ಹಿಮಾಚಲಪ್ರದೇಶ( Himachal Pradesh)ದ ಹಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಇನ್ನೊಂದೆಡೆ ದೆಹಲಿಯಲ್ಲಿ ಯಮುನಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ತೀವ್ರ ಕಟ್ಟೆಚ್ಚರವಹಿಸಲಾಗಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಯಮುನಾ ನದಿಯ ನೀರಿನ ಮಟ್ಟ 205.81 ಮೀಟರ್ ದಾಖಲಾಗಿದೆ. ನದಿಯ ಪ್ರವಾಹವನ್ನು ತೋರಿಸಲು ಲೋಹಾ ಪುಲ್‌ನಿಂದ ಡ್ರೋನ್ ದೃಶ್ಯಗಳನ್ನು ಎಎನ್‌ಐ ಬಿಡುಗಡೆ ಮಾಡಿದೆ.
ಜುಲೈ 13 ರಿಂದ ನದಿಯು ನಿಧಾನವಾಗಿ ಕಡಿಮೆಯಾಗಲು ಶುರುವಾಗಿತ್ತು ಮತ್ತು ಅಪಾಯದ ಮಟ್ಟಕ್ಕಿಂತ ಕಡಿಮೆಯಾಗಿತ್ತು ಮತ್ತು ಕೆಲವೇ ಗಂಟೆಗಳ ಹಿಂದೆ 205.7 ಮೀಟರ್‌ಗಳಷ್ಟು ಹರಿಯುತ್ತಿತ್ತು. ಈ ಹಿಂದೆ ಯಮುನಾ ನದಿಯ ನೀರಿನ ಮಟ್ಟ ಸಾರ್ವಕಾಲಿಕ ಗರಿಷ್ಠ 208.66 ಮೀಟರ್‌ನಷ್ಟು ದಾಖಲಾಗಿತ್ತು.
#WATCH | Himachal Pradesh: NH 5 blocked at three places in Kinnaur and Shimla districts due to landslides. Restoration work at NigulSari underway: NHAI
(Visual source: NHAI) pic.twitter.com/6FdCHdL8xH
— ANI (@ANI) July 23, 2023
ಹಿಮಾಚಲದಲ್ಲಿ ಮುಂದಿನ 24 ಗಂಟೆಗಳ ಕಾಲ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಸಿರ್ಮೌರ್ ಜಿಲ್ಲೆಯಲ್ಲಿ 195 ಮಿಮೀ ಮಳೆಯಾಗಿದೆ ಎಂದು ಐಎಂಡಿ ಉಪ ನಿರ್ದೇಶಕ ಬುಯಿ ಲಾಲ್ ಎಎನ್‌ಐಗೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: Mumbai Rain: ಮುಂಬೈಯಲ್ಲಿ ಭಾರೀ ಮಳೆ; ಪಾಲ್ಘರ್, ಥಾಣೆ, ರಾಯಗಢದಲ್ಲಿ ಆರೆಂಜ್ ಅಲರ್ಟ್
ಮುಂದಿನ 24 ಗಂಟೆಗಳಲ್ಲಿ ಚಂಬಾ, ಕಾಂಗ್ರಾ, ಕುಲು, ಮಂಡಿ, ಶಿಮ್ಲಾ, ಸೋಲನ್, ಸಿರ್ಮೌರ್ ಮತ್ತು ಬಿಲಾಸ್‌ಪುರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಈ ಎಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಭಾರತವಲ್ಲದೆ, ಗುಜರಾತ್ ಮತ್ತು ಮಹಾರಾಷ್ಟ್ರದ ಪಶ್ಚಿಮ ರಾಜ್ಯಗಳು ಸಹ ಭಾರಿ ಪ್ರವಾಹಕ್ಕೆ ಸಾಕ್ಷಿಯಾಗುತ್ತಿವೆ. ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ನವಸಾರಿ ಮತ್ತು ಜುನಾಗಢ ಎರಡು ಸ್ಥಳಗಳಲ್ಲಿ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ