AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deadly For Democracy: ನ್ಯಾಯಾಂಗದ ಮೇಲೆ ಸವಾರಿ ಪ್ರಜಾಪ್ರಭುತ್ವಕ್ಕೆ ಮಾರಕ; ಕಿರಣ್ ರಿಜಿಜು ಹೇಳಿಕೆಗೆ ನಾರಿಮನ್ ಆಕ್ಷೇಪ

ನಾರಿಮನ್ ಅವರು 2021ರ ಆಗಸ್ಟ್​​ನಲ್ಲಿ ನಿವೃತ್ತರಾಗುವುದಕ್ಕೂ ಮುನ್ನ ಸುಪ್ರೀಂ ಕೋರ್ಟ್​ ಕೊಲೀಜಿಯಂ ಭಾಗವಾಗಿದ್ದರು. ಕೇಂದ್ರ ಸರ್ಕಾರವು ನ್ಯಾಯಮೂರ್ತಿಗಳ ನೇಮಕ ವಿಚಾರವಾಗಿ ನ್ಯಾಯಾಂಗದ ವಿರುದ್ಧ ಟೀಕೆ ಮಾಡುತ್ತಿರುವ ಸಂದರ್ಭದಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

Deadly For Democracy: ನ್ಯಾಯಾಂಗದ ಮೇಲೆ ಸವಾರಿ ಪ್ರಜಾಪ್ರಭುತ್ವಕ್ಕೆ ಮಾರಕ; ಕಿರಣ್ ರಿಜಿಜು ಹೇಳಿಕೆಗೆ ನಾರಿಮನ್ ಆಕ್ಷೇಪ
ಫಾಲಿ ನಾರಿಮನ್
Ganapathi Sharma
|

Updated on:Jan 28, 2023 | 12:44 PM

Share

ಮುಂಬೈ: ಸುಪ್ರೀಂ ಕೋರ್ಟ್‌ (Supreme Court) ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಕೊಲೀಜಿಯಂ ವ್ಯವಸ್ಥೆ (Collegium system) ಮತ್ತು ನ್ಯಾಯಾಂಗದ ಬಗ್ಗೆ ಕೇಂದ್ರ ಕಾನೂನು ಸಸಚಿವ ಕಿರಣ್ ರಿಜಿಜು (Kiren Rijiju) ಮಾಡಿರುವ ಟೀಕೆಗಳಿಗೆ ಸುಪ್ರೀಂ ಕೋರ್ಟ್​ನ ನಿವೃತ್ತ ಜಡ್ಜ್ ಫಾಲಿ ನಾರಿಮನ್ (Fali Nariman) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗದ ಮೇಲಿನ ಸವಾರಿಯು ಪ್ರಜಾಪ್ರಭುತ್ವಕ್ಕೆ ಮಾರಕವಾಗಬಹುದು ಎಂದು ಅವರು ಹೇಳಿದ್ದಾರೆ. ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಮತ್ತು ನ್ಯಾಯಾಂಗದ ನಡುವಣ ಸಂಘರ್ಷ ಕಳೆದ ಕೆಲವು ದಿನಗಳಿಂದ ಮುಂದುವರಿದಿದೆ. ಸಚಿವ ರಿಜಿಜು ಕೂಡ ನ್ಯಾಯಾಂಗದ ವಿರುದ್ಧ ಅವಕಾಶ ಸಿಕ್ಕಲ್ಲೆಲ್ಲ ವಾಗ್ದಾಳಿ ಮುಂದುವರಿಸಿದ್ದಾರೆ. ಇದರ ಬೆನ್ನಲ್ಲೇ ಸಚಿವರ ಹೇಳಿಕೆಗೆ ನಾರಿಮನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಂಬೈ ವಿಶ್ವವಿದ್ಯಾಲಯದ ಕಾನೂನು ವಿಭಾಗ ಆಯೋಜಿಸಿರುವ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ಬಗ್ಗೆ ಕೇಂದ್ರ ಕಾನೂನು ಸಚಿವರು ಮಾಡಿರುವ ಟೀಕೆಗಳನ್ನು ಗಮನಿಸಿದ್ದೇವೆ. ನೀವು ತಿಳಿದಿರಲೇಬೇಕಾದ ಸಂವಿಧಾನದ ಎರಡು ಮೂಲ ಅಂಶಗಳಿವೆ ಎಂಬುದನ್ನು ಕಾನೂನು ಸಚಿವರಿಗೆ ನಾನು ಹೇಳಲು ಬಯಸುತ್ತೇನೆ. ನಮ್ಮಲ್ಲಿ ಅಮೆರಿಕದಂಥಲ್ಲ. ಚುನಾಯಿತರಲ್ಲದ ಐವರು ನ್ಯಾಯಾಧೀಶರು ಸಂವಿಧಾನದ ವ್ಯಾಖ್ಯಾನಕ್ಕೆ ಅನುಗುಣವಾಗಿ ಮತ್ತು ವಿಶ್ವಾಸಾರ್ಹವಾಗಿ ದಾಖಲೆಗಳನ್ನು ಅನುಮೋದಿಸಿದರೆ ಅದನ್ನು ಅನುಸರಿಸುವುದು ಅಧಿಕಾರ ಹೊಂದಿದ ವ್ಯಕ್ತಿಯಾಗಿ ನಿಮ್ಮ ಕರ್ತವ್ಯವಾಗಿರಲಿದೆ. ಇದು ಸೆಕ್ಷನ್ 144ರಲ್ಲಿ ಉಲ್ಲೇಖಿಸಿದೆ ಎಂದು ಹೇಳಿದ್ದಾರೆ.

ಜಡ್ಜ್ ಸ್ಥಾನಕ್ಕೆ ಒಬ್ಬರ ಹೆಸರನ್ನು ಕೊಲೀಜಿಯಂ ಶಿಫಾರಸು ಮಾಡಿದರೆ ಅದಕ್ಕೆ ಸರ್ಕಾರ 30 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡಬೇಕು. ಹೀಗೆ ಮಾಡದೆ ನ್ಯಾಯಾಂಗದ ಮೇಲೆ ಸವಾರಿ ಮಾಡಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕವಾದೀತು ಎಂದು ನಾರಿಮನ್ ಹೇಳಿದ್ದಾರೆ.

ಇದನ್ನೂ ಓದಿ: Bhopal Gas Tragedy: ಭೋಪಾಲ್ ಅನಿಲ ದುರಂತದ ಪರಿಹಾರದ ಬಗ್ಗೆ 30 ವರ್ಷದ ನಂತರ ಮರುಪರಿಶೀಲನೆ ಅಸಾಧ್ಯ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನಾರಿಮನ್ ಅವರು 2021ರ ಆಗಸ್ಟ್​​ನಲ್ಲಿ ನಿವೃತ್ತರಾಗುವುದಕ್ಕೂ ಮುನ್ನ ಸುಪ್ರೀಂ ಕೋರ್ಟ್​ ಕೊಲೀಜಿಯಂ ಭಾಗವಾಗಿದ್ದರು. ಕೇಂದ್ರ ಸರ್ಕಾರವು ನ್ಯಾಯಮೂರ್ತಿಗಳ ನೇಮಕ ವಿಚಾರವಾಗಿ ನ್ಯಾಯಾಂಗದ ವಿರುದ್ಧ ಟೀಕೆ ಮಾಡುತ್ತಿರುವ ಸಂದರ್ಭದಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ. ಕಿರಣ್ ರಿಜಿಜು ಅವರ ಕೆಲವು ಹೇಳಿಕೆಗಳಿಗೆ ಸುಪ್ರೀಂ ಕೋರ್ಟ್​ ಕೂಡ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿತ್ತು.

ನ್ಯಾಯಮೂರ್ತಿಗಳನ್ನು ತಾವೇ ನೇಮಿಸಿಕೊಳ್ಳುತ್ತೇವೆ ಎನ್ನುವ ಮೂಲಕ ಸುಪ್ರೀಂ ಕೋರ್ಟ್‌ ಕೊಲೀಜಿಯಂ ಸಂವಿಧಾನವನ್ನು ಅಪಹರಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿಯೊಬ್ಬರು ಇತ್ತೀಚೆಗೆ ಹೇಳಿರುವುದಾಗಿ ವರದಿಯಾಗಿತ್ತು. ಅದನ್ನು ಉಲ್ಲೇಖಿಸಿದ್ದ ಕಿರಣ್ ರಿಜಿಜು, ಜನರು ಕೂಡ ಇದೇ ನಿಲುವನ್ನು ಹೊಂದಿದ್ದಾರೆ ಎಂದು ಹೇಳಿದ್ದರು. ಉಪರಾಷ್ಟ್ರಪತಿ ಜಗದೀಪ್ ಧನ್​ಕರ್ ಸಹ ಕೇಂದ್ರ ಸರ್ಕಾರವನ್ನು ಬೆಂಬಲಿಸಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:04 pm, Sat, 28 January 23