ನನಗೆ ಕಾಂಗ್ರೆಸ್ನಲ್ಲಿ ಯಾವುದೇ ಹುದ್ದೆ ಇರಲಿ, ಬಿಡಲಿ ನಾನು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜತೆ ಸದಾ ನಿಲ್ಲುತ್ತೇನೆ ಎಂದು ನವಜೋತ್ ಸಿಂಗ್ ಸಿಧು (Navjot Singh Sidhu) ಹೇಳಿದ್ದಾರೆ. ಪಂಜಾಬ್ ಕಾಂಗ್ರೆಸ್ (Punjab Congress)ನಲ್ಲಿ ಇತ್ತೀಚೆಗೆ ಏನೂ ಸರಿಯಿಲ್ಲ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಧು ರಾಜೀನಾಮೆ ನೀಡಲೂ ಈ ನವಜೋತ್ ಸಿಂಗ್ ಸಿಧು ಅವರೇ ಕಾರಣ ಎಂಬುದು ಜಗಜ್ಜಾಹೀರಾದ ವಿಷಯ. ಅಮರಿಂದರ್ ನಂತರ ಅವರ ಸ್ಥಾನಕ್ಕೆ ಚರಣಜಿತ್ ಸಿಂಗ್ ಛನ್ನಿ ಬರುತ್ತಿದ್ದಂತೆ ಈ ನವಜೋತ್ ಸಿಂಗ್ ಸಿಧು ತಮ್ಮ ಪಂಜಾಬ್ ಕಾಂಗ್ರೆಸ್ ಪ್ರದೇಶ ಸಮಿತಿ ಅಧ್ಯಕ್ಷನ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಆ ರಾಜೀನಾಮೆ ಅಂಗೀಕಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅದರ ಬೆನ್ನಲ್ಲೇ ಇಂದು ಟ್ವೀಟ್ ಮಾಡಿರುವ ಸಿಧು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಬೆಂಬಲಕ್ಕೆ ಸದಾ ನಿಲ್ಲುತ್ತೇನೆ ಎಂದಿದ್ದಾರೆ.
ಇಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನ. ಈ ದಿನದಂದು ಇಬ್ಬರೂ ನಾಯಕರ ತತ್ವಗಳನ್ನು ನಾವು ಎತ್ತಿಹಿಡಿಯಬೇಕು. ನನಗೆ ಕಾಂಗ್ರೆಸ್ನಲ್ಲಿ ಹುದ್ದೆ ಇರಲಿ, ಇಲ್ಲದೆ ಇರಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸದಾ ಇರುತ್ತೇನೆ. ಎಲ್ಲ ನಕಾರಾತ್ಮಕ ಶಕ್ತಿಗಳೂ ಒಟ್ಟಾಗಿ ನನ್ನನ್ನು ಸೋಲಿಸಲು ಪ್ರಯತ್ನಿಸಲಿ. ಆದರೆ ನನ್ನಲ್ಲಿರುವ ಧನಾತ್ಮಕ ಶಕ್ತಿಯ ಪ್ರತಿ ಔನ್ಸ್ ಕೂಡ ಪಂಜಾಬ್ ಗೆಲ್ಲುವಂತೆ ಮಾಡುತ್ತದೆ. ಪಂಜಾಬಿಯತ್ (ಸಾರ್ವತ್ರಿಕ ಸಹೋದರತ್ವ) ಗೆಲ್ಲುತ್ತದೆ ಮತ್ತು ಪ್ರತಿಯೊಬ್ಬ ಪಂಜಾಬಿಯೂ ಗೆಲ್ಲುತ್ತಾನೆ ಎಂದು ಸಿಧು ಟ್ವೀಟ್ ಮಾಡಿದ್ದಾರೆ.
Will uphold principles of Gandhi Ji & Shastri Ji … Post or No Post will stand by @RahulGandhi & @priyankagandhi ! Let all negative forces try to defeat me, but with every ounce of positive energy will make Punjab win, Punjabiyat (Universal Brotherhood) win & every punjabi win !! pic.twitter.com/6r4pYte06E
— Navjot Singh Sidhu (@sherryontopp) October 2, 2021
ಸಿಧು ರಾಜೀನಾಮೆ ನೀಡಿದ್ದೇಕೆ?
ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಬದಲಿಸಿದ ಬಳಿಕ ಎಲ್ಲವೂ ಸರಿಯಾಗಬಹುದು ಎಂದು ಭಾವಿಸಿದ್ದ ಕಾಂಗ್ರೆಸ್ಗೆ ಸೆಪ್ಟೆಂಬರ್ 28ರಂದು ನವಜೋತ್ ಸಿಂಗ್ ಸಿಧು ಶಾಕ್ ನೀಡಿದ್ದರು. ಚರಣಜಿತ್ ಸಿಂಗ್ ಛನ್ನಿ ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ನೂತನ ಡಿಜಿಪಿಯನ್ನಾಗಿ ಐಪಿಎಸ್ ಅಧಿಕಾರಿ ಇಕ್ಬಾಲ್ ಪ್ರೀತ್ ಸಿಂಗ್ರನ್ನು ನೇಮಕ ಮಾಡಿದ್ದರು. ಅಷ್ಟೇ ಅಲ್ಲ, ರಾಣಾ ಗುರ್ಜಿತ್ ಸಿಂಗ್ರಿಗೆ ಕ್ಯಾಬಿನೆಟ್ನಲ್ಲಿ ಸ್ಥಾನ ನೀಡಲಾಗಿತ್ತು. ಈ ಎರಡೂ ವಿಷಯಗಳಿಂದ ಕ್ರೋಧಗೊಂಡ ನವಜೋತ್ ಸಿಂಗ್ ಸಿಧು ಏಕಾಏಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದಾದ ಬಳಿಕ ಚರಣಜಿತ್ ಸಿಂಗ್ ಛನ್ನಿ ನವಜೋತ್ ಸಿಂಗ್ರ ಕೆಲವು ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸಿಧು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆದರೆ ಸ್ಪಷ್ಟವಾಗಿ ಚಿತ್ರಣ ಸಿಕ್ಕಿಲ್ಲ.
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ನಲ್ಲಿ ಮುಗಿಯದ ಗೊಂದಲ; ಹರೀಶ್ ರಾವತ್ ಸ್ಥಾನಕ್ಕೆ ಬರಲಿದ್ದಾರಾ ಹರೀಶ್ ಚೌಧರಿ?
ಡಿವೋರ್ಸ್ ಬಗ್ಗೆ ಸ್ಯಾಮ್ ಫ್ಯಾನ್ಸ್ ಮಾತನಾಡುವಂತಿಲ್ಲ; ಇದು ಸಮಂತಾ ಸೂಚನೆ