Bhopal Gas Tragedy: ಭೋಪಾಲ್ ಅನಿಲ ದುರಂತದ ಪರಿಹಾರದ ಬಗ್ಗೆ 30 ವರ್ಷದ ನಂತರ ಮರುಪರಿಶೀಲನೆ ಅಸಾಧ್ಯ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಭೋಪಾಲ್ ಅನಿಲ ದುರಂತ 1984ರಲ್ಲಿ ಸಂಭವಿಸಿತು. ಅದಾಗಿ ಸುಮಾರು 5 ವರ್ಷಗಳ ನಂತರ 1989ರಲ್ಲಿ ಈ ಪ್ರಕರಣ ಇತ್ಯರ್ಥಕ್ಕೆ ಬಂದಿತು.

Bhopal Gas Tragedy: ಭೋಪಾಲ್ ಅನಿಲ ದುರಂತದ ಪರಿಹಾರದ ಬಗ್ಗೆ 30 ವರ್ಷದ ನಂತರ ಮರುಪರಿಶೀಲನೆ ಅಸಾಧ್ಯ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಭೋಪಾಲ್ ಅನಿಲ ದುರಂತ Image Credit source: Twitter
Follow us
| Updated By: ಸುಷ್ಮಾ ಚಕ್ರೆ

Updated on: Jan 11, 2023 | 1:12 PM

ಭೋಪಾಲ್: ಭೋಪಾಲ್ ಅನಿಲ ದುರಂತದ (Bhopal Gas Leak Tragedy) ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರವನ್ನು ಕೋರಿ ಸಲ್ಲಿಸಿದ್ದ ಕೇಂದ್ರ ಸರ್ಕಾರದ (Union Government) ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ (Supreme Court), ಸಂತ್ರಸ್ತರಿಗೆ ಪಾವತಿಸಬೇಕಾದ ಪರಿಹಾರವನ್ನು ಮರುಪರಿಶೀಲಿಸಲು ಸರ್ಕಾರ ತೆಗೆದುಕೊಂಡ ಸಮಯದ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದೆ. ಅನಿಲ ದುರಂತದ ಸಂತ್ರಸ್ತರಿಗೆ ನೀಡಲಾದ ಪರಿಹಾರವು ತಪ್ಪಾಗಿದೆ ಎಂದು ತಿಳಿದುಕೊಳ್ಳಲು ನಿಮಗೆ 30 ವರ್ಷಗಳು ಬೇಕಾಯಿತೇ? ಪರಿಹಾರದ ಅಂಕಿಅಂಶಗಳನ್ನು ಮರು ಪರಿಶೀಲನೆ ಮಾಡಲು ನಿಮಗೆ 26-27 ವರ್ಷಗಳು ಬೇಕಾಯಿತೇ? ಎಂದು ಪ್ರಶ್ನಿಸಿದೆ.

ಕೇಂದ್ರ ಸರ್ಕಾರವು ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (UCC)ನಿಂದ 1989ರಲ್ಲಿ ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಭೋಪಾಲ್ ದುರಂತದ ಸಂತ್ರಸ್ತರು ಹೆಚ್ಚಿನ ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದು ಸರ್ಕಾರಕ್ಕೆ ತೃಪ್ತಿ ಇದ್ದರೆ ಆ ಹಣವನ್ನು ಸರ್ಕಾರ ಪಾವತಿಸಬೇಕು. ನಂತರ ಆ ಹಣವನ್ನು ಬೇರೆಯವರಿಂದ ವಸೂಲಾತಿಗೆ ಯೋಚಿಸಬೇಕು. ಈ ದುರಂತದಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಯನ್ನು ನಿರ್ಧರಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ಸಮಯದ ಬಗ್ಗೆ ನ್ಯಾಯಾಲಯವು ಟೀಕಿಸಿತು.

ಇದನ್ನೂ ಓದಿ: Bhopal Gas Tragedy: ಭೋಪಾಲ್​ ಭೀಕರ ಅನಿಲ ದುರಂತಕ್ಕೆ 37 ವರ್ಷ; ಸಂತ್ರಸ್ತರಿಗೆ ಸಿಗಲೇ ಇಲ್ಲ ನ್ಯಾಯ, ಜೈಲು ಸೇರಲಿಲ್ಲ ದೋಷಿಗಳು !

ಅನಿಲ ದುರಂತದ ಸಂತ್ರಸ್ತರಿಗೆ ನೀಡಲಾದ ಪರಿಹಾರದ ಮೊತ್ತವು ಸಾಕಷ್ಟಿಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆಗಳನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಯುಸಿಸಿಯಿಂದ ಪಡೆದ ಮೊತ್ತದಿಂದ 50 ಕೋಟಿ ರೂ. ಇನ್ನೂ ಆರ್‌ಬಿಐ ಬಳಿ ಏಕೆ ಉಳಿದಿದೆ? ಅದೇಕಿನ್ನೂ ವಿತರಣೆಯಾಗಿಲ್ಲ? ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಹಾಕಿದೆ.

ಭೋಪಾಲ್ ಅನಿಲ ದುರಂತ 1984ರಲ್ಲಿ ಸಂಭವಿಸಿತು. ಅದಾಗಿ ಸುಮಾರು 5 ವರ್ಷಗಳ ನಂತರ 1989ರಲ್ಲಿ ಈ ಪ್ರಕರಣ ಇತ್ಯರ್ಥಕ್ಕೆ ಬಂದಿತು. 1992 ಮತ್ತು 2004ರ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ 1,549 ಕೋಟಿ ರೂ.ಗಳನ್ನು ವಿತರಿಸಿದೆ. 2004ರ ನಂತರ ಸುಮಾರು 1,517 ಕೋಟಿ ರೂ. ಪರಿಹಾರವನ್ನು ಪಾವತಿಸಲಾಗಿದೆ ಎಂದು ಎಜಿ ಹೇಳಿದರು. ಎಲ್ಲ ಹಕ್ಕುದಾರರಿಗೆ ಹಣ ಪಾವತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಹೇಳಿದ್ದು, ಇನ್ನೂ 50 ಕೋಟಿ ರೂ. ಆರ್‌ಬಿಐ ಬಳಿ ಏಕೆ ಇದೆ? ಎಂದು ನ್ಯಾಯಮೂರ್ತಿ ಕೌಲ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭೋಪಾಲ್​ ನೀರು ಸಂಸ್ಕರಣ ಘಟಕದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆ; ಹಲವರ ಸ್ಥಿತಿ ಗಂಭೀರ

ಭೋಪಾಲ್​​ನ ಯೂನಿಯನ್​ ಕಾರ್ಬೈಡ್​ ಇಂಡಿಯಾ ಲಿಮಿಟೆಡ್​ ಕೀಟನಾಶಕ ಘಟಕದಲ್ಲಿ 1984ರ ಡಿಸೆಂಬರ್​ 2-3ರ ಮಧ್ಯರಾತ್ರಿಯಲ್ಲಿ ಈ ಘೋರ ದುರಂತ ನಡೆದಿತ್ತು. ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ದುರಂತದಲ್ಲೊಂದು ಎಂದು ಕರೆಯಲ್ಪಡುವ ಭೋಪಾಲ್​ ಅನಿಲ ದುರಂತದಲ್ಲಿ ಸಿಲುಕಿ ಸಂಕಟಪಟ್ಟವರು 5 ಲಕ್ಷಕ್ಕೂ ಅಧಿಕ ಮಂದಿ. ಮಿಥೇಲ್​ ಗ್ಯಾಸ್​ನಿಂದ ಪರಿತಪಿಸಿದರು. ಈ ದುರಂತದಲ್ಲಿ ತಕ್ಷಣಕ್ಕೆ ಮೃತಪಟ್ಟವರು 2259 ಮಂದಿ ಎಂದು ಹೇಳಲಾಗಿತ್ತು. ಆದರೆ 2008ರಲ್ಲಿ ಅಂದಿನ ಮಧ್ಯಪ್ರದೇಶ ಸರ್ಕಾರ ಒಟ್ಟು 3787 ಮಂದಿ ಮೃತಪಟ್ಟಿದ್ದಾರೆಂದು ಹೇಳಿ ಅವರ ಕುಟುಂಬಕ್ಕೆ ಪರಿಹಾರ ನೀಡಿತ್ತು. ಈ  ದುರಂತದಲ್ಲಿ ಗಾಯಗೊಂಡ, ಅಸ್ವಸ್ಥರಾದ 5,74,366 ಮಂದಿಗೂ ನೆರವು ನೀಡಿತ್ತು. ಅಂದು ಸೋರಿಕೆಯಾದ ಮಿಥೇಲ್​ನಿಂದ ಹಲವರು ಕೆಲವೇ ದಿನಗಳಲ್ಲಿ ಮೃತಪಟ್ಟರು. ಒಂದಷ್ಟು ಜನ ರೋಗದಿಂದ ಬಳಲಿ ಸತ್ತರು. ಸದ್ಯದ ಅಂದಾಜಿನ ಪ್ರಕಾರ ಅಂದಿನ ಭೋಪಾಲ್​ ಅನಿಲ ದುರಂತದಲ್ಲಿ ಒಟ್ಟಾರೆ ಸತ್ತವರು 8 ಸಾವಿರಕ್ಕೂ ಹೆಚ್ಚು ಮಂದಿ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ