Banned Documentaries: ಇನ್ಷಾಲ್ಲಾ, ಕಲ್ಕತ್ತಾ, ಫ್ಯಾಂಟಮ್ ಇಂಡಿಯಾ… ಭಾರತದಲ್ಲಿ ಈ ಹಿಂದೆ ನಿಷೇಧವಾದ 5 ಸಾಕ್ಷ್ಯಚಿತ್ರಗಳು

Banned Documentaries in India: ಭಾರತದಲ್ಲಿ ಸಾಕ್ಷ್ಯ ಚಿತ್ರಗಳ ನಿಷೇಧದ ವಿಚಾರಕ್ಕೆ ಬಂದರೆ ಕೆಲ ಘಟನೆಗಳು ಪ್ರಮುಖವಾಗಿ ಮುನ್ನೆಲೆಗೆ ಬರುತ್ತವೆ. ಅಂಥ ನಾಲ್ಕೈದು ಡಾಕ್ಯುಮೆಂಟರಿ ನಿಷೇಧಗಳ ವಿವರ ಈ ಕೆಳಕಂಡಂತಿದೆ.

Banned Documentaries: ಇನ್ಷಾಲ್ಲಾ, ಕಲ್ಕತ್ತಾ, ಫ್ಯಾಂಟಮ್ ಇಂಡಿಯಾ... ಭಾರತದಲ್ಲಿ ಈ ಹಿಂದೆ ನಿಷೇಧವಾದ 5 ಸಾಕ್ಷ್ಯಚಿತ್ರಗಳು
ಭಾರತದಲ್ಲಿ ಈ ಹಿಂದೆ ನಿಷೇಧವಾದ ಸಾಕ್ಷ್ಯಚಿತ್ರಗಳು ಒಂದಲ್ಲ, ಎರಡಲ್ಲImage Credit source: OneIndia Hindi
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Jan 28, 2023 | 11:50 AM

ನವದೆಹಲಿ: ದೇಶದಲ್ಲಿ ಈಗ ಬಿಬಿಸಿ ಡಾಕ್ಯುಮೆಂಟರಿ (BBC documentary) ಬಗ್ಗೆ ಬಹಳಷ್ಟು ಚರ್ಚೆಗಳಾಗುತ್ತಿವೆ. ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 2002ರ ಗುಜರಾತ್ ಗಲಭೆ ಘಟನೆಗಳ (2002 Gujarat Riot Incident) ಬಗ್ಗೆ ಬಿಬಿಸಿ ಮಾಡಿರುವ ಸಾಕ್ಷ್ಯ ಚಿತ್ರವನ್ನು ಭಾರತ ನಿಷೇಧಿಸಿದೆ. “ಇಂಡಿಯಾ: ದಿ ಮೋದಿ ಕ್ವಶ್ಚನ್” (India: The Modi Question) ಹೆಸರಿನ ಈ ಡಾಕ್ಯುಮೆಂಟರಿಯಲ್ಲಿ ಗುಜರಾತ್ ಗಲಭೆ ಘಟನೆಗಳಾದಾಗ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಅವರ ಪ್ರಚೋದನೆ ಇತ್ತು ಎಂಬ ಅಂಶವನ್ನು ತಿಳಿಸಲಾಗಿದೆ.

ಆಗಿನ ಗಲಭೆ ಘಟನೆಗಳಿಗೆ ಸಾಕ್ಷ್ಯಗಳಾಗಿದ್ದವರೆನ್ನಲಾದವರ ಕೆಲವ ಹೇಳಿಕೆಗಳನ್ನು ಆಧರಿಸಿ ಬಿಬಿಸಿ ಈ ಸಾಕ್ಷ್ಯಚಿತ್ರ ತಯಾರಿಸಿದೆ. ಆದರೆ, ಭಾರತೀಯ ಕೋರ್ಟುಗಳು ಗುಜರಾತ್ ಗಲಭೆ ಘಟನೆಗಳಲ್ಲಿ ಅಂದಿನ ಸಿಎಂ ನರೇಂದ್ರ ಮೋದಿಯವರ ಪಾತ್ರ ಇರುವುದಕ್ಕೆ ಸಾಕ್ಷ್ಯಗಳಿಲ್ಲ ಎಂದು ಹೇಳಿ ಕ್ಲೀನ್ ಚಿಟ್ ಕೊಟ್ಟಿವೆ. ಆದರೂ ಕೂಡ 2002ರ ಗುಜರಾತ್ ಗಲಭೆ ಘಟನೆಗಳಲ್ಲಿ ನರೇಂದ್ರ ಮೋದಿ ಪಾತ್ರ ಇದೆ ಎಂದು ವಿಪಕ್ಷಗಳು ಪ್ರತೀ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆರೋಪ ಮಾಡುವುದು ಮುಂದುವರಿದಿದೆ.

ಅಷ್ಟಕ್ಕೂ ಚಲನಚಿತ್ರಗಳಾಗಲೀ, ಸಾಕ್ಷ್ಯಚಿತ್ರಗಳಾಗಲೀ, ಪುಸ್ತಕಗಳಾಗಲೀ ಭಾರತದಲ್ಲಿ ನಿಷೇಧವಾಗುವುದು ಹೊಸದೇನಲ್ಲ. ಇದು ಜಾಗತಿಕ ವಿದ್ಯಮಾನವೂ ಹೌದು. ಸಲ್ಮಾನ್ ರಷ್ದೀ ಬರೆದಿದ್ದ ಸಟಾನಿಕ್ ವರ್ಸಸ್ ಪುಸ್ತಕ ಮುಸ್ಲಿಮರ ಭಾವನೆಗೆ ಧಕ್ಕೆ ತರುತ್ತದೆಂದು ಭಾರತಲ್ಲಿಯೂ ನಿಷೇಧಿಸಲಾಗಿತ್ತು. ಹೀಗೆ ದೊಡ್ಡ ಪಟ್ಟಿಯೇ ಆಗುತ್ತದೆ. ಆದರೆ, ಸಾಕ್ಷ್ಯ ಚಿತ್ರಗಳ ನಿಷೇಧದ ವಿಚಾರಕ್ಕೆ ಬಂದರೆ ಕೆಲ ಘಟನೆಗಳು ಪ್ರಮುಖವಾಗಿ ಮುನ್ನೆಲೆಗೆ ಬರುತ್ತವೆ. ಅಂಥ ನಾಲ್ಕೈದು ಡಾಕ್ಯುಮೆಂಟರಿ ನಿಷೇಧಗಳ ವಿವರ ಈ ಕೆಳಕಂಡಂತಿದೆ.

ಕಲ್ಕತ್ತಾ ಮತ್ತು ಫಾಂಟಮ್ ಇಂಡಿಯಾ

ಇವು ಎಪ್ಪತ್ತರ ದಶಕದಲ್ಲಿ ಬಿಬಿಸಿಯೇ ತಯಾರಿಸಿದ ಎರಡು ಸಾಕ್ಷ್ಯಚಿತ್ರಗಳು (Calcutta and Phantom India). ಭಾರತದ ಜನಜೀವನದ ಬಗ್ಗೆ ತಪ್ಪಾಗಿ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ಈ ಎರಡು ಡಾಕ್ಯುಮೆಂಟರಿಗಳನ್ನು ಬ್ಯಾನ್ ಮಾಡಲಾಗಿತ್ತು. 1972ರಲ್ಲಿ ನಿಷೇಧವನ್ನು ಹಿಂಪಡೆಯಲಾಯಿತು.

ರಾಮ್ ಕೇ ನಾಮ್

1992ರಲ್ಲಿ ಆನಂದ್ ಪಟ್ವರ್ಧನ್ ತಯಾರಿಸಿದ ಸಾಕ್ಷ್ಯಚಿತ್ರ ರಾಮ್ ಕೇ ನಾಮ್ (Ram Ke Nam) ಅನ್ನು ನಿಷೇಧಿಸಲಾಗಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಮಾಡಿದ ಪ್ರಯತ್ನಗಳನ್ನು ಆಧಾರವಾಗಿಟ್ಟುಕೊಂಡು ಈ ಸಾಕ್ಷ್ಯಚಿತ್ರ ಮಾಡಲಾಗಿತ್ತು. ದೇಶ ವಿದೇಶಗಳಲ್ಲಿ ಈ ಡಾಕ್ಯುಮೆಂಟರಿಗೆ ಒಳ್ಳೆಯ ಹೆಸರು ಇತ್ತಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆಂಬ ಕಾರಣಕ್ಕೆ ಭಾರತದಲ್ಲಿ ಇದರ ಪ್ರಸಾರಕ್ಕೆ ನಿಷೇಧ ಹಾಕಲಾಗಿತ್ತು.

ಫೈನಲ್ ಸಲ್ಯೂಷನ್

18-19 ವರ್ಷಗಳ ಹಿಂದೆ ರಾಕೇಶ್ ಶರ್ಮಾ ಫೈನಲ್ ಸಲ್ಯೂಷನ್ (Final Solution) ಎಂಬ ಡಾಕ್ಯುಮೆಂಟರಿ ನಿರ್ಮಿಸಿದ್ದರು. ಇದೂ ಕೂಡ 2002ರ ಗುಜರಾತ್ ಗಲಭೆ ಘಟನೆಗಳ ಸುತ್ತ ಆದ ನೈಜ ಘಟನೆಗಳ ಆಧಾರಿತವಾಗಿ ತಯಾರಾದ ಸಾಕ್ಷ್ಯಚಿತ್ರವಾಗಿತ್ತು. ಗಲಭೆಗಳನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು ಎಂಬುದು ಈ ಡಾಕ್ಯುಮೆಂಟರಿಯ ಮೂಲವಸ್ತುವಾಗಿತ್ತು.

ಆಗ ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಇತ್ತು. ಅನುಪಮ್ ಖೇರ್ ನೇತೃತ್ವದ ಅಂದಿನ ಸೆನ್ಸಾರ್ ಮಂಡಳಿಯು ಕೋಮುಗಲಭೆಗೆ ಎಡೆ ಮಾಡಿಕೊಡುತ್ತದೆಂಬ ಕಾರಣಕ್ಕೆ ಫೈನಲ್ ಸೊಲ್ಯೂಷನ್ ಬಿಡುಗಡೆಗೆ ಅನುಮತಿ ನಿರಾಕರಿಸಿತು. 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದಾಗ ಫೈನಲ್ ಸಲ್ಯೂಷನ್ ಮೇಲಿನ ನಿಷೇಧವನ್ನು ಹಿಂಪಡೆಯಲಾಯಿತು. ಈ ಡಾಕ್ಯುಮೆಂಟರಿಗೆ ಆಗ ರಾಷ್ಟ್ರೀಯ ಪ್ರಶಸ್ತಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಗಳು ಸಿಕ್ಕವು.

ಇಂಡಿಯಾಸ್ ಡಾಟರ್

ಬಿಬಿಸಿ ನಿರ್ಮಿಸಿದ ಇಂಡಿಯಾಸ್ ಡಾಟರ್ (India’s Daughter) ಎಂಬ ಡಾಕ್ಯುಮೆಂಟರಿಯನ್ನು 2015ರಲ್ಲಿ ಭಾರತದಲ್ಲಿ ನಿಷೇಧಿಸಲಾಗಿತ್ತು. ಇದು 2012ರಲ್ಲಿ ದೆಹಲಿಯಲ್ಲಿ ಸಂಭವಿಸಿದ ನಿರ್ಭಯಾ ಅತ್ಯಾಚಾರ ಕೊಲೆ ಘಟನೆಯನ್ನು ಆಧರಿಸಿ ಮಾಡಲಾದ ಸಾಕ್ಷ್ಯಚಿತ್ರವಾಗಿತ್ತು. ಭಾರತದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ತರಲು ಪಿತೂರಿ ನಡೆದಿದೆ ಎಂಬುದು ನಿಷೇಧಕ್ಕೆ ಇದ್ದ ಕಾರಣವಾಗಿತ್ತು.

ಇನ್ಷಾಲ್ಲಾ, ಫುಟ್ಬಾಲ್

2010ರಲ್ಲಿ ಅಶ್ವಿನ್ ಕುಮಾರ್ ಅವರು ಯುವ ಕಾಶ್ಮೀರಿ ಫುಟ್ಬಾಲ್ ಆಟಗಾರನ ಜೀವನದ ಸುತ್ತಲ ಘಟನೆಗಳನ್ನು ಆಧರಿಸಿ ಇನ್ಷಾಲ್ಲಾ ಫುಟ್ಬಾಲ್ ಎಂಬ ಸಾಕ್ಷ್ಯ ಚಿತ್ರ ತಯಾರಿಸಿದ್ದರು. ಒಬ್ಬ ಮಾಜಿ ಉಗ್ರಗಾಮಿಯ ಮಗನಾಗಿ ಈ ಯುವ ಆಟಗಾರ ಅದೆಷ್ಟು ಕಷ್ಟ ಅನುಭವಿಸಿದ ಎಂಬುದು ಪ್ರಮುಖ ಅಂಶ. ಭಾರತೀಯ ಸೇನೆಯ ಉಪಸ್ಥಿತಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಜನಬದುಕು ಹೇಗಿದೆ ಎಂಬ ಚಿತ್ರಣವನ್ನೂ ಡಾಕ್ಯುಮೆಂಟರಿಯಲ್ಲಿ ತೋರಿಸಲಾಗಿತ್ತು.

Published On - 11:50 am, Sat, 28 January 23

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ