ಕೊಣ್ಣೂರಿಗೆ ಬಂದಾಗ ಸೋಫಿಯಾ ಖುರೇಷಿ ಒಬ್ಬ ಸಾಮಾನ್ಯ ಮುಸ್ಲಿಂ ಮಹಿಳೆಯಂತಿರುತ್ತಾರೆ: ಸೋಫಿಯ ಮೈದುನ
ಟಿವಿ9ನೊಂದಿಗೆ ಮಾತಾಡಿರುವ ಕರ್ನಲ್ ತಾಜುದ್ದೀನ್ ಅವರ ಸಹೋದರ, ತನ್ನ ಅತ್ತಿಗೆ ಮನೆಗೆ ಬಂದಾಗ ಒಬ್ಬ ಸಾಮಾನ್ಯ ಮುಸ್ಲಿಂ ಮಹಿಳೆಯಂತಿರುತ್ತಾರೆ, ಎಲ್ಲರೊಂದಿಗೆ ಹೊಂದಿಕೊಳ್ಳುತ್ತಾರೆ, ಸೇನೆಯಲ್ಲಿ ಅಧಿಕಾರಿಯೆಂಬ ಅಹಂ ಸ್ವಲ್ಪವೂ ಇಲ್ಲ, ರಂಜಾನ್ ಹಬ್ಬಕ್ಕೆ ಅವರು ಬರಬೇಕಿತ್ತು, ರಜೆ ಸಿಗದ ಕಾರಣ ಬರಲಿಲ್ಲ, ಬಕ್ರೀದ್ಗೆ ಬರುವ ನಿರೀಕ್ಷೆಯಿದೆ, ಅದರೆ ಯುದ್ಧ ಆರಂಭವಾದರೆ ಬರಲಾರರು ಎಂದು ಹೇಳಿದರು.
ಬೆಳಗಾವಿ, ಮೇ 8: ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಇವತ್ತು ಕರ್ನಾಟಕ ಮಾತ್ರವಲ್ಲ ಇಡೀದೇಶದಲ್ಲಿ ಜನಜನಿತ ಹೆಸರು. ಅವರು ಬೆಳಗಾವಿಯ ಸೊಸೆ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಅವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ (Colonel Tajuddin Bagewadi) ಅವರ ಹುಟ್ಟೂರು ಕೊಣ್ಣೂರಲ್ಲಿರುವ ಮನೆಯನ್ನು ನಮ್ಮ ಬೆಳಗಾವಿ ವರದಿಗಾರ ವಿಡಿಯೋದಲ್ಲಿ ತೋರಿಸಿದ್ದಾರೆ. ಮನೆಯಲ್ಲಿ ಕರ್ನಲ್ ತಾಜುದ್ದೀನ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮತ್ತು ಪತ್ನಿ ಸೋಫಿಯಾ ಅವರೊಂದಿಗಿರುವ ಫೋಟೋ ಫ್ರೇಮ್ಗಳನ್ನು ನೋಡಬಹುದು. ವರದಿಗಾರ ಹೇಳುವಂತೆ ಊರಿನ ಜನ ಮನೆಗೆ ಆಗಮಿಸಿ ತಾಜುದ್ದೀನ್ ಕುಟುಂಬಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು? ಇಲ್ಲಿದೆ ಮಾಹಿತಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
