Chickenpox: ಚಿಕನ್ಪಾಕ್ಸ್ ಲಕ್ಷಣಗಳೇನು? ಹರಡುವಿಕೆ ಹೇಗೆ? ಇಲ್ಲಿದೆ ಮಾಹಿತಿ
ಚಿಕ್ಕ ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆ ಎಂದರೆ ಅದು ಚಿಕನ್ಪಾಕ್ಸ್ (Chickenpox) ಅದನ್ನು ಗ್ರಾಂಥಿಕ ಭಾಷೆಯಲ್ಲಿ ಅಮ್ಮ ಎಂದು ಕರೆಯುತ್ತಾರೆ.
ಇನ್ನೇನು ಬೇಸಿಗೆ (Summer) ಆರಂಭವಾಗುತ್ತಿದೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಹರಡುವುದು ಹೆಚ್ಚು. ರಾಶಸ್, ಸಿಡುಬು ಅಥವಾ ಚಿಕನ್ಫಾಕ್ಸ್, ಚರ್ಮದ ಮೇಲಿನ ತುರಿಕೆ ಸೇರಿದಂತೆ ವಿವಿಧ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಚಿಕ್ಕ ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆ ಎಂದರೆ ಅದು ಚಿಕನ್ಪಾಕ್ಸ್ (Chickenpox) ಅದನ್ನು ಗ್ರಾಂಥಿಕ ಭಾಷೆಯಲ್ಲಿ ಅಮ್ಮ ಎಂದು ಕರೆಯುತ್ತಾರೆ. ಚರ್ಮದ ಮೇಲೆ ಕಾಣಿಸಿಕೊಳ್ಳುವ ಕೆಂಪು ಗುಳ್ಳೆಗಳು ಅಗಾಧ ನೋವು,ಉರಿ ಮತ್ತು ಜ್ವರ ಬರುವಂತೆ ಮಾಡುತ್ತದೆ. ಇನ್ಫೆಕ್ಷನ್ (Infection) ನಿಂದ ಉಂಟಾಗುವ ಈ ಸಮಸ್ಯೆ ಇತರರಿಗೆ ಹರಡುವ ಸಾಧ್ಯತೆಯೂ ಇರುತ್ತದೆ. ಚಿಕನ್ಫಾಕ್ಸ್ನ ಮೊದಲ ಲಕ್ಷಣ ಎಂದರೆ ಚರ್ಮದ ಮೇಲೆ ಕಂಪು ಗುಳ್ಳೆಗಳು ಕಾಣಿಸಿಕೊಳ್ಳುವುದು.
ಹರಡುವಿಕೆ ಹೇಗೆ? ಚಿಕನ್ಪಾಕ್ಸ್ ಉಂಟಾದರೆ ಚರ್ಮದ ಮೇಲಿನ ಗುಳ್ಳೆಗಳು ಅಗಾಧ ನೋವನ್ನು ಉಂಟುಮಾಡುತ್ತದೆ. ಅದೇ ರೀತಿ ಕೆಮ್ಮು, ಜ್ವರ ಕೂಡ ಕಾಣಿಸಿಕೊಳ್ಳುತ್ತದೆ. ಚಿಕನ್ಫಾಕಸ್ ಸೋಂಕಿತ ವ್ಯಕ್ತಿಯ ಚರ್ಮ, ಉಸಿರು ಅಥವಾ ಸೀನಿದಾಗ ಬರುವ ದ್ರವದಿಂದ ಇತರರಿಗೆ ಹರಡುತ್ತದೆ.ಚಿಕನ್ಪಾಕ್ಸ್ ವರಿಸೆಲ್ಲಾ-ಜೋಸ್ಟರ್ ವೈರಸ್ ನಿಂದ ಉಂಟಾಗುತ್ತದೆ. ಇದೇ ಕಾರಣಕ್ಕೆ ಚಿಕನ್ಪಾಕ್ಸ್ ಉಂಟಾದ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳುತ್ತಾರೆ.
ಆರಂಭಿಕ ಲಕ್ಷಣಗಳೇನು? ವರಿಸೆಲ್ಲಾ-ಜೋಸ್ಟರ್ ವೈರಸ್ ದೇಹವನ್ನು ಪ್ರವೇಶಿಸಿದ ಮೇಲೆ 20 ರಿಂದ 21 ದಿನಗಳ ನಂತರ ಚಿಕನ್ಪಾಕ್ಸ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಡೀ ದೇಹದ ಮೇಲೆ ಕಾಣಿಸಕೊಳ್ಳುವ ಕೆಂಪು ಬಣ್ಣದ ಗುಳ್ಳೆಗಳೇ ಇದೆ ಮೊದಲ ಮತ್ತು ಸಾಮಾನ್ಯ ಲಕ್ಷಣ. ಅದೂ ಅಲ್ಲದೆ ಗುಳ್ಳೆಗಳು ಮೂಡುವ ಹಂತದಲ್ಲಿಯೇ ವ್ಯಕ್ತಿ ದೇಹದಲ್ಲಿ ಅಗಾಧ ನೋವನ್ನು ಹೊಂದಿ, ಅಸ್ವಸ್ಥತೆಗೆ ಒಳಗಾಗುತ್ತಾನೆ. ಇನ್ನು ಕೆಲವು ಸಾಮಾನ್ಯ ಲಕ್ಷಣಗಳೆಂದರೆ,
ಗಂಟಲು ಕೆರತ ಹಸಿವೆ ಇಲ್ಲದಿರುವುದು ತಲೆನೋವು ಜ್ವರ ಆಯಾಸ ಕಾಣಿಸಕೊಳ್ಲುತ್ತದೆ. ಒಂದು ಬಾರಿ ಚಿಕನ್ಪಾಕ್ಸ್ ಕಾಣಿಸಿಕೊಂಡರೆ ಗುಣಮುಖರಾಗಲು 2 ವಾರಗಳ ಸಮಯ ಬೇಕಾಗುತ್ತದೆ.
ಚಿಕನ್ಪಾಕ್ಸ್ಗೆ ಯಾವ ರೀತಿ ಚಿಕಿತ್ಸೆ ನೀಡಬೇಕು? ಚಿಕನ್ಪಾಕ್ಸ್ ನಲ್ಲಿ ಮುಖ್ಯವಾಗಿ ಕಾಣಿಸಕೊಳ್ಳುವುದು ತುರಿಕೆ ಮತ್ತು ಉರಿ. ಚಿಕ್ಕ ಮಕ್ಕಳಲ್ಲಿ ಚಿಕನ್ಪಾಕ್ಸ್ ಕಾಣಿಸಕೊಂಡಾಗ ಅವರು ತುರಿಸಿಕೊಂಡು ಗುಳ್ಳೆಗಳು ನಂಜಾಗದಂತೆ ನೋಡಿಕೊಳ್ಳಬೇಕು. ವೈದ್ಯರ ಬಳಿ ಹೋಗದೆಯೂ ಚಿಕನ್ಪಾಕ್ಸ್ ಅನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇಲ್ಲಿವೆ ಕೆಲವು ಸುಲಭ ವಿಧಾನ ಉಗುರುಗಳನ್ನು ಸರಿಯಾಗಿ ಕತ್ತರಿಸಿಕೊಳ್ಳಿ. ಏಕೆಂದರೆ ನಿಮ್ಮ ಉಗುರುಗಳು ಗುಳ್ಳೆಗಳಿಗೆ ತಾಗಿ ಇನ್ಫೆಕ್ಷನ್ ಉಂಟಾಗುವ ಸಾಧ್ಯತೆ ಇರುತ್ತದೆ. ಕೈಗಳಿಗೆ ಆದಷ್ಟು ಗ್ಲೌಸ್ ಹಾಕಿಕೊಳ್ಳಿ. ಇದರಿಂದ ತುರಿಕೆಯಾದಾಗ ಇನ್ಫೆಕ್ಷನ್ ಆಗುವುದನ್ನು ತಡೆಯಬಹುದು. ಆದಷ್ಟು ಕಾಟನ್ ಬಟ್ಟೆಗಳನ್ನು ಧರಿಸಿ ಸಾಧ್ಯವಾದರೆ ಸ್ನಾನವನ್ನು ತ್ಯಜಿಸಿ ಇಲ್ಲವಾದರೆ ಕಡಲೆಹಿಟ್ಟು ಹಾಕಿ ಸ್ನಾನ ಮಾಡಿ. ಯಾವುದೇ ಕಾರಣಕ್ಕು ರಾಸಾಯನಿಕಗಳಿರುವ ಸೋಪನ್ನು ಬಳಸಬೇಡಿ. ಗುಳ್ಳೆಗಳನ್ನು ಒಣ ಬಟ್ಟೆಯಿಂದಾದರೂ ಪ್ರತಿನಿತ್ಯ ಸ್ವಚ್ಛಗೊಳಿಸಿ.
(ಇಲ್ಲಿರುವ ಸಲಸಹೆಗಳು ಟಿವಿ9 ಡಿಜಿಟಲ್ನ ಅಭಿಪ್ರಾಯವಾಗಿರುವುದಿಲ್ಲ. ತಜ್ಞರ ಮಾಹಿತಿ ಉಲ್ಲೇಖಿಸಿದ ವರದಿಯನ್ನು ಆಧರಿಸಿ ಮಾಹಿತಿ ನೀಡಲಾಗಿದೆ)
ಇದನ್ನೂ ಓದಿ:
ಮಲಬದ್ಧತೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದೀರಾ? ಈ ಆಹಾರಗಳು ತಕ್ಷಣದ ಪರಿಹಾರವನ್ನು ನೀಡುತ್ತವೆ ಗಮನಿಸಿ
Published On - 10:33 am, Thu, 3 March 22