ರಾಯ್ಪುರ: ನಮ್ಮ ಚಳವಳಿಯಲ್ಲಿ ನೀವೂ ಕೈಜೋಡಿಸಿ ಎಂದು ಮಾಧ್ಯಮ ಸಂಸ್ಥೆಗಳಿಗೆ ರಾಕೇಶ್ ಟಿಕಾಯತ್ (Rakesh Tikait) ಕರೆ ನೀಡಿದ್ದಾರೆ. ನಿನ್ನೆ (ಸೆ.27) ರೈತಸಂಘಟನೆಗಳು ಮೂರು ಕೃಷಿ ಕಾಯ್ದೆಗಳ ವಿರುದ್ಧ ಭಾರತ್ ಬಂದ್ ನಡೆಸಿದ್ದಾರೆ. ಇಂದು ಛತ್ತೀಸ್ಗಢ್ನ ರಾಯ್ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ (BKU)ನಾಯಕ ರಾಕೇಶ್ ಟಿಕಾಯತ್, ನಮ್ಮ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು. ನಮ್ಮ ಮುಂದಿನ ಟಾರ್ಗೆಟ್ ಮಾಧ್ಯಮದವರು. ನೀವು ಉಳಿಯಬೇಕು ಎಂಬ ಆಸೆ ಹೊಂದಿದ್ದರೆ, ನಮ್ಮೊಂದಿಗೆ ಕೈಜೋಡಿಸಬೇಕು. ಇಲ್ಲದಿದ್ದರೆ ನೀವೂ ಕಷ್ಟ ಅನುಭವಿಸುತ್ತೀರಿ ಎಂದು ಹೇಳಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆದರೆ ಮಾತ್ರ ನಾವು ಪ್ರತಿಭಟನೆ ಕೈಬಿಡುತ್ತೇವೆ ಎಂದು ನಿನ್ನೆಯೇ ಹೇಳಿರುವ ರಾಕೇಶ್ ಟಿಕಾಯತ್ ಇಂದು ಛತ್ತೀಸ್ಗಢ್ ತಲುಪಿದ್ದಾರೆ. ಇಲ್ಲಿ ಮಾತನಾಡಿ, ದೇಶದಲ್ಲಿ ಕನಿಷ್ಠ ಬೆಂಬಲ ಬೆಲೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆ ವಿರುದ್ಧ ನಾವು ಧ್ವನಿ ಎತ್ತುತ್ತೇವೆ ಎಂದಿದ್ದಾರೆ. ನಂತರ ಮಾಧ್ಯಮದವರ ವಿರುದ್ಧವೇ ಮಾತನಾಡಿದ ಅವರು, ನೀವೆಲ್ಲ ದೆಹಲಿಯಲ್ಲಿ ಕುಳಿತು ದೇಶವನ್ನು ಮಾರುತ್ತಿರುವ ಕೇಂದ್ರ ಸರ್ಕಾರದ ಮೇಲೆಯೇ ಗಮನಹರಿಸಿದ್ದೀರಿ. ಈಗಾಗಲೇ ಅರ್ಧದೇಶವನ್ನು ಅದು ಮಾರಾಟ ಮಾಡಿದೆ. ಮಧ್ಯಪ್ರದೇಶದಲ್ಲಿ ಮಂಡಿಗಳನ್ನು ಮಾರಾಟ ಮಾಡಿದ್ದಾರೆ. ಈಗಾಗಲೇ 182 ಮಂಡಿಗಳು ಮಾರಾಟವಾಗಿದ್ದು, ಅವುಗಳ ಮೇಲೆಯೂ ಸ್ವಲ್ಪ ಗಮನಹರಿಸಿ. ಇಲ್ಲದೆ ಇದ್ದರೆ ಛತ್ತೀಸ್ಗಢ್ಕ್ಕೂ ಕಾಲಿಡುತ್ತಾರೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
#WATCH | … Everyone should join us. The next target will be media houses, if you want to be saved then join us, else you’ll also suffer: Bharatiya Kisan Union leader Rakesh Tikait after arriving in Raipur, Chhattisgarh pic.twitter.com/nnCJgS11Z5
— ANI (@ANI) September 28, 2021
ಛತ್ತೀಸ್ಗಢ್ನ ರಾಜಿಮ್ ನಗರದಲ್ಲಿ ಆಯೋಜಿಸಲಾಗಿರುವ ಕಿಸಾನ್ ಮಹಾಪಂಚಾಯತ್ ನಲ್ಲಿ ಮಾತನಾಡಲು ಆಗಮಿಸಿರುವ ರಾಕೇಶ್ ಟಿಕಾಯಿತ್, ಇಲ್ಲಿ ಹಣ್ಣು ಬೆಳೆಗಾರರ ಸಮಸ್ಯೆಯ ಬಗ್ಗೆ ಮಾತನಾಡಲಾಗುತ್ತದೆ. ಬೆಂಬಲ ಬೆಲೆಯ ಬಗ್ಗೆಯೂ ಧ್ವನಿ ಎತ್ತಲಾಗುವುದು. ಛತ್ತೀಸ್ಗಢ ರೈತರ ಅಭಿವೃದ್ಧಿಗೆ ಇನ್ನಷ್ಟು ಯೋಜನೆಗಳ ಅಗತ್ಯವಿದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Mysuru Dasara 2021: ದಸರಾ ಉದ್ಘಾಟಕರಾಗಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಆಯ್ಕೆ
Coronavirus: ಕೇರಳದಿಂದ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ ವಿಚಾರ; ಮಧ್ಯಪ್ರವೇಶಿಸಲು ಕೇರಳ ಹೈಕೋರ್ಟ್ ನಕಾರ
(If you want to be saved, then join us Says Farmer Leader Rakesh Tikait to Media houses In Raipur)