Narendra Modi: ದೇವನಾರಾಯಣರ ಕ್ಷೇತ್ರಕ್ಕೆ ಮೋದಿ ಭೇಟಿ; ರಾಜಸ್ಥಾನ ಚುನಾವಣೆ ಮೇಲೆ ಪ್ರಧಾನಿ ಕಣ್ಣು?

Devnarayan Birth Anniversary at Bhilwara- ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ತಿಂಗಳು ಇರುವ ಹಿನ್ನೆಲೆಯಲ್ಲಿ ದೇವನಾರಾಯಣರ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಡುತ್ತಿರುವುದು ಬಹಳ ಕುತೂಹಲ ಮೂಡಿಸಿದೆ.

Narendra Modi: ದೇವನಾರಾಯಣರ ಕ್ಷೇತ್ರಕ್ಕೆ ಮೋದಿ ಭೇಟಿ; ರಾಜಸ್ಥಾನ ಚುನಾವಣೆ ಮೇಲೆ ಪ್ರಧಾನಿ ಕಣ್ಣು?
ಪ್ರಧಾನಿ ನರೇಂದ್ರ ಮೋದಿImage Credit source: PTI
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Jan 28, 2023 | 10:53 AM

ಜೈಪುರ: ಇಂದು ಶನಿವಾರ ರಾಜಸ್ಥಾನದ ಜಾನಪದ ದೇವರೆನ್ನಲಾದ ದೇವನಾರಾಯಣರ ಜನ್ಮದಿನವಾಗಿದ್ದು (Lord Devnarayan Birth Anniversary), ಈ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜಸ್ಥಾನದ ಭಿಲ್ವಾರ ಜಿಲ್ಲೆಯಲ್ಲಿರುವ ದೇವನಾರಾಯಣರ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.

ವಿಷ್ಣುವಿನ ಅವತಾರವೆಂದು ನಂಬಲಾದ ದೇವನಾರಾಯಣರ ಜನ್ಮಸ್ಥಳವು ಭಿಲ್ವಾರದಿಂದ 60 ಕಿಮೀ ದೂರದ ಮಾಲಸೇರಿ ದುಂಗ್ರಿ ಗ್ರಾಮದಲ್ಲಿ ಇದೆ. ಇಲ್ಲಿ ಅವರ 1,111ನೇ ಜನ್ಮದಿನದ ಪ್ರಯುಕ್ತ ಅವತಾರಂ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ.

ದೇವನಾರಾಯರು ಗುಜ್ಜರ್ ಸಮುದಾಯಕ್ಕೆ (Gurjar community) ಸೇರಿದ ದೇವಾಂಶರು. 10ನೇ ಶತಮಾನದಲ್ಲಿ ಮಾಘ ಮಾಸದ ಶುಕ್ಲ ಸಪ್ತಮಿಯ ದಿನದಂದು ಜನಿಸಿದ ಇವರು ಸವಾಯ್ ಭೋಜ್ ಮತ್ತು ಸಾದು ಮಾತಾ ಅವರ ಮಗ. ಗುರ್ಜರ ಸಮುದಾಯ ರಾಜಸ್ಥಾನದ ಪ್ರಬಲ ವರ್ಗಗಳಲ್ಲಿ ಒಂದು. ರಾಜಸ್ಥಾನದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ, ಅದರಲ್ಲೂ ಪೂರ್ವ ಭಾಗದ ಪ್ರದೇಶಗಳಲ್ಲಿ ಈ ಸಮುದಾಯದ ಮತದಾರರು ನಿರ್ಣಾಯಕ ಎನಿಸಿದ್ದಾರೆ.

ಈ ಕಾರಣಕ್ಕೆ, ಮತ್ತು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ತಿಂಗಳು ಇರುವ ಹಿನ್ನೆಲೆಯಲ್ಲಿ ದೇವನಾರಾಯಣರ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಡುತ್ತಿರುವುದು ಬಹಳ ಕುತೂಹಲ ಮೂಡಿಸಿದೆ. ಪ್ರಧಾನಿಗಳು ರಾಜಕೀಯ ಕಾರಣಕ್ಕೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರಾದರೂ ಚುನಾವಣೆ ಸಮೀಪ ಇರುವುದರಿಂದ ಮೋದಿ ಭೇಟಿಯಿಂದ ಬಿಜೆಪಿಗೆ ಲಾಭ ಆಗುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ರಾಜಸ್ಥಾನದ ಪ್ರಬಲ ಮತ್ತು ಯುವ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಇದೇ ಸಮುದಾಯಕ್ಕೆ ಸೇರಿದವರು. ಆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಚಿನ್ ಪೈಲಟ್ ಸಿಎಂ ಆಕಾಂಕ್ಷಿಯಾಗಿದ್ದರು. ಅವರೇ ಮುಖ್ಯಮಂತ್ರಿಯಾಗಬಹುದು ಎಂಬುದು ಬಹುತೇಕ ಖಾತ್ರಿಯಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅಶೋಕ್ ಗೆಹ್ಲೋತ್​ಗೆ ಹೈಕಮಾಂಡ್ ಮಣೆ ಹಾಕಿತು. ಆಗಿನಿಂದಲೂ ಗೆಹ್ಲೋತ್ ಮತ್ತು ಸಚಿನ್ ಪೈಲಟ್ ಮಧ್ಯೆ ಒಳಗಿಂದೊಳಗೆ ಜಟಾಪಟಿ ನಡೆಯುತ್ತಲೇ ಇದೆ. ಕೆಲವೊಮ್ಮೆ ಇದು ಬಹಿರಂಗವಾಗಿ ತೋರ್ಪಡಿಸಿರುವುದೂ ಹೌದು. ಸಚಿನ್ ಪೈಲಟ್​ಗೆ ಸಿಎಂ ಸ್ಥಾನ ಕೈತಪ್ಪಿರುವುದಕ್ಕೆ ಗುಜ್ಜರ್ ಸಮುದಾಯ ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದೆ ಎಂಬುದು ಅಲ್ಲಿನ ರಾಜಕೀಯ ತಜ್ಞರ ಅನಿಸಿಕೆ. ಹೀಗಾಗಿ, ಗುಜ್ಜರ್ ಸಮುದಾಯದ ಈ ಬೇಗುದಿಯನ್ನು ಬಿಜೆಪಿ ತನ್ನ ಪರ ಅಲೆಯಾಗಿ ಮಾರ್ಪಡಿಸಿಕೊಳ್ಳುವ ಅವಕಾಶವಂತೂ ಇದೆ. ದೇವನಾರಾಯಣರ ಜನ್ಮದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂಂದ್ರ ಮೋದಿ ಪಾಲ್ಗೊಳ್ಳುತ್ತಿರುವುದೂ ಈ ನಿಟ್ಟಿನಲ್ಲಿ ಬಿಜೆಪಿಗೆ ಲಾಭ ತರುವುದರಲ್ಲಿ ಸಂಶಯ ಇಲ್ಲ.

Published On - 10:53 am, Sat, 28 January 23

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?