Mumbai Rain: ಮುಂಬೈಯಲ್ಲಿ ಭಾರೀ ಮಳೆ; ಪಾಲ್ಘರ್, ಥಾಣೆ, ರಾಯಗಢದಲ್ಲಿ ಆರೆಂಜ್ ಅಲರ್ಟ್

ಭಾರೀ ಮಳೆಯಿಂದಾಗಿ ಯವತ್ಮಾಲ್ ಜಿಲ್ಲೆಯ ಮಹಾಗಾಂವ್ ಮತ್ತು ಆನಂದನಗರ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಎಲ್ಲಾ 110 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

Mumbai Rain: ಮುಂಬೈಯಲ್ಲಿ ಭಾರೀ ಮಳೆ; ಪಾಲ್ಘರ್, ಥಾಣೆ, ರಾಯಗಢದಲ್ಲಿ ಆರೆಂಜ್ ಅಲರ್ಟ್
ಮುಂಬೈ ಮಳೆ
Follow us
ರಶ್ಮಿ ಕಲ್ಲಕಟ್ಟ
|

Updated on:Jul 22, 2023 | 8:25 PM

ಮುಂಬೈ ಜುಲೈ 22: ಮುಂಗಾರು ವಿಳಂಬವಾದ ನಂತರ ಮಹಾರಾಷ್ಟ್ರದ (Maharashtra) ವಿವಿಧ ಭಾಗಗಳಲ್ಲಿ ಈಗ ತೀವ್ರ ಮಳೆಯಾಗಿದೆ. ಪಾಲ್ಘರ್, ಥಾಣೆ, ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳ ಪ್ರತ್ಯೇಕ ಪ್ರದೇಶಗಳಲ್ಲಿ ಭಾನುವಾರದಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ನೀಡಿದೆ. ಮಧ್ಯ ಮಹಾರಾಷ್ಟ್ರದ ಕೊಂಕಣ, ಘಟ್ಟ ಪ್ರದೇಶಗಳು ಜುಲೈ 23-26 ರಿಂದ  ಭಾರೀ ಮಳೆಯೊಂದಿಗೆ ಲಘು,ಮಧ್ಯಮ ಮಟ್ಟದಲ್ಲಿ ವ್ಯಾಪಕ ಮಳೆಯನ್ನು ನಿರೀಕ್ಷಿಸಬಹುದು. ಮರಾಠವಾಡದಲ್ಲಿ ಶನಿವಾರ ಮಳೆ ಇರಲಿದೆ. ಮುಂದಿನ 2 ದಿನಗಳಲ್ಲಿ ಮುಂಬೈನಲ್ಲಿ ಭಾರೀ ಮಳೆ (Mumbai Rains) ಮುಂದುವರಿಯುವ ಸಾಧ್ಯತೆಯಿದೆ.

ಇದಲ್ಲದೆ, ಉತ್ತರ ಕೊಂಕಣ, ಮಧ್ಯ ಮಹಾರಾಷ್ಟ್ರದಲ್ಲಿ ಇಂದು ರೀ ಮಳೆಯಾಗುವ ಬಗ್ಗೆ ಐಎಂಡಿ ಎಚ್ಚರಿಕೆ ನೀಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. IMD ಪ್ರಕಾರ, ಶುಕ್ರವಾರ ಬೆಳಗ್ಗೆ 8:30 ರಿಂದ ಶನಿವಾರ 8:30 ರವರೆಗೆ ರಾಜ್ಯಗಳಲ್ಲಿ ಗಮನಾರ್ಹ ಮಳೆಯಾಗಿದೆ.

ವಿದರ್ಭ: ಯೆಯೋಟ್ಮಲ್ (240ಮಿಮೀ), ಮಹಾಗಾಂವ್ (230ಮಿಮೀ), ಮುರ್ತಜಾಪುರ (190ಮಿಮೀ), ಅರ್ನಿ (160ಮಿಮೀ) ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಕೊಂಕಣ: ಮಹದ್ (160ಮಿಮೀ), ಪೆನ್ (150ಮಿಮೀ), ವಾಡಾ (140ಮಿಮೀ) ಗಣನೀಯ ಪ್ರಮಾಣದ ಮಳೆಯನ್ನು ಅನುಭವಿಸುತ್ತಿರುವ ಪ್ರದೇಶಗಳಾಗಿವೆ. ಮಧ್ಯ ಮಹಾರಾಷ್ಟ್ರ: ಗಗನಬವಾಡ (170ಮಿಮೀ) ಮತ್ತು ಮಹಾಬಲೇಶ್ವರ (150ಮಿಮೀ) ಮಳೆಯಾಗಿದೆ. ಮರಾಠವಾಡ: ಕಿನ್ವಾಟ್ (140ಮಿಮೀ) ಮತ್ತು ಹಿಮಾಯತನಗರ (90ಮಿಮೀ) ಪ್ರಮಾಣದ ಮಳೆಯಾಗಿದೆ.

ಯವತ್ಮಾಲ್‌ನಲ್ಲಿ ಸಿಲುಕಿದ್ದ ಎಲ್ಲಾ 110 ಜನರ ರಕ್ಷಣೆ

ಭಾರೀ ಮಳೆಯಿಂದಾಗಿ ಯವತ್ಮಾಲ್ ಜಿಲ್ಲೆಯ ಮಹಾಗಾಂವ್ ಮತ್ತು ಆನಂದನಗರ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಎಲ್ಲಾ 110 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಯವತ್ಮಾಲ್ ಜಿಲ್ಲಾಡಳಿತದಿಂದ ಬಂದ ಮಾಹಿತಿಯ ಪ್ರಕಾರ, ಮಹಾಗಾಂವ್ ತಾಲೂಕಿನ ಆನಂದನಗರ ತಾಂಡಾದಲ್ಲಿ ಸಿಲುಕಿರುವ ಎಲ್ಲಾ 110 ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಮೃತಿ ಇರಾನಿಗೆ ಫೇಲ್ ಎಂದು ರಿಪೋರ್ಟ್ ಕಾರ್ಡ್ ನೀಡಿದ ಕಾಂಗ್ರೆಸ್; ಈ ಎರಡರಲ್ಲಿ ನೀವು ಸ್ಕೋರ್ ಮಾಡುತ್ತೀರಿ ಎಂದು ಕೇಂದ್ರ ಸಚಿವೆ ತಿರುಗೇಟು

ಭಾರತೀಯ ವಾಯುಪಡೆ ಮತ್ತು ಎಸ್‌ಡಿಆರ್‌ಎಫ್‌ನ ಮೇಲ್ವಿಚಾರಣೆಯಲ್ಲಿ ದೋಣಿಗಳ ಸಹಾಯದಿಂದ ತಂಡವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿತು. ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಫಡ್ನವಿಸ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:23 pm, Sat, 22 July 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್