Delhi Excise Policy: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಿಆರ್‌ಎಸ್ ಶಾಸಕಿ ಕವಿತಾಗೆ ಇ.ಡಿ. ಬುಲಾವ್​, ನಾಳೆ ಶುಕ್ರವಾರ ಹಾಜರ್​​

|

Updated on: Sep 14, 2023 | 3:58 PM

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ವೈಎಸ್‌ಆರ್‌ಸಿಪಿ ಸಂಸದ ಮಾಗುಂಟ ಶ್ರೀನಿವಾಸ್ ರೆಡ್ಡಿ ಮತ್ತು ಅವರ ಪುತ್ರ ರಾಘವ ರೆಡ್ಡಿ ಅನುಮೋದಕರಾಗಿದ್ದಾರೆ (approver). ಹಾಗಾಗಿ ಕವಿತಾಗೆ ಬುಲಾವ್​​ ನೀಡಲಾಗಿದೆ ಎನ್ನಲಾಗಿದೆ.

Delhi Excise Policy: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಿಆರ್‌ಎಸ್ ಶಾಸಕಿ ಕವಿತಾಗೆ ಇ.ಡಿ. ಬುಲಾವ್​, ನಾಳೆ ಶುಕ್ರವಾರ ಹಾಜರ್​​
ಬಿಆರ್‌ಎಸ್ ಶಾಸಕಿ ಕವಿತಾಗೆ ಇ.ಡಿ. ಬುಲಾವ್​, ನಾಳೆ ಹಾಜರ್​​
Follow us on

ದೆಹಲಿ ಮದ್ಯ ನೀತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Delhi Excise Policy case) ಸಂಬಂಧಿಸಿದಂತೆ ಬಿಆರ್‌ಎಸ್ ಎಂಎಲ್‌ಸಿ ಮತ್ತು ಸಿಎಂ ಕೆ ಚಂದ್ರಶೇಖರ್ ರಾವ್ (BRS MLC and CM K Chandrasekhar Rao) ಅವರ ಪುತ್ರಿ ಕವಿತಾ ಕಲ್ವಕುಂಟ್ಲಾ ಅವರನ್ನು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇ.ಡಿ -ED) ಗುರುವಾರ ಬುಲಾವ್​ ಕೊಟ್ಟಿದೆ. ನಾಳೆ ಶುಕ್ರವಾರ, ಸೆಪ್ಟೆಂಬರ್ 15 ರಂದು ದೆಹಲಿಯ ಇ.ಡಿ ಕಚೇರಿಗೆ (Enforcement Directorate -ED) ಹಾಜರಾಗುವಂತೆ ಕವಿತಾಗೆ ತಿಳಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಕವಿತಾರನ್ನು ಮತ್ತೆ ತನಿಖೆಗೆ ಕರೆಯಬಹುದು ಎಂದು ಅಂದಾಜಿಸಲಾಗಿತ್ತು.

ವೈಎಸ್‌ಆರ್‌ಸಿಪಿ ಸಂಸದ ಮಾಗುಂಟ ಶ್ರೀನಿವಾಸ್ ರೆಡ್ಡಿ, ಅವರ ಪುತ್ರ ರಾಘವ ರೆಡ್ಡಿ ಅವರು ಪ್ರಕರಣದಲ್ಲಿ ಅನುಮೋದಕರಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಕವಿತಾಗೆ ಬುಲಾವ್​​ ನೀಡಲಾಗಿದೆ ಎನ್ನಲಾಗಿದೆ. ಕವಿತಾರನ್ನು ಈ ಹಿಂದೆ ಇ.ಡಿ. ಎರಡು ಬಾರಿ ಮತ್ತು ಈ ವರ್ಷದ ಆರಂಭದಲ್ಲಿ ಸಿಬಿಐ ಒಂದು ಬಾರಿ ಪ್ರಶ್ನಿಸಿತ್ತು. ಆದರೆ ಇತ್ತೀಚೆಗೆ ಅವರ ವಿಚಾರಣೆಯಲ್ಲಿ ವಿರಾಮ ಕಂಡುಬಂದಿತ್ತು.

Also Read: ಜೈಲಿನಲ್ಲಿ ಚಂದ್ರಬಾಬು ನಾಯ್ಡು ಭೇಟಿಯಾದ ಪವನ್ ಕಲ್ಯಾಣ್: ಟಿಡಿಪಿ-ಜನಸೇನೆ ಒಟ್ಟಾಗಿ ಆಂದ್ರ ಅಸೆಂಬ್ಲಿ ಚುನಾವಣೆ

ಈ ಸುತ್ತಿನ ವಿಚಾರಣೆಯು ಚಾರ್ಟರ್ಡ್ ಫ್ಲೈಟ್‌ಗಳು ಸೇರಿದಂತೆ ವಿವಿಧ ಸಾರಿಗೆ ವಿಧಾನಗಳ ಮೂಲಕ ಹೈದರಾಬಾದ್‌ನಿಂದ ದೆಹಲಿಗೆ ನಗದು ವರ್ಗಾವಣೆಯ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ. ಇ.ಡಿ ತನಿಖಾ ತಂಡವು ಕೂಲಂಕಷ ಪರೀಕ್ಷೆಗೆ ಒಳಗಾಗಿದ್ದು, ಹೊಸ ತಂಡವು ಪ್ರಕರಣದ ತನಿಖೆಯನ್ನು ನಿರ್ವಹಿಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ