವೇದ್ ಅಖ್ತರ್ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯ ಒಬ್ಬ ಸಂಸದ ಮತ್ತು ಶಾಸಕ ಮುಸ್ಲಿಂ ಸಮುದಾಯದ ಸಂಪೂರ್ಣ ಬಹಿಷ್ಕಾರಕ್ಕೆ ಕರೆ ನೀಡುವ ದ್ವೇಷದ ಭಾಷಣಗಳನ್ನು ನೀಡಿದ ಕೆಲವೇ ದಿನಗಳಲ್ಲಿ ಅಬ್ದುಲ್ಲಾ ಅವರ ಈ ಹೇಳಿಕೆ ಬಂದಿದೆ.

“ಎಲ್ಲರೂ ವಿಭಿನ್ನವಾಗಿರಬಹುದು. ಆದರೆ ನಾವು ಒಟ್ಟಾಗಿ ಈ ದೇಶವನ್ನು ಕಟ್ಟಬಹುದು. ಅದನ್ನು ಪ್ರೀತಿ ಎಂದು ಕರೆಯಲಾಗುತ್ತದೆ. ಧರ್ಮಗಳು ಒಬ್ಬರನ್ನೊಬ್ಬರು ದ್ವೇಷಿಸಲು ಜನರಿಗೆ ಕಲಿಸುವುದಿಲ್ಲ. ಇದು ಹಿಂದೂಸ್ತಾನ್. ಇದು ಎಲ್ಲರಿಗೂ ಸೇರಿದೆ” ಎಂದು ಅಬ್ದುಲ್ಲಾ ಹೇಳಿದ್ದಾರೆ.

ಎನ್‌ಸಿಪಿಯ ಭುಜಬಲ್ ಅವರು ಶಿವಸೇನಾ ಜತೆ ಸಂಬಂಧ ಹೊಂದಿದ್ದು ಅವರ ಜನ್ಮದಿನದ ಆಚರಣೆಯಲ್ಲಿ ಠಾಕ್ರೆ ಹಾಜರಾಗಿದ್ದರು. ಎನ್‌ಸಿಪಿಯು ಠಾಕ್ರೆ ನೇತೃತ್ವದ ಶಿವಸೇನಾ ಗುಂಪಿನ ಮಿತ್ರ ಪಕ್ಷವಾಗಿದೆ. ಕಳೆದ ವಾರ, ಚುನಾವಣಾ ಆಯೋಗವು ಮಹಾರಾಷ್ಟ್ರದಲ್ಲಿ ಮುಂಬರುವ ಉಪಚುನಾವಣೆಗೆ ಚುನಾವಣಾ ಚಿಹ್ನೆ ಉರಿಯುತ್ತಿಲರುವ ದೊಂದಿ ಬಳಸಲು ಟೀಮ್ ಠಾಕ್ರೆಗೆ ಅನುಮತಿ ನೀಡಿತು. ಈ ಚಿಹ್ನೆಯನ್ನು 1985 ರ ಚುನಾವಣೆಯಲ್ಲಿ ಸೇನೆ ಬಳಸಿತ್ತು. ಆಗ ಭುಜಬಲ್ ಅವರು ಮುಂಬೈನ ಮಜಗಾಂವ್ ಕ್ಷೇತ್ರದಿಂದ ಗೆದ್ದಿದ್ದರು. ಭುಜಬಲ್ ನಂತರ ಸೇನೆಯನ್ನು ತೊರೆದು ಕಾಂಗ್ರೆಸ್‌ಗೆ ಸೇರಿದರು ಅಲ್ಲಿಂದ ಅವರು ಎನ್‌ಸಿಪಿಗೆ ಜಿಗಿದಿದ್ದರು.