ಜೈಪುರ ಆಗಸ್ಟ್ 09: ಬಿಜೆಪಿಯ ಸಿದ್ಧಾಂತವು ಮಣಿಪುರಕ್ಕೆ(Manipur) ಬೆಂಕಿ ಹಚ್ಚಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ಆರೋಪಿಸಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಬಯಸಿದರೆ, ಎರಡು-ಮೂರು ದಿನಗಳಲ್ಲಿ ಬೆಂಕಿಯನ್ನು ನಂದಿಸಬಹುದು ಎಂದು ಹೇಳಿದರು. ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಮಂಗರ್ ಧಾಮ್‌ನಲ್ಲಿ ಪಕ್ಷದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮಣಿಪುರವನ್ನು ವಿಭಜಿಸಿದ್ದಾರೆ. ಕಳೆದ ಎರಡು-ಮೂರು ತಿಂಗಳಿನಿಂದ ಈಶಾನ್ಯ ರಾಜ್ಯವು ಭಾರತದ ಭಾಗವಲ್ಲ ಎಂದು ತೋರುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಯ ಸಿದ್ಧಾಂತವು ಮಣಿಪುರಕ್ಕೆ ಬೆಂಕಿ ಹಚ್ಚಿದೆ, ಜನರನ್ನು ಕೊಲ್ಲಲಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಬಯಸಿದರೆ, ಮಣಿಪುರದ ಬೆಂಕಿಯನ್ನು ಎರಡು-ಮೂರು ದಿನಗಳಲ್ಲಿ ನಂದಿಸಬಹುದು, ಆದರೆ ಬೆಂಕಿ ಉರಿಯುತ್ತಾ ಇರಲು ಬಯಸುತ್ತಾರೆ ಎಂದಿದ್ದಾರೆ ರಾಹುಲ್.
ಮಣಿಪುರದಲ್ಲಿ ಮೇ 3 ರಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಲೇ ಇದೆ . ಬಹುಸಂಖ್ಯಾತ ಮೈತಿ ಮತ್ತು ಬುಡಕಟ್ಟು ಕುಕಿ ಸಮುದಾಯದ ನಡುವಿನ ಘರ್ಷಣೆಯಲ್ಲಿ 150 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
#WATCH | Rajasthan: Once I asked my grandmother (Indira Gandhi) about the word ‘Adivasi’, and she said that these people are the first inhabitants of this country…Now BJP has introduced a new word ‘Vanvasi’. They say that these people are not Adivasi but Vanvasi. This is… pic.twitter.com/ZwXZo85HEU
— ANI (@ANI) August 9, 2023
ವಿಶ್ವ ಬುಡಕಟ್ಟು ದಿನದ ಸಂದರ್ಭದಲ್ಲಿ ಆಯೋಜಿಸಲಾದ ಈ ರ್ಯಾಲಿಯು ಈ ವರ್ಷದ ಕೊನೆಯಲ್ಲಿ ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರದ ಆರಂಭವನ್ನು ಸೂಚಿಸುತ್ತದೆ. ಆದಿವಾಸಿಗಳಿಗೆ ಬದಲಾಗಿ ಬುಡಕಟ್ಟು ಜನರನ್ನು “ವನವಾಸಿ” ಎಂದು ಕರೆದಿರುವುದು ಅವರಿಗೆ ಮಾಡಿದ ಅವಮಾನ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಒಮ್ಮೆ ನಾನು ನನ್ನ ಅಜ್ಜಿ (ಇಂದಿರಾ ಗಾಂಧಿ) ಅವರಲ್ಲಿ ‘ಆದಿವಾಸಿ’ ಪದದ ಬಗ್ಗೆ ಕೇಳಿದೆ. ಆಗ ಅವರು ಆದಿವಾಸಿಗಳು ಈ ದೇಶದ ಮೊದಲ ನಿವಾಸಿಗಳು ಎಂದು ಹೇಳಿದರು. ಈಗ ಬಿಜೆಪಿ ‘ವನವಾಸಿ’ ಎಂಬ ಹೊಸ ಪದವನ್ನು ಪರಿಚಯಿಸಿದೆ. ಈ ಜನರು ಆದಿವಾಸಿಗಳಲ್ಲ ಆದರೆ ವನವಾಸಿಗಳು ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ನಿಮಗೆ ಗಾಯವಾಗಿಲ್ಲ ತಾನೇ?; ಸ್ಕೂಟರ್ನಿಂದ ಬಿದ್ದ ವ್ಯಕ್ತಿಯ ಬಳಿ ಹೋಗಿ ವಿಚಾರಿಸಿದ ರಾಹುಲ್ ಗಾಂಧಿ
ಬಿಜೆಪಿಯು ಬುಡಕಟ್ಟು ಜನರನ್ನು ವನವಾಸಿ ಎಂದು ಕರೆಯುತ್ತದೆ, ಅವರ ಕಾಡುಗಳನ್ನು ಕಿತ್ತು ಅದಾನಿಗೆ ನೀಡುತ್ತದೆ ಎಂದು ರಾಹುಲ್, ಬುಡಕಟ್ಟು ಜನಾಂಗದ ಹಕ್ಕುಗಳು ಮತ್ತು ಅವರ ಕನಸುಗಳು ನನಸಾಗಬೇಕೆಂದು ಕಾಂಗ್ರೆಸ್ ಬಯಸುತ್ತದೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ