ಬೇವಿನ ತೊಗಟೆಯು ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಸಹಕಾರಿ-ಅಧ್ಯಯನ
ಕಳೆದ 2 ವರ್ಷಗಳಿಂದ ಜನ ಜೀವನವನ್ನು ತಲ್ಲಣಗೊಳಿಸಿದ ಮಾರಕ ರೋಗ ಕೊರೊನಾ ಹರಡುವುದನ್ನು ತಡೆಯಲು ಕೂಡ ಬೇವು ಸಹಕಾರಿ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಅನಾದಿ ಕಾಲದಿಂದಲೂ ಬೇವು (Neem) ಆರೋಗ್ಯಕ್ಕೆ ಒಳಿತು ಎಂದು ಹೇಳಲಾಗಿದೆ. ಸೋಂಕುಗಳನ್ನು ತಡೆಯಲು, ದೇಹದಲ್ಲಿ ರೋಗ ನಿರೋಧಕ (Immunity Power) ಶಕ್ತಿಯನ್ನು ಹೆಚ್ಚಿಸಲು ಬೇವು ಹಾಗೂ ಬೇವಿನ ವಿವಿಧ ಭಾಗಗಳು ಸಹಾಯಕ ಎಂದು ಪುರಾತನ ಕಾಲದಿಂದಲು ನಂಬಲಾಗಿದೆ. ಇದೀಗ ಕಳೆದ 2 ವರ್ಷಗಳಿಂದ ಜನ ಜೀವನವನ್ನು ತಲ್ಲಣಗೊಳಿಸಿದ ಮಾರಕ ರೋಗ ಕೊರೊನಾ ಹರಡುವುದನ್ನು ತಡೆಯಲು ಕೂಡ ಬೇವು ಸಹಕಾರಿ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಕೊಲೊರಾಡೋ ವಿಶ್ವವಿದ್ಯಾನಿಲಯ ಅನ್‌ಶುಟ್ಜ್ ವೈದ್ಯಕೀಯ ಕ್ಯಾಂಪಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ನ ಕೋಲ್ಕತ್ತಾದ ವಿಜ್ಞಾನಿಗಳ ನೇತೃತ್ವದ ತಂಡ ಹೊಸ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಬೇವಿನ ತೊಗಟೆ (Bark of Neem tree)ಯು ಕೊರೊನಾ ಹರಡುವುದನ್ನು ತಡೆಯಲು ಸಹಕಾರಿ ಎಂದು ಪತ್ತೆ ಮಾಡಲಾಗಿದೆ.
ಅಧ್ಯಯನ ವರದಿಯನ್ನು ವೈರಾಲಜಿ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಬೇವಿನ ತೊಗಟೆಯ ಘಟಕಗಳು ಸಮೃದ್ಧವಾದ ವೈರಲ್ ಪ್ರೋಟೀನ್‌ಗಳನ್ನು ಹೊಂದಿದೆ, ಇದು ಕೊರೋನ ವೈರಸ್‌ಗಳ ರೂಪಾಂತರಗಳ ವಿರುದ್ಧ ಆಂಟಿವೈರಲ್ ಏಜೆಂಟ್ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಸೋಂಕುಗಳ ವಿರೋಧಿಯಾಗಿ ಬೇವಿನ ಎಲೆಗಳು ಮತ್ತು ತೊಗಟೆಗಳನ್ನು ಬಳಸಲಾಗುತ್ತಿದೆ. ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಲ್ ಆಗಿ ಬೇವಿನ ತೊಗಟೆಗಳನ್ನು ಬಳಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ, ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ, ಅಲ್ಸರ್, ಮಲೇರಿಯಾ ಸೇರಿದಂತೆ ಹಲವು ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ಅಧ್ಯಯನದ ಉದ್ದೇಶವೆಂದರೆ, ಬೇವಿನ ತೊಗಟೆಯಿಂದ ತಯಾರಿಸಿದ ಔಷಧವು ಯಾವ ಮಟ್ಟದಲ್ಲಿ ಸಾಂಕ್ರಾಮಿಕ ರೋಗ ಕೊರೊನಾದಿಂದ ಜನರನ್ನು ಕಾಪಾಡುವಂತೆ ಮಾಡುತ್ತದೆ ಎಂದು ಕಂಡುಹಿಡಿಯುವುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಮೊದಲು ಬೇವಿನ ತೊಗಟೆಯಲ್ಲಿರುವ ಆ್ಯಂಟಿ ವೈರಲ್ ಗುಣಗಳನ್ನು ಕಂಡುಕೊಂಡು ಕೊರೊನಾ ಹರಡದಂತೆ ತಡೆಯಲು ಔಷಧವನ್ನು ಯಾವ ಡೊಸೇಜ್ನಲ್ಲಿ ಕೊಡಬೇಕು ಎಂದು ಹೇಳುತ್ತೇವೆ ಎಂದಿದ್ದಾರೆ. ಅಧ್ಯಯನದಲ್ಲಿ ನಾವು ಸೋಂಕಿಗೆ ಒಳಗಾದ ಗಂಟಲನ್ನು ಸರಿಪಡಿಸಲು ಬೇಕಾದ ಡೋಸೇಜ್ಅನ್ನು ಕೂಡ ಶೀಘ್ರದಲ್ಲಿ ಹೇಳುತ್ತೇವೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ:
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದಾಗುವ ಲಾಭಗಳೇನು? ತಿಳಿದುಕೊಳ್ಳಿ