ವಿಜ್ಞಾನದಿಂದ ಪೌಷ್ಟಿಕ ಭದ್ರತೆ ಹಾಗೂ ಸಾಕಷ್ಟು ಪ್ರೋಟಿನ್ ಲಭ್ಯತೆಯತ್ತ

ವ್ಯಕ್ತಿ ತಮ್ಮ ತೂಕದ ಪ್ರತಿ ಕಿಲೋಗ್ರಾಂಗೆ 0.8ರಿಂದ 1 ಗ್ರಾಂನಷ್ಟು ಪ್ರೋಟಿನ್ ನಿತ್ಯ ಸೇವಿಸಬೇಕು. ಆದರೆ ದೇಶದ ಸರಾಸರಿ ವಯಸ್ಕರು ಇದರ ಕೊರತೆ ಎದುರಿಸುತ್ತಿದ್ದು, 0.6ಗ್ರಾಂ ನಷ್ಟು ಮಾತ್ರ ಪ್ರೋಟಿನ್ ಸೇವಿಸುತ್ತಿದ್ದಾರೆ.

ವಿಜ್ಞಾನದಿಂದ ಪೌಷ್ಟಿಕ ಭದ್ರತೆ ಹಾಗೂ ಸಾಕಷ್ಟು ಪ್ರೋಟಿನ್ ಲಭ್ಯತೆಯತ್ತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 04, 2022 | 6:42 PM

1960ರ ಹಸಿರುಕ್ರಾಂತಿಯ ನಂತರ ಭಾರತ, ಆಹಾರ ಅಭಾವ ರಾಷ್ಟ್ರದಿಂದ ಆಹಾರ ಭದ್ರತೆಯ ರಾಷ್ಟ್ರವಾಗಿ ಬಹುದೂರ ಪಯಣಿಸಿದೆ. ಎರಡು ದಶಕಗಳ ಕಾಲ ಆಹಾರ ಆಮದಿನ ಮೇಲೆ ಅವಲಂಬಿತವಾಗಿದ್ದ ದೇಶ, ಉತ್ಪಾದನೆ ಹೆಚ್ಚಿಸಲು ವೈಜ್ಞಾನಿಕ ವಿಧಾನಗಳನ್ನು ಬಳಸುತ್ತಿದೆ. ದುರದೃಷ್ಟವಶಾತ್ ಭಾರತದ ಜನಸಂಖ್ಯೆಯ ಶೇಕಡಾ 14ರಷ್ಟು ಅಂದರೆ ಸುಮಾರು 190 ಮಿಲಿಯನ್ ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪೂರೈಕೆಯಲ್ಲಿ ಆಗಿರುವ ತಾರತಮ್ಯ ಹಾಗೂ ಕೃಷಿ ಉತ್ಪಾದನೆ ಕುಸಿತ ಇದಕ್ಕೆ ಕಾರಣವಾಗಿದ್ದರೂ, ಪ್ರೋಟಿನ್ , ಮಿಟಮಿನ್ಸ್ ಹಾಗೂ ಖನಿಜಾಂಶಗಳ ಕೊರತೆಯಿಂದ ತಲೆದೋರಿರುವ ಪೋಷಣೆಗಳ ಅಭಾವ ಅಲ್ಲಗಳೆಯುವಂತಿಲ್ಲ. ಭಾರತದ ವೈದ್ಯಕೀಯ ಸಂಶೋಧನಾ ಮಂಡಳಿ –ಐಸಿಎಂಆರ್ ಪ್ರಕಾರ ಪ್ರತಿ ವಯಸ್ಕ ವ್ಯಕ್ತಿ ತಮ್ಮ ತೂಕದ ಪ್ರತಿ ಕಿಲೋಗ್ರಾಂಗೆ 0.8ರಿಂದ 1 ಗ್ರಾಂನಷ್ಟು ಪ್ರೋಟಿನ್ ನಿತ್ಯ ಸೇವಿಸಬೇಕು. ಆದರೆ ದೇಶದ ಸರಾಸರಿ ವಯಸ್ಕರು ಇದರ ಕೊರತೆ ಎದುರಿಸುತ್ತಿದ್ದು, 0.6ಗ್ರಾಂ ನಷ್ಟು ಮಾತ್ರ ಪ್ರೋಟಿನ್ ಸೇವಿಸುತ್ತಿದ್ದಾರೆ. ವಯಸ್ಕರಲ್ಲಿ ಪ್ರೋಟಿನ್ ಕೊರತೆಯಿಂದ ಮಾಂಸಖಂಡ ದುರ್ಬಲವಾಗುವುದು. ರೋಗ ನಿರೋಧಕ ಶಕ್ತಿ ಕುಂದುವುದು ಹಾಗೂ ಗಾಯ ಮಾಯುವುದು ವಿಳಂಬ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಭಾರತದ ಮಕ್ಕಳೂ ಸಹ ಪ್ರೋಟಿನ್ ಎನರ್ಜಿ ಅಪೌಷ್ಟಿಕತೆಯಿಂದ (ಪಿಇಎಂ) ಬಳಲುತ್ತಿದ್ದು, ಶೇಕಡಾ 38ರಷ್ಟು ಮಕ್ಕಳಲ್ಲಿ ಕುಜ್ಬತೆ, ಶೇಕಡಾ 21ರಷ್ಟು ಮಕ್ಕಳಲ್ಲಿ ಬೆಳವಣಿಗೆ ದೋಷ ಹಾಗೂ ಶೇಕಡಾ 35.6ರಷ್ಟು ಮಕ್ಕಳಲ್ಲಿ ಕಡಿಮೆ ತೂಕದ ಸಮಸ್ಯೆಗಳು 2019-21ರ ಅವಧಿಯಲ್ಲಿ ಕಂಡು ಬಂದಿತು.

ಅಕ್ಕಿ ಹಾಗೂ ಗೋಧಿಯಂತಹ ಪ್ರಮುಖ ಧಾನ್ಯಗಳ ಸೇವನೆಗೆ ನೀಡಿರುವ ತೀವ್ರ ಗಮನದಿಂದಾಗಿ ದೇಹಕ್ಕೆ ಅಗತ್ಯವಿರುವ ಇತರ ಪೋಷಕಾಂಶಗಳನ್ನು ಒದಗಿಸುವಂತಹ ವೈವಿಧ್ಯಮಯ ಆಹಾರಗಳ ಸೇವನೆ ನಿಂತು ಹೋಗಿದೆ . ನ್ಯಾಷನಲ್ ನ್ಯೂಟ್ರಿಷನ್ ಮಾನಿಟರಿಂಗ್ ಬೋರ್ಡ್ ಸಮೀಕ್ಷೆ ಪ್ರಕಾರ ಭಾರತೀಯ ಆಹಾರ ಕ್ರಮದಲ್ಲಿ ಶೇಕಡ 60ರಷ್ಟು ಪ್ರೋಟಿನ್, ಕಡಿಮೆ ಜೀರ್ಣತೆ ಹಾಗೂ ಕಳಪೆ ಗುಣಮಟ್ಟ ಹೊಂದಿರುವ ಧಾನ್ಯಗಳಿಂದ ಪೂರೈಕೆಯಾಗುತ್ತಿದೆ. ಉತ್ತಮ ಪೋಷಕಾಂಶದ ಪ್ರಾಮುಖ್ಯತೆ ಮೇಲೆ ಹೆಚ್ಚಿನ ಒತ್ತಡ ಹಾಕುವುದು ಈ ಕೊರೋನಾ ಹಿನ್ನೆಲೆಯಲ್ಲಿ ಕಂಡುಬಂದ ಆರೋಗ್ಯದ ಹಿನ್ನಡೆ ದೃಷ್ಟಿಯಲ್ಲಿ ಈಗ ಅಗತ್ಯವೇನೂ ಇಲ್ಲ. ಭಾರತದ ಆಹಾರ ಪರಿಸರ ಹಾಗೂ ವಿವಿಧ ಆಹಾರ ಮೂಲಗಳಿಗೆ ಹೊಸ ರೂಪ ನೀಡಲು ಕಾಲ ಈಗ ಪಕ್ವವಾಗಿದೆ.

ಚಾರ್ಲ್ಸ್ ಡಾರ್ವಿನ್ ಹೇಳಿದಂತೆ “ಉಳಿಯುವುದು ಬಲಶಾಲಿಯಾದ ಅಥವಾ ಬುದ್ದಿವಂತ ಜೀವ ಪ್ರಭೇದವಲ್ಲ, ಬದಲಾಗಿ ಬದಲಾವಣೆಗೆ ಕೂಡಲೇ ಸ್ಪಂದಿಸಿದ ಜೀವಿಗಳು ಮಾತ್ರ ” ಎಂದು. ಆಹಾರ ಸಂಸ್ಕರಣೆ ತಂತ್ರಜ್ಞಾನ, ವಿವಿಧ ರೀತಿಯ ಪೌಷ್ಟಿಕ ಆಹಾರ ವರ್ಷದ ಎಲ್ಲ ಕಾಲದಲ್ಲಿ ದೊರೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅನುವಂಶಿಕ ಮಾರ್ಪಾಡು (ಜನೆಟಿಕ್ ಮಾಡಿಫಿಕೇಷನ್ ) , ಮಣ್ಣಿನ ಫಲವತ್ತತೆ ಸುಧಾರಣೆಗೆ ಆಧುನಿಕ ವಿಧಾನ, ಉತ್ತಮ ಪ್ರೋಟಿನ್ ಗಳ ಸಂಗ್ರಹಣೆಯಿಂದ ಪೌಷ್ಟಿಕಯುತ ಆಹಾರದ ಲಭ್ಯತೆ ಹೆಚ್ಚಿಸಬಹುದು.

ಶೇಕಡಾ 70ಕ್ಕೂ ಹೆಚ್ಚು ಭಾರತೀಯರು ಮಾಂಸಾಹಾರಿಗಳು ಆಗಿದ್ದರೂ, ಅದನ್ನು ಪಡೆಯಲಾಗದ ಸ್ಥಿತಿಯಿಂದಾಗಿ ಮಾಂಸಾಹಾರ ಸೇವನೆ ವಿರಳವಾಗಿದೆ. ಹಾಲು ಮತ್ತು ಬೇಳೆಕಾಳುಗಳು, ಪ್ರೋಟಿನ್ ನ ಪ್ರಾಥಮಿಕ ಮೂಲಗಳಾಗಿವೆ. ಆದಾಗ್ಯೂ ಭಾರತದಲ್ಲಿ ಬೇಳೆಕಾಳುಗಳ ಬೇಡಿಕೆ, ಅದರ ಉತ್ಪಾದನಾ ಮಿತಿಯನ್ನು ಮೀರಿದ್ದು, ಲಭ್ಯವಿರುವುದೆಲ್ಲ ಉತ್ತಮ ಗುಣಮಟ್ಟದ ಪ್ರೋಟಿನ್ ಹೊಂದಿಲ್ಲ. ಈ ಕೊರತೆಯನ್ನು ಆಹಾರ ವಿಜ್ಞಾನ, ಪ್ರೋಟಿನ್ ಯುಕ್ತ ಆಹಾರ, ಪ್ರೋಟಿನ್ ಸಪ್ಲಿಮೆಂಟ್ ಹಾಗೂ ಉತ್ತಮ ಗುಣಮಟ್ಟದ ಸಸ್ಯಜನ್ಯ ಪ್ರೋಟಿನ್ ಯುಕ್ತ ಆಹಾರದಿಂದ ಬಗೆಹರಿಸಿಕೊಳ್ಳಬಹುದು. ವಿವಿಧ ರೀತಿಯ ಆಹಾರ ಬೆಳೆಗಳನ್ನು ಹೊಂದಿರುವ ಭಾರತದಲ್ಲಿ, ಶೇಕಡಾ 10ರಷ್ಟು ಕೃಷಿ ಉತ್ಪನ್ನ ಮಾತ್ರ ಸಂಸ್ಕರಣೆಯಾಗುತ್ತಿದೆ. ಈವರೆಗೆ ಹೆಚ್ಚು ಬಳಸಿಕೊಂಡಿರದ ಹಾಗೂ ಸಾಧ್ಯತೆಗಳನ್ನು ಕಂಡುಕೊಳ್ಳದ ಪ್ರೋಟಿನ್ ಮತ್ತು ಸೂಕ್ಷ್ಮ ಪೋಷಕಾಂಶಯುಕ್ತ ಆಹಾರ ಸಂಬಂಧಿತ ಬೆಳೆಗಳನ್ನು ಸೂಕ್ತ ಸಂಸ್ಕರಣೆ ಹಾಗೂ ಅಭಿವೃದ್ಧಿಯೊಂದಿಗೆ ಗ್ರಾಹಕರಿಗೆ ಒದಗಿಸಬೇಕಿದೆ.

ಸಾಮಾನ್ಯವಾಗಿ ಲಭ್ಯವಿರುವ ಅಕ್ಕಿಯಂತಹ ಆಹಾರ ಪದಾರ್ಥಗಳನ್ನು ಬಲವರ್ಧನೆಗೊಳಿಸಲು, ವಿಜ್ಞಾನದ ಕೊಡುಗೆಗಳನ್ನು ಬಳಸಿಕೊಂಡು ಸೂಕ್ಷ್ಮ ಹಾಗೂ ದೊಡ್ಡ ಪೋಷಕಾಂಶ ನೀಡಬಹುದಿದೆ. ಆಹಾರ ಸಂಸ್ಕರಣೆ ಕೈಗಾರಿಕೆಗಳಿಂದ ಲಭ್ಯವಾಗುವ ಉಪ ಉತ್ಪನ್ನಗಳನ್ನು ಉತ್ತಮ ಮೌಲ್ಯದ ಹಾಗೂ ಪೌಷ್ಟಿಕಯುಕ್ತ ಉತ್ಪನ್ನಗಳಿಗೆ ಪರಿವರ್ತಿಸಬಹುದು. ಒಡೆದಬೇಳೆಯನ್ನು ಅತ್ಯಗತ್ಯವಾದ ಅಮಿನೂ ಆಸಿಡ್ ಯುಕ್ತ ದಾಲ್ ಉತ್ಪಾದಿಸಲು ಉಪ ಉತ್ಪನ್ನವಾಗಿ ಬಳಸಬಹುದು. ವಿನೂತನ ಉತ್ಪನ್ನಗಳಾದ ವೆಜಿಟೆಬಲ್ ಮೀಟ್ ಬಳಕೆಯಿಂದ ಉತ್ತಮ ಗುಣಮಟ್ಟದ ಪ್ರೋಟಿನ್ ಉತ್ಪಾದಿಸಲು ಸಾಧ್ಯವಿದ್ದು, ಇದಕ್ಕೆ ಪ್ರೋಟಿನ್ ಯುಕ್ತ ಸಸ್ಯಜನ್ಯ ಆಹಾರಗಳಾದ ಕಡಲೆಬೀಜ, ಸೋಯಾ, ಅಣಬೆ, ಮೈಸಿಲಿಯಂ ಮುಂತಾದವುಗಳನ್ನು ಬೆರೆಸಿ ತಯಾರಿಸಬಹುದು. ನಿರಂತರ ಏರುತ್ತಿರುವ ಜನಸಂಖ್ಯೆಗೆ ಪೂರೈಸಲು ಈ ವಿನೂತನ ತಂತ್ರಜ್ಞಾನ ಹಾಗೂ ಉತ್ಪನ್ನಗಳಿಂದ, ಪರಿಸರಕ್ಕೆ ಧಕ್ಕೆಯಾಗದೆ ಗುಣಮಟ್ಟದ ಪ್ರೋಟಿನ್ ಒದಗಿಸಬಹುದು. ಬೆಳೆ ಕಟಾವಿನ ನಂತರ ಹೊಸ ಹಾಗೂ ನವೀನ ಮಾದರಿಯ ಕ್ರಮಗಳನ್ನು ಅನುಸರಿಸಿ ಕೃಷಿ ಉತ್ಪನ್ನಗಳು ಹಾಗೂ ಪ್ರಾಣಿ ಉತ್ಪನ್ನಗಳನ್ನು ಅವುಗಳ ಪೋಷಕಾಂಶ ನಷ್ಟವಾಗದ ಹಾಗೂ ಸಂರಕ್ಷಿಸುವುದು ಸಾಧ್ಯ.

ಆಹಾರ ಸಂಸ್ಕರಣೆ ಕೈಗಾರಿಕೆಗಳಿಂದ ಉಪಉತ್ಪನ್ನಗಳ ರೂಪದಲ್ಲಿ ನಷ್ಟವಾಗುವ ಪ್ರೋಟಿನ್, ವಿಟಮಿನ್ ಹಾಗೂ ಖನಿಜಾಂಶಗಳನ್ನು ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಬಳಸುವ ಮೂಲಕ ಆಹಾರ ಭದ್ರತೆಗೆ ನಾಂದಿ ಹಾಡಬಹುದು. ಈ ಹಿನ್ನೆಲೆಯಲ್ಲಿ , ಆಹಾರ ವಿಜ್ಞಾನ ಹಾಗೂ ತಂತ್ರಜ್ಞಾನ ಹೆಚ್ಚು ಮನ್ನಣೆ ಪಡೆಯುವ ಮೂಲಕ ಹೊಸ ಆಹಾರ ಪದ್ದತಿ ಅಳವಡಿಕೆಗೆ ದಾರಿಯಾಗಲಿದೆ. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವೈಜ್ಞಾನಿಕ ವಿಶ್ಲೇಷಣೆಯ ನೆರವು ಸಿಗಲಿದೆ ಹಾಗೂ ಭವಿಷ್ಯದ ಆಹಾರಕ್ಕೆ ಬುನಾದಿ ಹಾಕಲಿದೆ.

ಡಾ. ಎಚ್.ಎನ್ ಮಿಶ್ರಾ

ಪ್ರೊಫೆಸರ್, ಆಹಾರ ತಂತ್ರಜ್ಞಾನ, ಕೃಷಿ ಹಾಗೂ ಆಹಾರ ಎಂಜಿನಿಯರಿಂಗ್ ವಿಭಾಗ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್ ಪುರ್, ಪ್ರೋಟಿನ್ ಹಕ್ಕು ಅಭಿಯಾನದ ಬೆಂಬಲಿಗ.

Published On - 7:19 pm, Wed, 2 March 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ