ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ನಿಯಮಗಳ ಕರಡನ್ನು ಕೇಂದ್ರ ಸರ್ಕಾರ ಶುಕ್ರವಾರ (ಜ.3) ಬಿಡುಗಡೆ ಮಾಡಿದೆ. ಈ ಬಗ್ಗೆ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿದ್ದಾರೆ. ಕರಡು ಡಿಪಿಡಿಪಿ ನಿಯಮಗಳು ಸಮಾಲೋಚನೆಗೆ ಮುಕ್ತವಾಗಿವೆ ಎಂದು ಎಕ್ಸ್ನಲ್ಲಿ ಅವರು ಬರೆದುಕೊಂಡಿದ್ದಾರೆ. ನನಗೆ ನಿಮ್ಮ ಅಭಿಪ್ರಾಯ ಬೇಕು ಎಂದು ಹೇಳಿದ್ದಾರೆ.
ಈ ಕರಡು ಬಗ್ಗೆ ನಿಮಗೆ ಹೇಳೋಣ ಎಂದು ತುಂಬಾ ಸಮಯದಿಂದ ಕಾಯುತ್ತಿದೆ. ಸಾರ್ವಜನಿಕ ಸಮಾಲೋಚನೆಗಾಗಿ ಪ್ರಕಟಿಸಲಾದ ಈ ಕರಡನ್ನು ಫೆಬ್ರವರಿ 18 ರ ನಂತರ ಪರಿಗಣಿಸಲಾಗುವುದು.
Draft DPDP rules are open for consultation. Seeking your views.https://t.co/cDtyw7lXDN
— Ashwini Vaishnaw (@AshwiniVaishnaw) January 3, 2025
ಕರಡು ಅಧಿಸೂಚನೆಯು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯಿದೆ ಆಗಿದ್ದು, 2023 ರ ವಿಭಾಗ 40 (1) ಮತ್ತು (2) ಉಪ-ವಿಭಾಗಗಳ 40 (1) ಮತ್ತು (2) ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಲಾಗುವುದು. ಕೇಂದ್ರ ಸರ್ಕಾರವು ಜಾರಿಗೆ ತಂದ ಈ ಕಾಯಿದೆ ಯಾವ ದಿನಾಂಕದಿಂದ ಜಾರಿಗೊಳಿಸಲಾಗುವುದು ಅಲ್ಲಿಂದ ಇದರ ಪಾಲನೆ ಮಾಡಬೇಕಾಗುತ್ತದೆ. ಇನ್ನು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್ ನಲ್ಲಿ ಏನಿದೆ ಎಂಬ ಬಗ್ಗೆ ಈ ಕರಡುನಲ್ಲಿ ತಿಳಿಸಲಾಗಿದೆ. ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಆಕ್ಟ್, 2023 ರ ಅಡಿಯಲ್ಲಿ ಜನರ ಒಪ್ಪಿಗೆಯನ್ನು ಪಡೆಯುವುದು, ಡೇಟಾ ಸಂಸ್ಕರಣಾ ಸಂಸ್ಥೆಗಳು ಮತ್ತು ಪ್ರಾಧಿಕಾರಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ನಿಬಂಧನೆಗಳನ್ನು ನಿಗದಿಪಡಿಸಲಾಗಿದೆ.
Draft of rules proposed to be made by the central government in exercise of the powers conferred by sub-sections (1) and (2) of section 40 of the Digital Personal Data Protection Act, 2023 (22 of 2023), on or after the date of coming into force of the Act, are hereby published… pic.twitter.com/InpNJtA3Rs
— ANI (@ANI) January 3, 2025
ಕರಡು ನಿಯಮಗಳನ್ನು ಫೆಬ್ರವರಿ 18, 2025 ರ ನಂತರ ಪರಿಗಣಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಕಾಯಿದೆ ಪ್ರಕಾರ 2023 ರ ಅಡಿಯಲ್ಲಿ ದಂಡದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಸದ್ಯ ಸರ್ಕಾರ ಸಿದ್ಧಪಡಿಸಿರುವ ಕರಡಿನಲ್ಲಿ ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಸರ್ಕಾರ ಈಗಷ್ಟೇ ಜನರ ಅಭಿಪ್ರಾಯ ಕೇಳಿದೆ. ಜನರ ಅಭಿಪ್ರಾಯ ಪರಿಗಣಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ