AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cerebral Palsy : ಸೆರೆಬ್ರಲ್ ಪಾಲ್ಸಿ ಎಂದರೇನು? ಅದರ ಲಕ್ಷಣಗಳೇನು? ಇಲ್ಲಿದೆ ಮಾಹಿತಿ

ಅಸಹಜ ಮೆದುಳಿನ ಮೆದುಳಿನ ಬೆಳವಣಿಗೆಯೇ ಸೆರೆಬ್ರಲ್ ಪಾಲ್ಸಿ ಮುಖ್ಯ ಕಾರಣ ಎಂದು ಹೇಳುತ್ತದೆ ವೈದ್ಯ ಲೋಕ. ಇದು ಗರ್ಭಾವಸ್ಥೆಯಲ್ಲಿ ಉಂಟಾಗುವ ಕೆಲವು ತೊಂದರೆಗಳಿಂದ ಉಂಟಾಗುತ್ತದೆ ಎನ್ನಲಾಗಿದೆ

Cerebral Palsy : ಸೆರೆಬ್ರಲ್ ಪಾಲ್ಸಿ ಎಂದರೇನು? ಅದರ ಲಕ್ಷಣಗಳೇನು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Pavitra Bhat Jigalemane|

Updated on: Mar 02, 2022 | 11:01 AM

Share

ಹುಟ್ಟುವಾಗಲೇ ದೇಹದಲ್ಲಿ ಅಸ್ವಸ್ಥತೆಯನ್ನು ಹೊಂದಿದ್ದು, ದೇಹದ ಭಾಗಗಳು ಚಲನೆಗೆ ಸಾಧ್ಯವಾಗದಿದ್ದರೆ ಅದನ್ನ ಸೆರೆಬ್ರಲ್ ಪಾಲ್ಸಿ( cerebral palsy )ಎಂದು ಕರೆಯುತ್ತಾರೆ. ಅಸಹಜ ಮೆದುಳಿನ ಬೆಳವಣಿಗೆ(Abnormal Brain Development) ಯಿಂದ ಸ್ನಾಯು, ಮೂಳೆಗಳು ಸ್ವಾದೀನ ಕಳೆದುಕೊಳ್ಳುತ್ತದೆ. ಇದು ಶಿಶುಗಳು ಹುಟ್ಟುವಾಗಲೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೈಕ್ರೋಸಾಪ್ಟ್​ ಸಿಇಒ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್​ ಅವರು ಕೂಡ 26 ನೇ ವಯಸ್ಸಿಗೆ ಇದೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಮೈಕ್ರೋಸಾಪ್ಟ್​ ಸಿಇಒ ಆದ ನಂತರ ಅವರು ಹಲವು ಈ ರೀತಿ ಅಂಗ ಊನತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯವಾಗುವ ಉತ್ಪನ್ನಗಳನ್ನು ನೀಡುವ ಕೆಲಸ ಮಾಡಿದ್ದರು ಅದೂ ಅಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ತಮ್ಮ ಮಗನಿಗೆ ಚಿಕಿತ್ಸೆ ನೀಡುವ ವೇಳೆ ಕಲಿತ ವಿಷಯಗಳ ಬಗ್ಗೆ ಮಾತನಾಡಿದ್ದರು. ಆದರೂ ಮಾರಣಾಂತಿಕ ಕಾಯಿಲೆಗೆ ಸತ್ಯ ನಾಡೆಲ್ಲಾ ಅವರು ಮಗನನ್ನು ಕಳೆದುಕೊಂಡಿದ್ದಾರೆ. ಈ ರೀತಿ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಜಗತ್ತಿನಲ್ಲಿ ಹಲವರು ಬಳಲುತ್ತಿದ್ದಾರೆ. ಹಾಗಾದರೆ ಈ ಸೆರೆಬ್ರಲ್ ಪಾಲ್ಸಿ ಕಾಯಿಲೆಯ ಲಕ್ಷಣಗಳೇನು, ಯಾಕಾಗಿ ಬರುತ್ತದೆ ಎನ್ನುವುದನ್ನುತಿಳಿದುಕೊಳ್ಳಲೇಬೇಕು. ಇಲ್ಲಿದೆ ಮಾಹಿತಿ, 

ಸೆರೆಬ್ರಲ್ ಪಾಲ್ಸಿ ಲಕ್ಷಣಗಳು: ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಕ್ಷಣಕ್ಷಣಕ್ಕೂ ಹಿಂಸೆ ಅನುಭವಿಸುತ್ತಾರೆ. ಈ ಲಕ್ಷಣಗಳು ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ. ಗಟ್ಟಿಯಾದ ಅಂಗಗಳು ಅನೈಚ್ಛಿಕ ಚಲನೆಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಗಳು ಸ್ನಾಯು ಟೋನ್​ಗಳಲ್ಲಿ ವ್ಯತ್ಯಾಸ ಅನಗತ್ಯವಾಗಿ ದೇಹದ ಭಾಗಗಳಲ್ಲಿ ವೈಬ್ರೇಟ್​ ಆಗುವುದು ದೇಹದ ಭಾಗಗಳ ಚಲನೆಯಲ್ಲಿ ನಿಧಾನ ಅಥವಾ ಅತಿ ಹೆಚ್ಚು ವೇಗ ಮಾತನಾಡಲು ತೊಂದರೆ ಕೇಳುವಲ್ಲಿ ತೊಂದರೆ ರೋಗಗ್ರಸ್ತವಾಗುವಿಕೆಗಳು ಗಟ್ಟಿಯಾದ ಸ್ನಾಯುಗಳು ದೇಹದ ತೂಕದಲ್ಲಿ ವ್ಯತ್ಯಾಸ

ಸೆರೆಬ್ರಲ್ ಪಾಲ್ಸಿ ರೋಗಕ್ಕೆ ಕಾರಣಗಳೇನು? ಅಸಹಜ ಮೆದುಳಿನ ಮೆದುಳಿನ ಬೆಳವಣಿಗೆಯೇ ಸೆರೆಬ್ರಲ್ ಪಾಲ್ಸಿ ಮುಖ್ಯ ಕಾರಣ ಎಂದು ಹೇಳುತ್ತದೆ ವೈದ್ಯ ಲೋಕ. ಇದು ಗರ್ಭಾವಸ್ಥೆಯಲ್ಲಿ ಉಂಟಾಗುವ ಕೆಲವು ತೊಂದರೆಗಳಿಂದ ಉಂಟಾಗುತ್ತದೆ ಎನ್ನಲಾಗಿದೆ. ಆದರೆ ಸೆರೆಬ್ರಲ್ ಪಾಲ್ಸಿ ಕಾಣಿಸಿಕೊಳ್ಳಲು ನಿರ್ದಿಷ್ಟ ಕಾರಣಗಳು ಪತ್ತೆಯಾಗಿಲ್ಲ ಆದರೂ ಈ ಕೆಲವು ಕಾರಣಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.  ಅವು ಯಾವವೆಂದರೆ, ಭ್ರೂಣದ ಸ್ಟ್ರೋಕ್ ಶಿಶು ಸೋಂಕುಗಳು ತಾಯಿಯ ಸೋಂಕುಗಳು ಆಮ್ಲಜನಕದ ಕೊರತೆ ಆಘಾತಕಾರಿ ತಲೆ ಗಾಯ ಶಿಶುವಿನ ಮೆದುಳಿನಲ್ಲಿ ರಕ್ತಸ್ರಾವವಾದರೆ ಈ ರೀತಿಯ ಸೆರೆಬ್ರಲ್ ಪಾಲ್ಸಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. 

ಈ ಕುರಿತು ಟೈಮ್ಸ್​​ ನೌ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ವೊಕಾರ್ಡ್ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ ಪ್ರಶಾಂತ್ ಮಖಿಜಾ ಮಾತನಾಡಿ, ಮಿದುಳಿನ ಹಾನಿಯಿಂದ (ಸೆರೆಬ್ರಲ್) ಅಂಗ ದೌರ್ಬಲ್ಯ (ಪಾರ್ಶ್ವವಾಯು) ಎಂದು ಈ ಸ್ಥಿತಿಯು ಪ್ರಕಟವಾಗುತ್ತದೆ ಎಂದು ಅವರು ಹೇಳಿದ್ದಾರೆ, ಮುಂದುವರೆದು ಮೆದುಳಿನ ಹಾನಿಯು ಶಿಶು ತಾಯಿಯ ಗರ್ಭದಲ್ಲಿರುವಾಗಲೇ ಉಂಟಾಗುತ್ತದೆ. ಹುಟ್ಟಿದ ಬಳಿಕ ದೇಹದ ಭಾಗಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದಿದ್ದಾರೆ.

ಇದನ್ನೂ ಓದಿ: 

Health Tips: ಈ 5 ರುಚಿಕರ ಆಹಾರಗಳು ಹೊಟ್ಟೆಗೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಹಾನಿಕಾರಕ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!