ಚಿತ್ರಮಂದಿರದಲ್ಲಿ ಅಂತರ ಅನಗತ್ಯ: ಹೌಸ್ಫುಲ್ಗೆ ತಮಿಳುನಾಡು ಸರ್ಕಾರ ಅವಕಾಶ
ಎರಡು ದಿನಗಳ ಹಿಂದೆ, ಕೇರಳ ಸರ್ಕಾರವು ಶೇ. 50ರಷ್ಟು ಆಸನಗಳಿಗೆ ಅನುಮತಿ ನೀಡಿ ಸಿನಿಮಾ ಮಂದಿರ ತೆರೆಯಲು ಅನುವು ಮಾಡಿಕೊಟ್ಟಿತ್ತು. ಇದೀಗ ತಮಿಳುನಾಡು ಸಂಪೂರ್ಣ ಆಸನಗಳನ್ನು ತುಂಬಿಸಲು ಅವಕಾಶ ನೀಡಿ ಆದೇಶ ಹೊರಡಿಸಿದೆ.
ಚೆನ್ನೈ: ಕೊರೊನಾ ಸಂಕಷ್ಟದ ನಡುವೆ ಶೇ 100ರಷ್ಟು ಆಸನಗಳಿಗೆ ಟಿಕೆಟ್ ನೀಡಲು ಅವಕಾಶ ನೀಡಿ ಸಿನಿಮಾ ಮಂದಿರಗಳನ್ನು ತೆರೆಯಲು ತಮಿಳುನಾಡು ಸರ್ಕಾರ ಇಂದು ಅನುಮತಿ ನೀಡಿದೆ. ಜನವರಿ 13ರಿಂದ ತಮಿಳುನಾಡಿನಲ್ಲಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ಗಳು ಕಾರ್ಯನಿರ್ವಹಿಸಲಿದೆ. ಈ ಮೂಲಕ, ಲಾಕ್ಡೌನ್ ಬಳಿಕ ಚಿತ್ರಮಂದಿರಗಳನ್ನು ಹೌಸ್ಫುಲ್ ಮಾಡಲು ಅವಕಾಶ ನೀಡಿದ ಮೊದಲ ರಾಜ್ಯವಾಗಲಿದೆ ತಮಿಳುನಾಡು.
ಕೊರೊನಾ ಲಾಕ್ಡೌನ್ ಕಾರಣದಿಂದ ಚಿತ್ರಮಂದಿರಗಳನ್ನು ಬರೋಬ್ಬರಿ ಏಳು ತಿಂಗಳ ಕಾಲ ಮುಚ್ಚಲಾಗಿತ್ತು. ಬಳಿಕ, ನವೆಂಬರ್ 10ರಂದು ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ಗಳನ್ನು ಕೊವಿಡ್-19 ಸುರಕ್ಷತಾ ಕ್ರಮಗಳನ್ನು ಅನುಸರಿಸಿ ತೆರೆಯಬಹುದು ಎಂದು ಹಲವು ರಾಜ್ಯಗಳು ಆದೇಶಿಸಿದ್ದವು.
ಎರಡು ದಿನಗಳ ಹಿಂದೆ, ಕೇರಳ ಸರ್ಕಾರವು ಶೇ. 50ರಷ್ಟು ಆಸನಗಳಿಗೆ ಅನುಮತಿ ನೀಡಿ ಸಿನಿಮಾ ಮಂದಿರ ತೆರೆಯಲು ಅನುವು ಮಾಡಿಕೊಟ್ಟಿತ್ತು. ಇದೀಗ ತಮಿಳುನಾಡು ಸಂಪೂರ್ಣ ಆಸನಗಳನ್ನು ತುಂಬಿಸಲು ಅವಕಾಶ ನೀಡಿ ಆದೇಶ ಹೊರಡಿಸಿದೆ.
ಜನವರಿ 13ರಂದು ಟಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ ‘ಮಾಸ್ಟರ್’ ಸಿನಿಮಾ ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಕೂಡ ಸಿನಿಮಾ ಹಾಲ್ಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.
ಕೊವಿಡ್-19 ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡು ಥಿಯೇಟರ್ಗಳನ್ನು ತೆರೆಯಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಸಿನಿಮಾ ಹಾಲ್ಗಳಲ್ಲಿ ಶೇ. 100ರಷ್ಟು ಜನರಿಗೆ ಅವಕಾಶ ನೀಡಿ ಆದೇಶ ನೀಡಿರುವುದಕ್ಕೆ, ಥಿಯೇಟರ್ ಮಾಲಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಕೊರೊನಾ ನಡುವೆ ಈ ಕ್ರಮ ಕೈಗೊಂಡಿರುವ ಬಗ್ಗೆ ಜನರಿಂದ ವಿರೋಧವೂ ವ್ಯಕ್ತವಾಗಿದೆ.
Chennai: Preparations underway as theatres and multiplexes prepare to open with 100% occupancy following Tamil Nadu govt's order.
"We thank CM & hope to revamp our business. We'll be following all the SOPs keeping coronavirus in mind," says co-owner of Jothi Theatre, Chennai pic.twitter.com/TzJEbCo9sO
— ANI (@ANI) January 4, 2021
ಜಲ್ಲಿಕಟ್ಟು ಆಯೋಜನೆಗೆ ಅನುಮತಿ ನೀಡಿದ ತಮಿಳುನಾಡು ಸರ್ಕಾರ; ಸ್ಪರ್ಧಿಗಳಿಗೆ ಕೊರೊನಾ ನೆಗೆಟಿವ್ ಪತ್ರ ಕಡ್ಡಾಯ
Published On - 7:46 pm, Mon, 4 January 21