AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ವಿರೋಧಿಸಿದ್ದಕ್ಕೆ 8ರ ಬಾಲೆಯನ್ನು ಕೊಲೆ ಮಾಡಿದ್ದ ಆರೋಪಿಗೆ ಗುಂಡೇಟು

ವಾರಾಣಸಿಯ ಪ್ರಾಥಮಿಕ ಶಾಲೆಯ ಬಳಿ ಗೋಣಿ ಚೀಲದಲ್ಲಿ ತುಂಬಿದ್ದ ಎಂಟು ವರ್ಷದ ಬಾಲಕಿಯ ಅರೆಬೆತ್ತಲೆ ಶವ ಪತ್ತೆಯಾಗಿದೆ. ಸಂತ್ರಸ್ತೆಯ ನೆರೆಹೊರೆಯವರಾದ ಆರೋಪಿ ಇರ್ಷಾದ್ ನನ್ನು ಪೊಲೀಸರು ಕೆಲಕಾಲ ಗುಂಡಿನ ಚಕಮಕಿ ನಡೆಸಿ ಬಂಧಿಸಿದ್ದಾರೆ. ಆತನ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಲಾಗಿದೆ. ಸುಜಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕನ ಶವ ಮಂಗಳವಾರ ಬಹದ್ದೂರ್‌ಪುರ ಪ್ರಾಥಮಿಕ ಶಾಲೆಯ ಗಡಿ ಗೋಡೆಯ ಬಳಿ ಪತ್ತೆಯಾಗಿದೆ.

ಅತ್ಯಾಚಾರ ವಿರೋಧಿಸಿದ್ದಕ್ಕೆ 8ರ ಬಾಲೆಯನ್ನು ಕೊಲೆ ಮಾಡಿದ್ದ ಆರೋಪಿಗೆ ಗುಂಡೇಟು
ಆರೋಪಿ ಇರ್ಷಾದ್
ನಯನಾ ರಾಜೀವ್
|

Updated on:Dec 26, 2024 | 1:29 PM

Share

ವಾರಾಣಸಿಯ ಶಾಲೆಯೊಂದರ ಬಳಿಕ ಗೋಣಿಚೀಲದಲ್ಲಿ 8 ವರ್ಷದ ಬಾಲಕಿಯ ಅರೆಬೆತ್ತಲೆ ಶವ ಪತ್ತೆಯಾಗಿತ್ತು. ಅತ್ಯಾಚಾರವನ್ನು ವಿರೋಧಿಸಿದ್ದಕ್ಕೆ ಆರೋಪಿ ಬಾಲಕಿಯನ್ನು ಕೊಂದು, ಗೋಣಿಚೀಲದಲ್ಲಿ ತುಂಬಿ ಎಸೆದು ಪರಾರಿಯಾಗಿದ್ದ. ಆರೋಪಿ ಇರ್ಷಾದ್​ಗೆ ಗುಂಡು ಹಾರಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಾರಾಣಸಿಯ ಸುಜಾಬಾದ್​ ಪ್ರದೇಶದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯ ಶವ ಬಹದ್ದೂರ್ ಪ್ರಾಥಮಿಕ ಶಾಲೆಯ ಗೋಡೆಯ ಬಳಿ ಪತ್ತೆಯಾಗಿದೆ. ದೇಹದಾದ್ಯಂತ ರಕ್ತದ ಕಲೆಗಳು, ಮೂಗೇಟಿನ ಗುರುತುಗಳಿವೆ.

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇರ್ಷಾದ್ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಸ್ವಲ್ಪ ಸಮಯದ ನಂತರ ಗೋಣಿಚೀಲದಲ್ಲಿ ಶವದೊಂದಿಗೆ ಹೊರಗೆ ಬರುತ್ತಿರುವುದು ಕಂಡುಬಂದಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಯತ್ನವನ್ನು ವಿರೋಧಿಸಿದ ಇರ್ಷಾದ್ ಬಾಲಕಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ, ಪಕ್ಕದ ಮನೆಯ ಇರ್ಷಾದ್ ಎಂಬಾತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿರುವುದು ದೃಢಪಟ್ಟಿದೆ. ಆಕೆ ತಡೆದ ಕಾರಣ ಕಲ್ಲಿನಿಂದ ಆಕೆಯನ್ನು ಕೊಂದು ಹಾಕಿದ್ದಾನೆ. ಶವವನ್ನು ಗೋಣಿಚೀಲದಲ್ಲಿ ಹಾಕಿ ಶಾಲೆಯ ಮುಂದೆ ಎಸೆದಿದ್ದಾನೆ ಎಂದು ವಾರಾಣಸಿ ಕಾಶಿ ವಲಯದ ಡಿಸಿಪಿ ಗೌರವ್ ಬನ್ಸ್ವಾಲ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ:  ಥಾಣೆಯಲ್ಲಿ ಚಾಕೊಲೇಟ್ ತರಲು ಹೋಗಿದ್ದ 13 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿ ಕೊಲೆ

ಬಾಲಕಿಯ ತಂದೆ ದಿವ್ಯಾಂಗರಾಗಿದ್ದು, ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಾಲಕಿ ಸಂಜೆ 6.30ರ ಸುಮಾರಿಗೆ ಸಮೀಪದ ಅಂಗಡಿಗೆ ಸೊಳ್ಳೆಬತ್ತಿಯನ್ನು ತರಲು ಹೋಗಿದ್ದಳು. ಆಕೆ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಎಷ್ಟೇ ಹುಡುಕಿದರೂ ಸಿಗದ ಹಿನ್ನೆಲೆಯಲ್ಲಿ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಹತ್ತಿರದ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಿದ ನಂತರ, ಪೊಲೀಸರು ಶಂಕಿತ ಇರ್ಷಾದ್‌ನನ್ನು ಪತ್ತೆ ಮಾಡಿದ್ದಾರೆ. ಆತನನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಇರ್ಷಾದ್ ಪೊಲೀಸ್ ತಂಡದತ್ತ ಗುಂಡು ಹಾರಿಸಿದ್ದಾನೆ. ಪ್ರತಿಯಾಗಿ ಪೊಲೀಸರೂ ಗುಂಡು ಹಾರಿಸಿದ್ದು, ಈ ವೇಳೆ ಇರ್ಷಾದ್ ಕಾಲಿಗೆ ಗುಂಡು ತಗುಲಿದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:12 pm, Thu, 26 December 24