ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ದೇಶದಲ್ಲಿ ಹಲವು ಬಾರಿ ಚರ್ಚೆ ನಡೆದಿದೆ. ಈ ಬಗ್ಗೆ ವ್ಯತಿರಿಕ್ತ ಹೇಳಿಕೆಗಳು ಕೂಡ ಬಂದಿವೆ. ಕೆಲವರು ಗೋಮೂತ್ರ ಆರೋಗ್ಯಕರ ಎಂದು ಹೇಳಿದರೆ ಇನ್ನು ಕೆಲವರು ಈ ಹೇಳಿಕೆಯನ್ನು ಲೇವಡಿ ಮಾಡುತ್ತಾರೆ. ಇದೀಗ ಐಐಟಿ ಮದ್ರಾಸ್ ನಿರ್ದೇಶಕ ವಿ.ಕಾಮಕೋಟಿ ಅವರು ಗೋಮೂತ್ರದ ‘ಔಷಧೀಯ ಗುಣ’ಗಳನ್ನು ಶ್ಲಾಘಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಪಿಟಿಐ ವರದಿಯ ಪ್ರಕಾರ, ಕಾಮಕೋಟಿಯು ಗೋಮೂತ್ರದ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಜೀರ್ಣಕಾರಿ ಗುಣಲಕ್ಷಣಗಳಿವೆ ಎಂದು ಹೇಳಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ದೇಶಿ ತಳಿಯ ಗೋವುಗಳನ್ನು ಸಂರಕ್ಷಿಸಿ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದರ ಮಹತ್ವ ಕುರಿತು ಅವರು ಮಾತನಾಡಿದರು.
ತೀವ್ರ ಜ್ವರದಿಂದ ಬಳಲುತ್ತಿದ್ದ ನಂತರ ಗೋಮೂತ್ರ ಸೇವಿಸಿ ಗುಣಮುಖನಾದ ಸನ್ಯಾಸಿಯೊಬ್ಬನ ಜೀವನದ ಪ್ರಸಂಗವನ್ನು ಹೇಳುವಾಗ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಇರಿಟೇಬಲ್ ಬವೆಲ್ ಸಿಂಡ್ರೋಮ್, ದೊಡ್ಡ ಕರುಳಿಗೆ ಸಂಬಂಧಿಸಿದ ಕಾಯಿಲೆಯಂತಹ ಸಮಸ್ಯೆಗಳಿಗೆ ಇದು ಉಪಯುಕ್ತವಾಗಿದೆ ಎಂದು ಹೇಳಿದರು.
உலகில் உயர்கல்வி நிறுவனங்கள் புதிய புதிய அறிவியல் கண்டுபிடிப்புகளுக்கு பணத்தையும் உழைப்பையும் நேரத்தையும் செலவிடுகின்றன.
நம்ம நாட்டுல மட்டும் தான் மாட்டு மூத்திரத்த
ப்ரமோட் பண்ணிட்டு இருக்கானுக.வீடியோவில் பேசுபவர் கு.கா.மானியம் வாரிசு காமகோடி, IIT மெட்ராஸ் இயக்குநர்.😂 pic.twitter.com/NGEAoiRE60
— Shafeeq (@shafeeqkwt) January 19, 2025
ಗೋಮೂತ್ರದ ಕುರಿತ ಅವರ ಹೇಳಿಕೆಯು ಸತ್ಯಕ್ಕೆ ವಿರುದ್ಧವಾಗಿದೆ ಮತ್ತು ನಾಚಿಕೆಗೇಡಿನ ಸಂಗತಿ ಎಂದು ವಿಚಾರವಾದಿ ಸಂಘಟನೆ ಡಿಎಂಕೆ ಟೀಕಿಸಿದೆ. ಕೇಂದ್ರ ಸರ್ಕಾರ ದೇಶದ ಶಿಕ್ಷಣವನ್ನು ಹಾಳು ಮಾಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು. ಈ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ.
ಮತ್ತಷ್ಟು ಓದಿ:
ಕೇರಳ ಸರ್ಕಾರದ ಆಯುರ್ವೇದ ಕಂಪನಿಯಿಂದ ‘ಪಂಚಗವ್ಯ ಘೃತ’: ವೈರಲ್ ಪೋಸ್ಟ್ ಹಿಂದಿರುವ ನಿಜ ಸಂಗತಿಯಿದು
ಕಾಂಗ್ರೆಸ್ ನಾಯಕ ಕಾರ್ತಿ ಪಿ ಚಿದಂಬರಂ ಹೇಳಿಕೆಯನ್ನು ಖಂಡಿಸಿದ್ದಾರೆ ಮತ್ತು ಐಐಟಿ ಮದ್ರಾಸ್ ನಿರ್ದೇಶಕರು ಸುಳ್ಳು ವಿಜ್ಞಾನವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಅವರು ನಿರ್ದೇಶಕರ ಹೇಳಿಕೆಯನ್ನು ಟೀಕಿಸಿದ್ದಾರೆ ಮತ್ತು ಅವರನ್ನು ಸಂಸ್ಥೆಯಿಂದ ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ