ಭಾರತದಲ್ಲಿ ಚಿಕನ್ಪಾಕ್ಸ್ನ ಹೊಸ ತಳಿ ಪತ್ತೆ; ಏನಿದರ ಲಕ್ಷಣ, ನಿಯಂತ್ರಣ ಹೇಗೆ?
ಕೊವಿಡ್-19, ಡೆಂಗ್ಯೂ ನಂತರ ಈಗ ಭಾರತದಲ್ಲಿ ಚಿಕನ್ಪಾಕ್ಸ್ನ ಹೊಸ ತಳಿ ಪತ್ತೆಯಾಗಿದೆ. ಇದಕ್ಕೆ ಕ್ಲಾಡ್-9 ಎಂದು ಹೆಸರಿಡಲಾಗಿದೆ. ಜ್ವರ ಮತ್ತು ದದ್ದುಗಳು ವೈರಸ್‌ನ ಕೆಲವು ಮೊದಲ ಲಕ್ಷಣಗಳಾಗಿವೆ. ದೇಹದ ಮೇಲೆ ದದ್ದುಗಳು ಚಿಕನ್ಪಾಕ್ಸ್ನ ಸಾಮಾನ್ಯ ಲಕ್ಷಣವಾಗಿದೆ. ಇದು ಕೆಲವೊಮ್ಮೆ ನೋವಿನಿಂದ ಕೂಡಿರುತ್ತದೆ.
ಇಡೀ ವಿಶ್ವವನ್ನು ಕೊವಿಡ್-19 ತಲ್ಲಣಗೊಳಿಸಿದ ನಂತರ ಅನೇಕ ಹೊಸ ರೀತಿಯ ವೈರಸ್ಗಳು ಕಾಣಿಸಿಕೊಳ್ಳತೊಡಗಿವೆ. ಪ್ರತಿದಿನವು ಹೊಸ ವೈರಸ್, ಕೆಲವು ಹೊಸ ರೂಪಾಂತರಿ ಅಥವಾ ಹೊಸ ಅಪರೂಪದ ಆರೋಗ್ಯ ಕಾಯಿಲೆಗಳು ಗೋಚರವಾಗುತ್ತಿವೆ. ಇದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕೊವಿಡ್-19, ಡೆಂಗ್ಯೂ ನಂತರ ಈಗ ಭಾರತದಲ್ಲಿ ಚಿಕನ್ಪಾಕ್ಸ್ನ ಹೊಸ ತಳಿ ಪತ್ತೆಯಾಗಿದೆ. ಇದಕ್ಕೆ ಕ್ಲಾಡ್-9 ಎಂದು ಹೆಸರಿಡಲಾಗಿದೆ.
ಈ ಹೊಸ ಚಿಕನ್ಪಾಕ್ಸ್ನ ತಳಿ ಜರ್ಮನಿ, ಅಮೆರಿಕಾ, ಇಂಗ್ಲೆಂಡ್ಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಭಾರತದಲ್ಲಿ ಚಿಕನ್ಪಾಕ್ಸ್ಗೆ ಕಾರಣವಾಗುವ ವರಿಸೆಲ್ಲಾ-ಜೋಸ್ಟರ್ ವೈರಸ್‌ನ ಇರುವಿಕೆಯನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಕಂಡುಹಿಡಿದಿರುವುದು ಇದೇ ಮೊದಲು. ವರಿಸೆಲ್ಲಾ ವೈರಸ್ 9 ಹರ್ಪಿಸ್ ವೈರಸ್ ತಳಿಗಳಲ್ಲಿ ಒಂದಾಗಿದೆ. ಇದು ಮಕ್ಕಳು, ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಚಿಕನ್ಪಾಕ್ಸ್ಗೆ ಕಾರಣವಾಗುತ್ತದೆ.
ಕ್ಲಾಡ್ 9 ಹೊಸ ಚಿಕನ್ಪಾಕ್ಸ್ ವೈರಸ್‌ನ ತಳಿಯ ರೋಗಲಕ್ಷಣಗಳು:
– ಸಣ್ಣ ಕಜ್ಜಿಗಳು
– ವಿಪರೀತ ಜ್ವರ
– ಹಸಿವಾಗದಿರುವುದು
– ತಲೆನೋವು
– ಆಯಾಸ
ಜ್ವರ ಮತ್ತು ದದ್ದುಗಳು ವೈರಸ್‌ನ ಕೆಲವು ಮೊದಲ ಲಕ್ಷಣಗಳಾಗಿವೆ. ದೇಹದ ಮೇಲೆ ದದ್ದುಗಳು ಚಿಕನ್ಪಾಕ್ಸ್ನ ಸಾಮಾನ್ಯ ಲಕ್ಷಣವಾಗಿದೆ. ಇದು ಕೆಲವೊಮ್ಮೆ ನೋವಿನಿಂದ ಕೂಡಿರುತ್ತದೆ. ವ್ಯಕ್ತಿಯಲ್ಲಿ ಈ ವೈರಸ್ ಕಾಣಿಸಿಕೊಂಡ 2-3 ವಾರಗಳ ನಂತರ ಈ ದದ್ದುಗಳು ಬೆಳೆಯುತ್ತವೆ. ಇದಕ್ಕೂ ಮೊದಲು ಜ್ವರ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ: Scrub Typhus Infection: ಸ್ಕ್ರಬ್ ಟೈಫಸ್ನಿಂದ ಭಾರತದಲ್ಲಿ 14 ಸಾವು; ಏನಿದು ಮಾರಕ ಸೋಂಕು?
ತಡೆಗಟ್ಟುವಿಕೆ ಹೇಗೆ?:
ಸರಿಯಾಗಿ ಮತ್ತು ಆಗಾಗ ಕೈಗಳನ್ನು ತೊಳೆದುಕೊಳ್ಳುವುದು, ಅದರಲ್ಲೂ ಕೆಮ್ಮು ಅಥವಾ ಸೀನಿನ ನಂತರ ಕೈ ತೊಳೆದುಕೊಳ್ಳುವುದು, ಚಿಕನ್ಪಾಕ್ಸ್ ಬಂದವರಿಂದ ದೂರ ಇರುವುದು, ಸೋಂಕಿತರು ಬಳಸಿದ ಟವೆಲ್, ಬಟ್ಟೆ ಇತ್ಯಾದಿ ಉತ್ಪನ್ನಗಳನ್ನು ಬಳಸದಿರುವುದು, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದರ ಮೂಲಕ ಚಿಕನ್ಪಾಕ್ಸ್ ಹೊಸ ತಳಿಯನ್ನು ತಡೆಗಟ್ಟಬಹುದು.
ವಿಶೇಷವಾಗಿ ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚು.