Plane Crashes: ರಾಜಸ್ಥಾನದ ಭರತ್‌ಪುರದಲ್ಲಿ ವಿಮಾನ ಪತನ
ರಾಜಸ್ಥಾನದ ಭರತ್‌ಪುರದಲ್ಲಿ ಚಾರ್ಟರ್ಡ್ ವಿಮಾನವೊಂದು ಪತನಗೊಂಡಿದೆ ಎಂದು ಎಎನ್‌ಐ ವರದಿ ಮಾಡಿದೆ. ಪೊಲೀಸರು ಮತ್ತು ಆಡಳಿತವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಲೋಕ್ ರಂಜನ್

ಭರತ್‌ಪುರ: ರಾಜಸ್ಥಾನದ (Rajasthan) ಭರತ್‌ಪುರದಲ್ಲಿ ಚಾರ್ಟರ್ಡ್ ವಿಮಾನವೊಂದು ಪತನಗೊಂಡಿದೆ ಎಂದು ಎಎನ್‌ಐ ವರದಿ ಮಾಡಿದೆ. ಪೊಲೀಸರು ಮತ್ತು ಆಡಳಿತವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಲೋಕ್ ರಂಜನ್ ಹೇಳಿದ್ದಾರೆ. ರಾಜಸ್ಥಾನದ ಭರತ್‌ಪುರದಲ್ಲಿ ಶಂಕಿತ ತಾಂತ್ರಿಕ ದೋಷದಿಂದಾಗಿ ಶನಿವಾರ ಚಾರ್ಟರ್ಡ್ ವಿಮಾನವೊಂದು ಪತನಗೊಂಡಿದೆ.ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಭರತ್‌ಪುರ ಎಸ್‌ಪಿ ಶ್ಯಾಮ್ ಸಿಂಗ್, ವಿಮಾದಲ್ಲಿ ಬೆಂಕಿಯ ತೀವ್ರತೆಯು ಗಾಳಿಗೆ ಅಪ್ಪಳಿಸಿದ ಎಂದು ಹೇಳಲಾಗಿದೆ, ಆದರೆ ಈ ಬಗ್ಗೆ ಯಾವುದೇ ರೀತಿಯ ಹೆಚ್ಚಿನ ಮಾಹಿತಿ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.
Rajasthan | A chartered aircraft crashed in Bharatpur. Police and administration have been sent to the spot. More details are awaited: District Collector Alok Ranjan pic.twitter.com/wfbofbKA3I
— ANI MP/CG/Rajasthan (@ANI_MP_CG_RJ) January 28, 2023
ವಿಮಾನದ ಪೈಲಟ್ ಎಜೆಕ್ಟ್ ಆಗಿದ್ದು, ಆತನ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ. ರಕ್ಷಣಾ ಘಟಕದ ಅಧಿಕಾರಿಗಳು ಇಲ್ಲಿದ್ದಾರೆ. ಪೈಲಟ್ ಇನ್ನೂ ಪತ್ತೆಯಾಗಿಲ್ಲ ಇದರ ಈ ಬಗ್ಗೆ ಕಾರ್ಯಚರಣೆ ನಡೆಸುತ್ತಿದ್ದೇವೆ.
Published On - 11:27 am, Sat, 28 January 23




