ಯೋಗಿ ನಾಡಲ್ಲಿ 6ರ ಬಾಲೆಯ ಮೇಲೆ ಅತ್ಯಾಚಾರ ಎಸಗಿ, ಯಕೃತ್ತನ್ನು ಕಿತ್ತ ನೀಚರು

|

Updated on: Nov 18, 2020 | 11:27 AM

ಲಕ್ನೋ:ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಹತ್ರಾಸ್ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಉತ್ತರ ಪ್ರದೇಶದ ಕಾನ್ಪುರ ಬಳಿಯ ಘಟಂಪುರ್ ಪ್ರದೇಶದಲ್ಲಿ ದೀಪಾವಳಿ ದಿನದಂದೇ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಕಳೆದ ಶನಿವಾರ ರಾತ್ರಿ ನಡೆದ ಪ್ರಕರಣದಲ್ಲಿ ಇಬ್ಬರು ಪಾನಮತ್ತ ಯುವಕರು ಆರು ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಆಕೆಯ ಯಕೃತ್ತನ್ನು (ಲಿವರ್) ಕಿತ್ತು ಹಾಕಿರುವ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ. ಕೃತ್ಯ ನಡೆದ ಮರು ದಿನವೇ ಅಂಕುಲ್ ಕುರಿಲ್ (20) ಹಾಗೂ ಬೀರನ್ (31) ಎಂಬ […]

ಯೋಗಿ ನಾಡಲ್ಲಿ 6ರ ಬಾಲೆಯ ಮೇಲೆ ಅತ್ಯಾಚಾರ ಎಸಗಿ, ಯಕೃತ್ತನ್ನು ಕಿತ್ತ ನೀಚರು
Follow us on

ಲಕ್ನೋ:ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಹತ್ರಾಸ್ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಉತ್ತರ ಪ್ರದೇಶದ ಕಾನ್ಪುರ ಬಳಿಯ ಘಟಂಪುರ್ ಪ್ರದೇಶದಲ್ಲಿ ದೀಪಾವಳಿ ದಿನದಂದೇ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಕಳೆದ ಶನಿವಾರ ರಾತ್ರಿ ನಡೆದ ಪ್ರಕರಣದಲ್ಲಿ ಇಬ್ಬರು ಪಾನಮತ್ತ ಯುವಕರು ಆರು ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಆಕೆಯ ಯಕೃತ್ತನ್ನು (ಲಿವರ್) ಕಿತ್ತು ಹಾಕಿರುವ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ.

ಕೃತ್ಯ ನಡೆದ ಮರು ದಿನವೇ ಅಂಕುಲ್ ಕುರಿಲ್ (20) ಹಾಗೂ ಬೀರನ್ (31) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಪಡೆದ ಮಾಹಿತಿ ಪ್ರಕಾರ ಪರಶುರಾಮ್ ಕುರಿಲ್ ಹಾಗೂ ಆತನ ಪತ್ನಿಗೆ ವಿವಾಹವಾಗಿ 21 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಆ ಕಾರಣಕ್ಕಾಗಿ ವಾಮಾಚಾರದ ಮೊರೆ ಹೋದ ಪರಶುರಾಮ್ ಕುರಿಲ್ ತನ್ನ ಸೋದರಳಿಯ ಅಂಕುಲ್ ಕುರಿಲ್ ಹಾಗೂ ಸ್ನೇಹಿತ ಬೀರನ್​ಗೆ ಸಂತ್ರಸ್ತೆಯನ್ನು ಕೊಲೆ ಮಾಡಿ ಆಕೆಯ ದೇಹದ ಭಾಗಗಳನ್ನು ತರುವಂತೆ ಸುಪಾರಿ ನೀಡಿದ್ದಾನೆ.

ಹಬ್ಬದ ದಿನ ಸಂಜೆ ಮಾರುಕಟ್ಟೆಗೆ ತೆರಳಿದ್ದ ಸಂತ್ರಸ್ತೆಯನ್ನು ಅಲ್ಲಿಂದಲೇ ಅಪಹರಿಸಿದ ಆರೋಪಿಗಳು ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಇತ್ತ ಬಾಲಕಿಯ ಮನೆಯವರು ರಾತ್ರಿಯಿಡೀ ಹುಡುಕಾಟ ನಡೆಸಿದ್ದು ಮರುದಿನ ಕಾಡಿನ ಮಧ್ಯಭಾಗದಲ್ಲಿ ಹುಡುಗಿಯ ಕುರೂಪಗೊಂಡ ದೇಹ ಸಿಕ್ಕಿದೆ. ಪೊಲೀಸರು ಫೋಕ್ಸೋ ಹಾಗೂ ಇನ್ನಿತರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಆರೋಪಿಗಳ ಮಾಹಿತಿ ಮೇರೆಗೆ ಪರಶುರಾಮ್ ಕುರಿಲ್ ದಂಪತಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ಲೈಂಗಿಕ ಚಟುವಟಿಕೆಗಳಿಗೆ ಮಕ್ಕಳ ಬಳಕೆ: ಸರ್ಕಾರಿ ಉದ್ಯೋಗಿ ಅಂದರ್
ಕಳೆದ ಹತ್ತು ವರ್ಷಗಳಲ್ಲಿ 50ಕ್ಕೂ ಹೆಚ್ಚು ಮಕ್ಕಳನ್ನು ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಂಡು ಅದರಿಂದ ಹಣ ಮಾಡುತ್ತಿದ್ದ ಉತ್ತರ ಪ್ರದೇಶದ ಸರ್ಕಾರಿ ಉದ್ಯೋಗಿಯೊಬ್ಬ ಮಂಗಳವಾರ ಸಿಬಿಐ ಬಲೆಗೆ ಬಿದ್ದಿದ್ದಾನೆ. ರಾಜ್ಯದ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದ ರಾಮ್ಭವನ್ ಎಂಬ ಕಿರಾತಕ ಮಕ್ಕಳನ್ನು ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಂಡು ಅದನ್ನು ವೀಡಿಯೋ ಮಾಡಿ ಡಾರ್ಕ್ ವೆಬ್ ಮೂಲಕ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ದಾಳಿ ವೇಳೆ ಪೊಲೀಸರು ಆತನಿಂದ ಸುಮಾರು ಎಂಟು ಲಕ್ಷ ನಗದು, ಲ್ಯಾಪ್ಟಾಪ್, ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.