ಇನ್ನೆರಡೇ ತಿಂಗಳಲ್ಲಿ ದೇಶ -ರಾಜ್ಯದಲ್ಲಿ ಕೊರೊನಾ ಚಿತ್ರಣ ಹೇಗಿರುತ್ತದೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Jul 18, 2020 | 6:36 PM

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ದಾಪುಗಾಲಿಡುತ್ತಾ ಸಾಗುತ್ತಿರುವ ಕೊರೊನಾ ಮಹಾಮಾರಿ ಭಾರತದಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ಅನ್​ಲಾಕ್​ ನಂತರ ಉಲ್ಬಣಗೊಂಡಿರುವ ಸೋಂಕಿತರ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇದೀಗ, ದೇಶದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ ಮತ್ತೊಂದು ಆಘಾತಕಾರಿ ಮಾಹಿತಿ ನೀಡಿದೆ. ಸಂಸ್ಥೆಯ ತಂಡವೊಂದು ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ ಇದೇ ರೀತಿಯಾಗಿ ಸೋಂಕು ಹೆಚ್ಚುತ್ತಾ ಹೋದರೆ ಸೆಪ್ಟಂಬರ್ ತಿಂಗಳೊಳಗೆ ಸರಿಸುಮಾರು 35 ಲಕ್ಷ ಕೊರೊನಾ ಕೇಸ್​ಗಳು ವರದಿಯಾಗಲಿವೆ ಎಂಬ ಬೆಚ್ಚಿಬೀಳಿಸುವಂಥ ಮಾಹಿತಿ ನೀಡಿದೆ. ಆ ಪೈಕಿ […]

ಇನ್ನೆರಡೇ ತಿಂಗಳಲ್ಲಿ ದೇಶ -ರಾಜ್ಯದಲ್ಲಿ ಕೊರೊನಾ ಚಿತ್ರಣ ಹೇಗಿರುತ್ತದೆ ಗೊತ್ತಾ?
Follow us on

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ದಾಪುಗಾಲಿಡುತ್ತಾ ಸಾಗುತ್ತಿರುವ ಕೊರೊನಾ ಮಹಾಮಾರಿ ಭಾರತದಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ಅನ್​ಲಾಕ್​ ನಂತರ ಉಲ್ಬಣಗೊಂಡಿರುವ ಸೋಂಕಿತರ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇದೀಗ, ದೇಶದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ ಮತ್ತೊಂದು ಆಘಾತಕಾರಿ ಮಾಹಿತಿ ನೀಡಿದೆ.

ಸಂಸ್ಥೆಯ ತಂಡವೊಂದು ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ ಇದೇ ರೀತಿಯಾಗಿ ಸೋಂಕು ಹೆಚ್ಚುತ್ತಾ ಹೋದರೆ ಸೆಪ್ಟಂಬರ್ ತಿಂಗಳೊಳಗೆ ಸರಿಸುಮಾರು 35 ಲಕ್ಷ ಕೊರೊನಾ ಕೇಸ್​ಗಳು ವರದಿಯಾಗಲಿವೆ ಎಂಬ ಬೆಚ್ಚಿಬೀಳಿಸುವಂಥ ಮಾಹಿತಿ ನೀಡಿದೆ. ಆ ಪೈಕಿ ಕರ್ನಾಟಕದಲ್ಲೇ ಸುಮಾರು 2 ಲಕ್ಷ ಕೇಸ್​ಗಳು ಇರಲಿದೆ ಎಂದು ಸಹ ಹೇಳಿದೆ. ಜೊತೆಗೆ, ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರದಲ್ಲೇ ಒಟ್ಟು 6 ಲಕ್ಷ ಕೇಸ್​ಗಳು ಪತ್ತೆಯಾಗಲಿದೆ ಎಂದು ತಿಳಿದುಬಂದಿದೆ.

1.4 ಲಕ್ಷ ಸಾವುಗಳು?
ಪ್ರೊ. ಶಶಿಕುಮಾರ್​ ಮತ್ತು ಪ್ರೊ ದೀಪಕ್ ನೇತೃತ್ವದ ತಂಡ ನೀಡುರುವ ಅತ್ಯಂತ ಭೀಕರ ಚಿತ್ರಣದಲ್ಲಿ (Worst case scenario) ಸೆಪ್ಟಂಬರ್ 1ರೊಳಗೆ ಭಾರತದಲ್ಲಿ ಸೋಂಕಿನಿಂದ ಒಟ್ಟು 1.4 ಲಕ್ಷ ಸಾವುಗಳು ಸಂಭವಿಸಲಿದೆ ಎಂಬ ಮಾಹಿತಿ ಸಹ ನೀಡಿದೆ.