ನಾನು ಒಬಿಸಿ ಎಂದಲ್ಲ, ಓವೈಸಿ ಎಂದು ಹೇಳಿದ್ದು: ವಿವಾದಿತ ವೈರಲ್ ವಿಡಿಯೊ ಬಗ್ಗೆ ರಾಮ್‌ದೇವ್

ರಾಮ್‌ದೇವ್ ಅವರು ತಮ್ಮ ಬ್ರಾಹ್ಮಣ ಗುರುತನ್ನು ಪ್ರತಿಪಾದಿಸುವ ಮೂಲಕ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಹಳೇ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಮ್‌ದೇವ್, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ

ನಾನು ಒಬಿಸಿ ಎಂದಲ್ಲ, ಓವೈಸಿ ಎಂದು ಹೇಳಿದ್ದು: ವಿವಾದಿತ ವೈರಲ್ ವಿಡಿಯೊ ಬಗ್ಗೆ ರಾಮ್‌ದೇವ್
ಬಾಬಾ ರಾಮ್​​ದೇವ್

Updated on: Jan 14, 2024 | 12:54 PM

ದೆಹಲಿ ಜನವರಿ 14: ಯೋಗ ಗುರು ರಾಮ್‌ದೇವ್ (Yoga guru Ramdev) ಅವರು ಇತರ ಹಿಂದುಳಿದ ವರ್ಗಗಳ (OBC) ವಿರುದ್ಧ ಟೀಕೆ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ. ಬಾಬಾ ರಾಮ್ ದೇವ್ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ , ಯೋಗ ಗುರು ನಾನು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ (Asaduddin Owaisi)ಅವರನ್ನು ಉದ್ದೇಶಿಸಿ ಓವೈಸಿ ಎಂದು ಹೇಳಿದ್ದೇನೆ. ಆದರೆ ಒಬಿಸಿ ಸಮುದಾಯವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ ಎಂದಿದ್ದಾರೆ.

ರಾಮ್‌ದೇವ್ ಅವರು ತಮ್ಮ ಬ್ರಾಹ್ಮಣ ಗುರುತನ್ನು ಪ್ರತಿಪಾದಿಸುವ ಮೂಲಕ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಹಳೇ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಮ್‌ದೇವ್, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

“ನಾನು ‘ಓವೈಸಿ’ ಎಂದು ಹೇಳಿದ್ದೇನೆ. ‘ಒಬಿಸಿ’ ಎಂದಲ್ಲ. ಓವೈಸಿ ಅವರ ಪೂರ್ವಜರು ದೇಶ ವಿರೋಧಿಗಳು, ನಾನು ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ರಾಮ್‌ದೇವ್ ಹೇಳಿದ್ದಾರೆ.


ಅವರ ಹೇಳಿಕೆಯ ನಂತರ, ಅಸಾದುದ್ದೀನ್ ಓವೈಸಿ ಈ ರೀತಿ ‘ಯು-ಟರ್ನ್’ ಮಾಡಿದ್ದಕ್ಕಾಗಿ ಬಾಬಾ ರಾಮ್‌ದೇವ್ ಅವರನ್ನು ಟೀಕಿಸುವ ಪೋಸ್ಟ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಒಬಿಸಿವಾಲೇ ಅಪ್ನೀ ತೈಸೀ ಕರಾಯೇ ಎಂದು ಹೇಳಿ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಕ್ಕಾಗಿ ವಂಚಕ ರಾಮ್‌ದೇವ್ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ?” ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಸಂಯೋಜಕರೊಬ್ಬರು ವೈರಲ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ.


ವೈರಲ್ ಆಗಿರುವ ವಿಡಿಯೊದಲ್ಲೇನಿದೆ?
ವೈರಲ್ ವಿಡಿಯೊದಲ್ಲಿ ಬಾಬಾ ರಾಮ್‌ದೇವ್, ನನ್ನ ಮೂಲ ಗೋತ್ರ ಬ್ರಹ್ಮ ಗೋತ್ರ. ನಾನು ಅಗ್ನಿಹೋತ್ರಿ ಬ್ರಾಹ್ಮಣ. ಜನರು ಬಾಬಾಜಿ ಒಬಿಸಿ ಎಂದು ಹೇಳುತ್ತಾರೆ. ನಾನು ವೇದಿ ಬ್ರಾಹ್ಮಣ, ದ್ವಿವೇದಿ ಬ್ರಾಹ್ಮಣ, ತ್ರಿವೇದಿ ಬ್ರಾಹ್ಮಣ, ಚತುರ್ವೇದಿ ಬ್ರಾಹ್ಮಣ – ನಾನು ನಾಲ್ಕು ವೇದಗಳನ್ನು ಓದಿದ್ದೇನೆ ಎನ್ನುತ್ತಾರೆ. ಇದರಲ್ಲಿ ಬಾಬಾ ಒಬಿಸಿವಾಲೇ ಅಪ್ನೀ ಐಸೀ ತೈಸೀ ಕರಾಯೇ ಎಂಬ ವಾಕ್ಯ ಪ್ರಯೋಗ ಮಾಡಿದ್ದು, ಐಸೀ ತೈಸೀ ಎಂಬ ಪದವನ್ನು ಹಿಂದಿಯಲ್ಲಿ ಬೈಗುಳ ಅಥವಾ ಮತ್ತೊಬ್ಬರನ್ನು ಅವಮಾನಿಸಲು ಬಳಸಲಾಗುತ್ತದೆ.

ಇದನ್ನೂ ಓದಿ: Baba Ramdev: ಮೊದಲು ನಮಾಜ್ ಓದುವುದು, ನಂತರ ಹಿಂದೂ ಹೆಣ್ಣುಮಕ್ಕಳನ್ನು ಅಪಹರಿಸುವುದು, ಭಯೋತ್ಪಾದನೆ ಸೃಷ್ಟಿಸುವುದು: ಬಾಬಾ ರಾಮ್​ದೇವ್

ವಿಡಿಯೊ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅನೇಕರು #boycottpatanjali ಎಂದು ಪ್ರತಿಭಟಿಸಿದ್ದು, ಹಿಂದುಳಿದ ಸಮುದಾಯಕ್ಕೆ ಮಾಡಿದ ಅವಮಾನಕ್ಕಾಗಿ ರಾಮ್‌ದೇವ್ ಅವರನ್ನು ಟೀಕಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ