Fact Check: ವೈರಲ್ ವಿಡಿಯೊದಲ್ಲಿ ತೋರಿಸಿದ್ದು ನಿರ್ದಿಷ್ಟ ಭಾಗವಷ್ಟೇ; ಭಟ್ಕಳದಲ್ಲಿ ಇಸ್ಲಾಂ ಬಾವುಟ ಜತೆ ಬೇರೆ ಧ್ವಜಗಳೂ ಇತ್ತು
ಇದು ಧಾರ್ಮಿಕ ಧ್ವಜವಾಗಿದ್ದು, ಪಾಕಿಸ್ತಾನದ ಧ್ವಜವಾಗಿರಲಿಲ್ಲ. ನಾವು ಅದನ್ನು ದೃಢೀಕರಿಸಿದ್ದೇವೆ ಮತ್ತು ಕೋಮು ಅಶಾಂತಿಯನ್ನು ಉಂಟುಮಾಡುವ ಯಾವುದೇ ತಪ್ಪು ಮಾಹಿತಿಯನ್ನು ಹಂಚಿಕೊಳ್ಳದಂತೆ ನಾವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ವಿನಂತಿಸುತ್ತೇವೆ ಎಂದ ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ.
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಜಯಗಳಿಸಿದ ನಂತರ, ಸಂಭ್ರಮಾಚರಣೆಯಲ್ಲಿ ಇಸ್ಲಾಂ ಧ್ವಜವನ್ನು ಬೀಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೋವನ್ನು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal) ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಬಲಪಂಥಿಯರಾಗಿರುವ ಹಲವಾರು ಪ್ರಭಾವಿ ವ್ಯಕ್ತಿಗಳು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನೋಡಿ ಏನಾಗುತ್ತಿದೆ ಎಂಬ ಬರಹದೊಂದಿಗೆ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಭಟ್ಕಳ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಎಂದು ಒಂದು ಸಾಲು ಬರೆದು ಈ ವಿಡಿಯೊ ಟ್ವೀಟ್ ಮಾಡಿದ್ದಾರೆ.
Bhatkal. Soon after Congress victory in Karnataka… pic.twitter.com/JZzGWlc30V
— Amit Malviya (@amitmalviya) May 13, 2023
@erbmjha ಎಂಬ ಟ್ವೀಟಿಗರು ವೈರಲ್ ಕ್ಲಿಪ್‌ನಿಂದ ಸ್ಕ್ರೀನ್‌ಗ್ರಾಬ್ ಟ್ವೀಟ್ ಮಾಡಿ ಇಂದು ಕಾಂಗ್ರೆಸ್ ಗೆದ್ದ ನಂತರ ಕರ್ನಾಟಕದ ಭಟ್ಕಳದಲ್ಲಿ ಒಬ್ಬ ವ್ಯಕ್ತಿ ಇಸ್ಲಾಮಿಕ್ ಧ್ವಜವನ್ನು ಬೀಸುತ್ತಿರುವುದು. ಭಟ್ಕಳವು ಮುಸ್ಲಿಂ ಪ್ರಾಬಲ್ಯದ ಪ್ರದೇಶವಾಗಿದ. ಅಪರಾಧಿ ಭಾರತೀಯ ಇಸ್ಲಾಮಿಕ್ ಭಯೋತ್ಪಾದಕ’ ಯಾಸಿನ್ ಭಟ್ಕಳ್ ಇದೇ ಊರಿನವನು ಎಂದು ಬರೆದುಕೊಂಡಿದ್ದಾರೆ.
A man has been seen waving an Islamic flag in Bhatkal, Karnataka after Congress won today.
Bhatkal is a Muslim-dominated town and is sometimes called mini Dubai, and this region is dominated by Navayath (Arabian Muslims).
Demographics (Census-2011)
Muslim- 64.59% Hindu- 33.17%… pic.twitter.com/C6u5dVJ89f
— BALA (@erbmjha) May 13, 2023
@MrSinha ಎಂಬವರು ಇದೇ ವಿಡಿಯೊ ಟ್ವೀಟ್ ಮಾಡಿ ರಾಜ್ಯದಲ್ಲಿ ಬಿಜೆಪಿ ಸೋಲಿನ ನಂತರ ನಾವು ಕಳೆದುಕೊಂಡದ್ದು ಇದನ್ನೇ ಎಂದು ಬರೆದಿದ್ದಾರೆ.
Congress is yet to form a government.
This is what we lost…. pic.twitter.com/Z5JaeMgiUB
— Mr Sinha (@MrSinha_) May 13, 2023
‘Woke Patroller ಎಂಬ ಖಾತೆದಾರರು ಕರ್ನಾಟಕದಲ್ಲಿ ಕಾಂಗ್ರೆಸ್ ಇನ್ನೂ ಸರ್ಕಾರವನ್ನು ರಚಿಸದಿದ್ದರೂ ಸಹ ‘ಟ್ರೆಂಡ್‌ಗಳು ಹೊರಹೊಮ್ಮಲು ಪ್ರಾರಂಭಿಸಿವೆ’ ಎಂದು ಟೀಕಿಸಿದ್ದಾರೆ. @rightwing_guy ಖಾತೆದಾರರು ಚುನಾವಣಾ ಫಲಿತಾಂಶಗಳನ್ನು ‘ಕಾಂಗ್ರೆಸ್ ಬೆಂಬಲಿಗರು ಹೇಗೆ ಆಚರಿಸುತ್ತಿರುವುದು ನೋಡಿ ಎಂದು ಬರೆದಿದ್ದಾರೆ.
अभी तो सरकार नहीं बनी कांग्रेस की कर्नाटक में पर रूझान आने शुरू हो गए है pic.twitter.com/9zRIBp9l0U
— Woke Patroller (@WokePatroller) May 13, 2023
ಫ್ಯಾಕ್ಟ್ ಚೆಕ್
ಇದರಲ್ಲಿ ಗಮನಿಸಬೇಕಾದ ಮೊದಲ ವಿಷಯವೆಂದರೆ ಹಿಂದೂ ಧಾರ್ಮಿಕ ಚಿಹ್ನೆ ಓಂ ಹೊಂದಿರುವ ಕೇಸರಿ ಧ್ವಜ ಮತ್ತು ಡಾ ಬಿ ಆರ್ ಅಂಬೇಡ್ಕರ್ ಚಿತ್ರವಿರುವ ದಲಿತ ಹೋರಾಟದ ನೀಲಿ ಧ್ವಜವನ್ನು ಇಸ್ಲಾಮಿಕ್ ಧ್ವಜದ ಜೊತೆಗೆ ಬೀಸುತ್ತಿರುವುದು ವಿಡಿಯೊದಲ್ಲಿದೆ.
ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದ ಆಲ್ಟ್ ನ್ಯೂಸ್, ಭಟ್ಕಳದ ಸಲಾವುದ್ದೀನ್ ಎಂಬ ಸ್ಥಳೀಯರನ್ನು ಸಂಪರ್ಕಿಸಿದ್ದು ವಿಡಿಯೊದಲ್ಲಿ ಹೀಗೆ ಹೇಳುತ್ತಿರುವುದು ಕೇಳಿಸುತ್ತದೆ: ಇದು ಭಟ್ಕಳ ಸರ್ಕಲ್. ಮೊದಲು ಇಲ್ಲಿ ಧ್ವಜಗಳಿರಲಿಲ್ಲ. ಹಸಿರು ಧ್ವಜ, ಕೇಸರಿ ಧ್ವಜ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಧ್ವಜ ಅಥವಾ ಕಾಂಗ್ರೆಸ್ ಧ್ವಜ ಆಗಿರಬಹುದು ಎಲ್ಲಾ ಧ್ವಜಗಳನ್ನು ಏಕಕಾಲಕ್ಕೆ ಹಾಕಲಾಗಿದೆ. ಟ್ವಿಟರ್‌ನಲ್ಲಿ ತಪ್ಪುದಾರಿಗೆಳೆಯುವ ವಾದಗಳನ್ನು ನಂಬಬೇಡಿ. ಎಲ್ಲಾ ನಾಲ್ಕು ಧ್ವಜಗಳನ್ನು ಒಂದೇ ಸಮಯದಲ್ಲಿ ಹಾಕಲಾಗಿದೆ ಎಂದಿದ್ದಾರೆ.
ಇಲ್ಲಿಯದ್ದೇ ಮತ್ತಷ್ಟು ವಿಡಿಯೊಗಳನ್ನು ನೋಡಿದಾಗ, ಯಾವುದೇ ಕೋಮು ಉದ್ವಿಗ್ನತೆಯ ಭಾವನೆಯಿಲ್ಲದೆ ಕೇಸರಿ ಧ್ವಜಗಳು ಮತ್ತು ಇಸ್ಲಾಮಿಕ್ ಧ್ವಜಗಳನ್ನು ಒಟ್ಟಿಗೆ ಬೀಸಲಾಗಿದೆ. ಇನ್ನೊಂದೆಡೆ ಇಸ್ಲಾಮಿಕ್ ಧ್ವಜವನ್ನು ಹಿಡಿದಿರುವ ವ್ಯಕ್ತಿಯೊಬ್ಬರು ರ್ಯಾಲಿಯ ಮಧ್ಯಭಾಗದಲ್ಲಿ ಮೆರವಣಿಗೆ ನಡೆಸುತ್ತಿರುವಾಗ ಅವರ ಸುತ್ತುವರಿದಿರುವವರು ಕೇಸರಿ ಧ್ವಜಗಳು ಮತ್ತು ಕಾಂಗ್ರೆಸ್ ಧ್ವಜಗಳನ್ನು ಬೀಸುತ್ತಿರುವುದನ್ನು ಕಾಣಬಹುದು.
ಮೇ 13 ರ ಶನಿವಾರದಂದು ಬೆಳಿಗ್ಗೆ ಚಿತ್ರೀಕರಿಸಲಾದ ಭಟ್ಕಳ ವೃತ್ತದ ಸ್ಪಷ್ಟವಾದ ವಿಡಿಯೊದಲ್ಲಿ ಕೇಸರಿ ಧ್ವಜ ಮತ್ತು ಇಸ್ಲಾಮಿಕ್ ಧ್ವಜವನ್ನು ಅಕ್ಕಪಕ್ಕದಲ್ಲಿ ಇರಿಸಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ದಲಿತರ ಪ್ರತಿರೋಧವನ್ನು ಸಂಕೇತಿಸುವ ನೀಲಿ ಧ್ವಜವನ್ನು ಕೇಸರಿ ಧ್ವಜದ ಪಕ್ಕದಲ್ಲಿ ಇರಿಸಲಾಗಿದ್ದು, ಇಸ್ಲಾಮಿಕ್ ಧ್ವಜದ ಪಕ್ಕದಲ್ಲಿ ಕಾಂಗ್ರೆಸ್ ಬಾವುಟವಿದೆ.
ವಾರ್ತಾ ಭಾರತಿಯೊಂದಿಗೆ ಮಾತನಾಡಿದ ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ, ಸಾಮಾಜಿಕ ಮಾಧ್ಯಮ ಬಳಕೆದಾರರು ವದಂತಿಗಳನ್ನು ಹರಡುವುದನ್ನು ಮತ್ತು ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಕಾರಣವಾಗುವ ಸೂಕ್ಷ್ಮ ವಿಷಯಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಇದು ಧಾರ್ಮಿಕ ಧ್ವಜವಾಗಿದ್ದು, ಪಾಕಿಸ್ತಾನದ ಧ್ವಜವಾಗಿರಲಿಲ್ಲ. ನಾವು ಅದನ್ನು ದೃಢೀಕರಿಸಿದ್ದೇವೆ ಮತ್ತು ಕೋಮು ಅಶಾಂತಿಯನ್ನು ಉಂಟುಮಾಡುವ ಯಾವುದೇ ತಪ್ಪು ಮಾಹಿತಿಯನ್ನು ಹಂಚಿಕೊಳ್ಳದಂತೆ ನಾವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ವಿನಂತಿಸುತ್ತೇವೆ. ಇದು ಪಾಕಿಸ್ತಾನದ ಧ್ವಜ ಅಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಈಗಾಗಲೇ ದೃಢಪಡಿಸಿದ್ದರಿಂದ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಅಥವಾ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ