ಲಖನೌ: ಕೊರೊನಾ ಲಸಿಕೆ ಕುರಿತ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದಂತೆಯೇ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸ್ಪಷ್ಟನೆ ನೀಡಿದ್ದಾರೆ. ತಾವು ಬಿಜೆಪಿಯ ಲಸಿಕೆ ರಾಜಕೀಯಕ್ಕೆ ಪ್ರತಿರೋಧ ನೀಡಿದ್ದೇ ಹೊರತು, ಲಸಿಕೆಗಾಗಿ ಶ್ರಮಿಸಿದ ಸಂಶೋಧಕರನ್ನು ಪ್ರಶ್ನಿಸಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕೊರೊನಾ ಲಸಿಕೆ ವಿತರಣೆ ಯೋಜನೆಯ ಕುರಿತು ಮಾತನಾಡುತ್ತ, ಬಿಜೆಪಿ ಸರ್ಕಾರ ಒದಗಿಸುವ ಲಸಿಕೆ ಮೇಲೆ ನಂಬಿಕೆಯಿಲ್ಲ. ನಾನಂತೂ ಬಿಜೆಪಿ ಲಸಿಕೆ ಪಡೆಯುವುದಿಲ್ಲ ಎಂದು ಅವರು ಹೇಳಿದ್ದರು. ಅವರ ಮಾತು ದೇಶದಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ಅಖಿಲೇಶ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸಮಾಜವಾದಿ ಪಕ್ಷವು ಲಸಿಕೆ ಕಂಡುಹಿಡಿದ ಸಂಶೋಧಕರನ್ನು ಅನುಮಾನಿಸಿಲ್ಲ. ನಮಗೆ ಸಂಶೋಧಕರ ಮೇಲೆ ಬಲವಾದ ನಂಬಿಕೆಯಿದೆ. ಲಸಿಕೆ ಕುರಿತು ಹುಟ್ಟುವ ಎಲ್ಲ ಅನುಮಾನಗಳನ್ನು ಪರಿಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅನುಮಾನ ಪರಿಹರಿಸಿಕೊಳ್ಳುವ ಉದ್ದೇಶದೊಂದಿಗೆ ಲಸಿಕೆ ಕುರಿತು ಅನುಮಾನ ವ್ಯಕ್ತಪಡಿಸಿದ್ದೇನೆ ಎಂದು ಅಖಿಲೇಶ್ ಯಾದವ್
ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಕೊರೊನಾ ಲಸಿಕೆಯನ್ನು ಉಚಿತವಾಗಿ ಹಂಚಲಾಗುವುದು ಎಂದೂ ಅವರು ಘೋಷಿಸಿದ್ದರು.
BJP ಸರ್ಕಾರ ವಿತರಿಸುವ ಕೊರೊನಾ ಲಸಿಕೆಯನ್ನು ನಾನಂತೂ ಪಡೆಯುವುದಿಲ್ಲ: ಅಖಿಲೇಶ್ ಯಾದವ್