ಮಧ್ಯಪ್ರದೇಶ: ಸೇನೆಯ ವಾಯು ವಿಮಾನಗಳಾದ ಸುಖೋಯ್-30 (Sukhoi-30) ಮತ್ತು ಮಿರಾಜ್ 2000 (Mirage 2000) ಮಧ್ಯೆ ಡಿಕ್ಕಿ ಹೊಡೆದು ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಪತನಗೊಂಡಿವೆ. ವಿವರಗಳನ್ನು ನಿರೀಕ್ಷಿಸಲಾಗಿದೆ. ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿದೆ. ಈ ಅಪಘಾತವು ಬೆಳಿಗ್ಗೆ 5:30ಕ್ಕೆ ಸಂಭವಿಸಿದೆ. ಎರಡೂ ವಿಮಾನಗಳಿಂದ ಪೈಲಟ್ಗಳು ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ ಎಂದು ಹೇಳಲಾಗಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನ ಗಡಿಯ ಮೊರೆನಾ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ದೈನಂದಿನ ತಾಲೀಮು ನಡೆಸುತ್ತಿರುವಾಗ ಅಪಘಾತ ಸಂಭವಿಸಿದೆ ಎಂದು ಮೊರೆನಾ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಗ್ವಾಲಿಯರ್ ವಾಯುನೆಲೆಯಿಂದ ಯುದ್ಧವಿಮಾನಗಳು ಟೇಕಾಫ್ ಆಗಿದ್ದವು, ವಿಮಾನ ಹಾರಾಟ ಆರಂಭಿಸಿದ 10 ನಿಮಿಷಗಳಲ್ಲಿ ಅಪಘಾತ ಸಂಭವಿಸಿತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಇಬ್ಬರು ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೊರೆನಾ ಜಿಲ್ಲಾಧಿಕಾರಿ ಅಂಕಿತ್ ಆಸ್ಥಾನ ಹೇಳಿದರು. ಇದೀಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯುಪಡೆ ಮುಖ್ಯಸ್ಥಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ.
ಇದನ್ನೂ ಓದಿ: Big News: ಕ್ಯಾಲಿಫೋರ್ನಿಯಾದಲ್ಲಿ ಆಕಾಶದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ; ಹಲವು ಜನ ಸಾವು
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ಎರಡು ಯುದ್ಧ ವಿಮಾನಗಳ ನಡುವೆ ವಾಯು ಘರ್ಷಣೆ ಸಂಭವಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಲು ಐಎಎಫ್ ತನಿಖಾ ನ್ಯಾಯಾಲಯಕ್ಕೆ ಆದೇಶಿಸಿದೆ. ಭವಿಷ್ಯದಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷಗಳ ಉಂಟಾಗಬಾರದು ಎಂದು ಎರಡು ವಿಮಾನಗಳು ತಾಲೀಮು ನಡೆಸಿದೆ ಎಂದು ಹೇಳಿದೆ. ಆದರೆ ಇದೀಗ ತಾಂತ್ರಿಕ ದೋಷ ಕಂಡು ಬಂದಿರಬಹುದು ಎಂದು ಹೇಳಲಾಗಿದೆ. ಸುಖೋಯ್-30 ಯುದ್ಧವಿಮಾನದ ಪೈಲಟ್ನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆ ಸಾಗಿಸಲಾಗಿದೆ.
ಸುಖೋಯ್ ಸು -30 ಮತ್ತು ಮಿರಾಜ್ 2000 ಮಧ್ಯಪ್ರದೇಶದ ಗ್ವಾಲಿಯರ್ ಬಳಿ ಪತನಗೊಂಡ ನಂತರ ಭಾರತೀಯ ವಾಯುಪಡೆಯ ಪೈಲಟ್ ಸಾವನ್ನಪ್ಪಿದ್ದಾರೆ. Su-30 ನಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಿರಾಜ್‌ನಲ್ಲಿನ ಪೈಲಟ್ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಪತನಗೊಂಡ ವಿಮಾನದ ಅವಶೇಷಗಳು ರಾಜಸ್ಥಾನದ ಭರತ್‌ಪುರ ಮತ್ತು ಮಧ್ಯಪ್ರದೇಶದ ಮೊರೆನಾದಲ್ಲಿ ಪತ್ತೆಯಾಗಿವೆ.
Two fighter aircraft of IAF were involved in an accident near Gwalior today morning. The aircraft were on routine operational flying training mission.
One of the three pilots involved, sustained fatal injuries. An inquiry has been ordered to determine the cause of the accident.— Indian Air Force (@IAF_MCC) January 28, 2023
ಬೆಳವಣಿಗೆಗಳನ್ನು ದೃಢೀಕರಿಸಿದ ಮೊರೆನಾ ಎಸ್‌ಪಿ, ಒಂದು ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದು, ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಮತ್ತು ಮೂರನೇ ಪೈಲಟ್‌ನ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಹೇಳಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:40 am, Sat, 28 January 23