Watch ಮಧ್ಯರಾತ್ರಿ ರೈತರ ಮನೆಯೊಳಗೆ ನುಗ್ಗಿ ಲಾಠಿ ಪ್ರಹಾರ ಮಾಡಿದ ಬಿಹಾರ ಪೊಲೀಸರು
ಕಂಪನಿಯು ಹಳೆಯ ದರದಲ್ಲಿ ಬಲವಂತವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಇದು ಕಳೆದ ಎರಡು ತಿಂಗಳಿನಿಂದ ಭಾರೀ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಇದಾದ ನಂತರ ರಾತ್ರಿಯಲ್ಲಿ ಮಲಗಿದ್ದ ರೈತರ ಮನೆಗಳಿಗೆ ಪೊಲೀಸರು ನುಗ್ಗಿ ಮಹಿಳೆಯರು, ಪುರುಷರು ಮತ್ತು ಮಕ್ಕಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
ಬಿಹಾರದ (Bihar)ಬಕ್ಸರ್ (Buxar) ಜಿಲ್ಲೆಯ ಪೊಲೀಸರು ಮಧ್ಯರಾತ್ರಿ ರೈತರ ಮನೆಗಳಿಗೆ ನುಗ್ಗಿ ನಿದ್ದೆಯಲ್ಲಿರುವವರನ್ನು ಕ್ರೂರವಾಗಿ ಥಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಈ ಕೃತ್ಯದ ವಿಡಿಯೊವನ್ನು ಕುಟುಂಬದ ಸದಸ್ಯರು ಹಂಚಿಕೊಂಡಿದ್ದಾರೆ. ಪುರುಷರು ಮತ್ತು ಮಹಿಳೆಯರು ಸಹಾಯಕ್ಕಾಗಿ ಕಿರುಚಾಡುವುದು ವಿಡಿಯೊದಲ್ಲಿದೆ. ಸಹಾಯಕ್ಕಾಗಿ ಕೂಗುವ ಜನರ ಮೇಲೆ ಪೊಲೀಸರು ಕೋಲುಗಳಿಂದ ಹಲ್ಲೆ ನಡೆಸುತ್ತಿದ್ದಾರೆ. ರೈತರು ಹಂಚಿಕೊಂಡ ವಿಡಿಯೊಗಳಲ್ಲಿ ಪೊಲೀಸರು ತಮ್ಮ ದಾಳಿಯನ್ನು ಪ್ರಾರಂಭಿಸುವ ಮುನ್ನ ಮನೆಗಳ ಹೊರಗೆ ಜಮಾಯಿಸುವುದನ್ನು ತೋರಿಸುತ್ತವೆ. 2010-11ರ ಮೊದಲು ಎಸ್‌ಜೆವಿಎನ್‌ನಿಂದ ವಿದ್ಯುತ್ ಸ್ಥಾವರಕ್ಕಾಗಿ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿ ರಾಜ್ಯದ ರೈತರು ಸ್ವಲ್ಪ ಸಮಯದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಚಾಲ್ತಿಯಲ್ಲಿರುವ ಮೊತ್ತಕ್ಕೆ ಅನುಗುಣವಾಗಿ ರೈತರಿಗೆ ಆ ಸಮಯದಲ್ಲಿ ಪರಿಹಾರ ನೀಡಲಾಯಿತು. ಆದರೆ, ಕಳೆದ ವರ್ಷ ಕಂಪನಿಯು ಹೆಚ್ಚಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾರಂಭಿಸಿದಾಗ, ಪ್ರಸ್ತುತ ದರದಂತೆ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದರು.
ಕಂಪನಿಯು ಹಳೆಯ ದರದಲ್ಲಿ ಬಲವಂತವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಇದು ಕಳೆದ ಎರಡು ತಿಂಗಳಿನಿಂದ ಭಾರೀ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಇದಾದ ನಂತರ ರಾತ್ರಿಯಲ್ಲಿ ಮಲಗಿದ್ದ ರೈತರ ಮನೆಗಳಿಗೆ ಪೊಲೀಸರು ನುಗ್ಗಿ ಮಹಿಳೆಯರು, ಪುರುಷರು ಮತ್ತು ಮಕ್ಕಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
ಮುಫಾಸಿಲ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅಮಿತ್ ಕುಮಾರ್ ನೇತೃತ್ವದಲ್ಲಿ ರೈತರ ಮೇಲೆ ಹಲ್ಲೆ ನಡೆದಿದೆ. ಈ ದಾಳಿ ಸಮರ್ಥಿಸಿಕೊಂಡ ಕುಮಾರ್, ಎಸ್‌ಜೆವಿಎನ್‌ನಿಂದ ಎಫ್‌ಐಆರ್‌ನಲ್ಲಿ ಹೆಸರಿಸಲಾದ ರೈತರನ್ನು ಬಂಧಿಸಲು ಪ್ರದೇಶವನ್ನು ತಲುಪಿದಾಗ ಅವರ ಮೇಲೆ ಮೊದಲು ದಾಳಿ ಮಾಡಲಾಯಿತು ಎಂದು ಹೇಳಿದರು. ಪೊಲೀಸರು ಪ್ರತಿದಾಳಿ ನಡೆಸಿದರು ಎಂದಿದ್ದಾರೆ ಕುಮಾರ್.
बिहार पुलिस का गुंडाराज। वीडियो कैमरे में कैद, देखिए
बक्सर पुलिस के तांडव का वीडियो
चौसा थर्मल पावर प्रोजेक्ट का विरोध कर रहे किसानों के घर में घुसकर की मारपीट@bihar_police @NitishKumar @BJP4Bihar @SushilModi @VijayKrSinhaBih @yadavtejashwi @dmalok pic.twitter.com/s0m04Xo5YZ
— Ghanshyam Dev (@Ghanshyamdev3) January 11, 2023
ಚೌಸಾದಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಮೊದಲು, ಜಿಲ್ಲೆಯ ರೈತರಿಗೆ ಸಂಸ್ಥೆಯಿಂದ ಜಿಲ್ಲೆಯಲ್ಲಿ ತ್ವರಿತ ಅಭಿವೃದ್ಧಿ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಗಳ ಭರವಸೆ ನೀಡಲಾಯಿತು. ಈ ಪ್ರದೇಶದಲ್ಲಿ ಶಾಲೆಗಳು, ಹೋಟೆಲ್‌ಗಳು ಮತ್ತು ಜೀವನೋಪಾಯದ ಸಂಪನ್ಮೂಲಗಳನ್ನು ನಿರ್ಮಿಸಲಾಗುವುದು, ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು ಎಂದು ರೈತರಿಗೆ ಭರವಸೆ ನೀಡಲಾಗಿತ್ತು.
ಆದರೆ ರೈತರು ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆಯೇ ದಬ್ಬಾಳಿಕೆ ಆರಂಭವಾಗಿದೆ ಎಂದು ಆರೋಪಿಸಿದರು. ವರದಿಗಳ ಪ್ರಕಾರ, ಇತರ ರಾಜ್ಯಗಳಿಂದ ಜನರನ್ನು ನೇಮಿಸಿಕೊಳ್ಳಲಾಗಿದೆ, ರಾಜಕಾರಣಿಗಳಿಗೆ ಸಿಎಸ್ಆರ್ ಹಣವನ್ನು ಖರ್ಚು ಮಾಡಲಾಗಿದೆ ಮತ್ತು ಗೌರವಾರ್ಥವಾಗಿ ಅಧಿಕಾರಿಗಳಿಗೆ ಲಕ್ಷಾಂತರ ಮೌಲ್ಯದ ಉಡುಗೊರೆಗಳನ್ನು ಕಳುಹಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ