ವಾಘಾ ಗಡಿಯಲ್ಲಿ ಪಾಕಿಸ್ತಾನದ ಬಾವುಟಕ್ಕಿಂತ ಮೇಲೆ ಹಾರಲಿದೆ ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜ

ನೆರೆಯ ಪಾಕಿಸ್ತಾನಕ್ಕೆ ಹೋಲಿಸಿದರೆ ಅಟ್ಟಾರಿ ಗಡಿಯಲ್ಲಿರುವ ತ್ರಿವರ್ಣ ಧ್ವಜದ ಎತ್ತರವನ್ನು ಭಾರತ 18 ಅಡಿಗಳಷ್ಟು ಹೆಚ್ಚಿಸಿದೆ. ಪ್ರಸ್ತುತ ಭಾರತದ ತ್ರಿವರ್ಣ ಧ್ವಜದ ಎತ್ತರ 360 ಅಡಿಯಾಗಿದ್ದರೆ, ಪಾಕಿಸ್ತಾನದ ಧ್ವಜದ ಕಂಬವನ್ನು 400 ಅಡಿ ಎತ್ತರದಲ್ಲಿ ಇರಿಸಲಾಗಿದೆ.

ವಾಘಾ ಗಡಿಯಲ್ಲಿ ಪಾಕಿಸ್ತಾನದ ಬಾವುಟಕ್ಕಿಂತ ಮೇಲೆ ಹಾರಲಿದೆ ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜ
ಭಾರತದ ತ್ರಿವರ್ಣ ಧ್ವಜ
Follow us
ಸುಷ್ಮಾ ಚಕ್ರೆ
|

Updated on: Sep 14, 2023 | 3:46 PM

ಅಮೃತಸರ: ಅಮೃತಸರ ಬಳಿಯ ಅಟ್ಟಾರಿ-ವಾಘಾ ಗಡಿಯಲ್ಲಿರುವ ಸೈನಿಕರು ಮತ್ತು ಪ್ರವಾಸಿಗರು ಭಾರತದ ತ್ರಿವರ್ಣ ಧ್ವಜವನ್ನು ಮತ್ತೊಮ್ಮೆ ಎತ್ತರಕ್ಕೆ ಹಾರುವುದನ್ನು ವೀಕ್ಷಿಸುವ ಅವಕಾಶವನ್ನು ಶೀಘ್ರದಲ್ಲೇ ಪಡೆಯಲಿದ್ದಾರೆ. ಭಾರತವು ಪಾಕಿಸ್ತಾನದ ಧ್ವಜಸ್ತಂಭಕ್ಕಿಂತ ಎತ್ತರದಲ್ಲಿ 418 ಅಡಿ ಎತ್ತರದ ಸ್ತಂಭದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ತಯಾರಿ ನಡೆಸುತ್ತಿದೆ. ನೆರೆಯ ಪಾಕಿಸ್ತಾನಕ್ಕೆ ಹೋಲಿಸಿದರೆ ಅಟ್ಟಾರಿ ಗಡಿಯಲ್ಲಿರುವ ತ್ರಿವರ್ಣ ಧ್ವಜದ ಎತ್ತರವನ್ನು ಭಾರತ 18 ಅಡಿಗಳಷ್ಟು ಹೆಚ್ಚಿಸಿದೆ. ಪ್ರಸ್ತುತ ಭಾರತದ ತ್ರಿವರ್ಣ ಧ್ವಜದ ಎತ್ತರ 360 ಅಡಿಯಾಗಿದ್ದರೆ, ಪಾಕಿಸ್ತಾನದ ಧ್ವಜದ ಕಂಬವನ್ನು 400 ಅಡಿ ಎತ್ತರದಲ್ಲಿ ಇರಿಸಲಾಗಿದೆ.

ಅಟ್ಟಾರಿ- ವಾಘಾ ಗಡಿಯಲ್ಲಿನ 360 ಅಡಿ ಕಂಬದ ಮೇಲೆ ಭಾರತದ ತ್ರಿವರ್ಣ ಧ್ವಜದ ಹಾರಾಟಕ್ಕೆ ಪ್ರತಿಯಾಗಿ ಪಾಕಿಸ್ತಾನವು 6 ವರ್ಷಗಳ ಹಿಂದೆ 400 ಅಡಿ ಎತ್ತರದ ಪಾಕಿಸ್ತಾನದ ರಾಷ್ಟ್ರೀಯ ಧ್ವಜಸ್ತಂಭವನ್ನು ಸ್ಥಾಪಿಸಿತ್ತು. ಇದೀಗ ಭಾರತ 418 ಅಡಿ ಎತ್ತರದ ಧ್ವಜಸ್ತಂಭವನ್ನು ಉದ್ಘಾಟಿಸಲು ಸಿದ್ಧವಾಗಿದೆ.

ಇದನ್ನೂ ಓದಿ: ಗುಜರಾತ್​ನಲ್ಲಿ 108 ಮಂದಿ ಪಾಕಿಸ್ತಾನಿ ವಲಸಿಗರಿಗೆ ಭಾರತದ ಪೌರತ್ವ: ಹರ್ಷ ಸಂಘವಿ

ಇದೀಗ ಗೋಲ್ಡನ್ ಗೇಟ್ ಆಫ್ ಇಂಡಿಯಾ ಮುಂಭಾಗದಲ್ಲಿ 418 ಅಡಿ ಎತ್ತರದ ಧ್ವಜಸ್ತಂಭ ಸಿದ್ಧವಾಗಿದ್ದು, ಉದ್ಘಾಟನೆಗೆ ದಿನಗಣನೆ ನಡೆಯುತ್ತಿದೆ. ಈ ಉದ್ಘಾಟನೆ ಇನ್ನು ಕೆಲವೇ ದಿನಗಳಲ್ಲಿ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದನ್ನು ಮುಂದೂಡಲಾಗಿದೆ. ಹೀಗಾಗಿ, ಶೀಘ್ರದಲ್ಲೇ ಭಾರತದ ತ್ರಿವರ್ಣ ಧ್ವಜವು ಈ 418 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಹಾರಾಡುವುದನ್ನು ಕಾಣಬಹುದು.

ಈ ಧ್ವಜ ಸ್ತಂಭವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) 3.5 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿದೆ. ಗೋಲ್ಡನ್ ಗೇಟ್‌ನ ಮುಂಭಾಗದಲ್ಲಿರುವ 360 ಅಡಿ ಎತ್ತರದ ಹಳೆಯ ಧ್ವಜ ಸ್ತಂಭದಿಂದ 100 ಮೀಟರ್ ದೂರದಲ್ಲಿ ಈ ಧ್ವಜ ಸ್ತಂಭವನ್ನು ಸ್ಥಾಪಿಸಲಾಗಿದೆ. ನೆಲದಿಂದ 4 ಅಡಿ ಎತ್ತರದ ಬೇಸ್ ಮಾಡಲಾಗಿದ್ದು, ಅದರ ಮೇಲೆ ಈ ಧ್ವಜ ಸ್ತಂಭವನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: Fact Check: ವೈರಲ್ ವಿಡಿಯೊದಲ್ಲಿ ತೋರಿಸಿದ್ದು ನಿರ್ದಿಷ್ಟ ಭಾಗವಷ್ಟೇ; ಭಟ್ಕಳದಲ್ಲಿ ಇಸ್ಲಾಂ ಬಾವುಟ ಜತೆ ಬೇರೆ ಧ್ವಜಗಳೂ ಇತ್ತು

ಭಾರತವು 2017ರಲ್ಲಿ 360 ಅಡಿ ಎತ್ತರದ ಧ್ವಜ ಸ್ತಂಭವನ್ನು ಸ್ಥಾಪಿಸಿತ್ತು. ಅದರ ನಂತರ ಅದೇ ವರ್ಷ ಪಾಕಿಸ್ತಾನ ತನ್ನ ಗಡಿಯಲ್ಲಿ 400 ಅಡಿ ಎತ್ತರದ ಧ್ವಜಸ್ತಂಭವನ್ನು ಸ್ಥಾಪಿಸಿತ್ತು. ಇದಾದ ನಂತರ ಉಭಯ ದೇಶಗಳ ನಡುವೆ ಸಾಕಷ್ಟು ವಾಗ್ವಾದಗಳು ನಡೆದಿತ್ತು. ಪಾಕಿಸ್ತಾನದ ಧ್ವಜ ಸ್ತಂಭದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಲಾಗಿದ್ದು, ಭಾರತದ ಗಡಿಯೊಳಗೆ ನಡೆಯುವುದನ್ನು ಹಲವಾರು ಕಿಲೋಮೀಟರ್​​ವರೆಗೆ ನೋಡಬಹುದು.

ಇದುವರೆಗೆ ದೇಶದ ಅತ್ಯುನ್ನತ ಧ್ವಜವನ್ನು ಕರ್ನಾಟಕದ ಬೆಳಗಾವಿಯಲ್ಲಿ ಹಾರಿಸಲಾಗುತ್ತಿತ್ತು. ಇದರ ಎತ್ತರ 110 ಮೀಟರ್ ಅಂದರೆ 360.8 ಅಡಿ ಇತ್ತು. ಇದು ಅಟ್ಟಾರಿ ಗಡಿಯಲ್ಲಿ ಇಲ್ಲಿಯವರೆಗೆ ಹಾರಿಸಿದ ತ್ರಿವರ್ಣ ಧ್ವಜಕ್ಕಿಂತ ಕೇವಲ 0.8 ಅಡಿ ಎತ್ತರವಾಗಿತ್ತು. ಆದರೆ ನೂತನ ಧ್ವಜಸ್ತಂಭದ ಉದ್ಘಾಟನೆ ಬಳಿಕ ಅಟ್ಟಾರಿ ಗಡಿಯಲ್ಲಿ ದೇಶದ ಅತಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ