ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದಾಗುವ ಲಾಭಗಳೇನು? ತಿಳಿದುಕೊಳ್ಳಿ

ತುಪ್ಪ ಚರ್ಮದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.  ತುಪ್ಪವನ್ನು ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಬಳಸಬಹುದಾಗಿದೆ.

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದಾಗುವ ಲಾಭಗಳೇನು? ತಿಳಿದುಕೊಳ್ಳಿ
ತುಪ್ಪ (ಪ್ರಾತಿನಿಧಿಕ ಚಿತ್ರ
Follow us
| Updated By: Pavitra Bhat Jigalemane

Updated on: Mar 03, 2022 | 12:51 PM

ಆರೋಗ್ಯದ ವಿಚಾರ ಬಂದಾಗ ಎಲ್ಲ ರೀತಿಯಲ್ಲಿಯೂ ಕಾಳಜಿವಹಿಸುತ್ತೇವೆ. ದೇಹದ ಆರೋಗ್ಯವನ್ನು ಹೆಚ್ಚಿಸುವ ಪದಾರ್ಥಗಳ ಸೇವನೆಯತ್ತ ಹೆಚ್ಚು ಗಮನಹರಿಸುತ್ತೇವೆ. ಆದರೆ ಕೆಲವು ಪದಾರ್ಥಗಳ ಸೇವೆನೆಯಿಂದ ಕೊಬ್ಬು ಹೆಚ್ಚಾಗುತ್ತದೆ ಅಥವಾ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು  ಉದಾಸೀನ ತೋರಿಸುವವರೇ ಹೆಚ್ಚು. ಅಂತಹ ಮೂಗು ಮುರಿಯುವ ಪದಾರ್ಥಗಳಲ್ಲಿ ತುಪ್ಪ (Ghee) ಕೂಡ ಒಂದು. ಆದರೆ ತುಪ್ಪದಿಂದ ಅನೇಕ ಆರೋಗ್ಯ (Health) ಅನುಕೂಲವಾಗುವ ಗುಣಗಳಿವೆ ಎನ್ನುವುದನ್ನು ತಿಳಿದುಕೊಳ್ಳಲೇಬೇಕು. ಪ್ರತಿದಿನ ಬೆಳಗ್ಗೆ ತುಪ್ಪವನ್ನು ಸೇವಿಸುವುದರಿಂದ ಹಲವು ಉಪಯೋಗಗಳಿವೆ ಎನ್ನುತ್ತಾರೆ ತಜ್ಞರು. ಆಯುರ್ವೇದ (Ayurveda) ದಲ್ಲಿಯೂ ತುಪ್ಪದ ಬಳಕೆಯ ಬಗ್ಗೆ ಉಲ್ಲೇಖವಿದೆ. ಹೀಗಾಗಿ ತುಪ್ಪದ ಸೇವನೆ ಆರೋಗ್ಯಕ್ಕೆ ಹಲವು ಉಪಯುಕ್ತ ಅಂಶಗಳನ್ನು ನೀಡುತ್ತದೆ.

ಈ ಬಗ್ಗೆ ನ್ಯೂಟ್ರಿಷಿಯನ್​ ತಜ್ಞರಾದ ಅವಂತಿ ದೇಶಪಾಂಡೆ ಅವರು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ತುಪ್ಪದಿಂದ ಸಿಗುವ ಲಾಭಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.  ಡೈರಿ ಉತ್ಪನ್ನಗಳಲ್ಲಿ ತುಪ್ಪ ಮಾತ್ರವಲ್ಲ. ಹಾಲು, ಬೆಣ್ಣೆ, ಮೊಸರು ಕೂಡ ದೇಹದ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಇಲ್ಲಿದೆ ನೋಡಿ ತುಪ್ಪದಿಂದಾಗುವ ಲಾಭಗಳು.

  1. ಪ್ರತಿನಿತ್ಯ ತುಪ್ಪದ ಸೇವನೆಯಿಂದ ಕೀಲುಗಳಿಗೆ ಬೇಕಾದ ಎಣ್ಣೆಯ ಅಂಶ ದೊರೆಯುತ್ತದೆ. ಇದು ಕೀಲುಗಳ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ.
  2.  ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ತುಪ್ಪ ಮಹತ್ವದ ಕಾರ್ಯನಿರ್ವಹಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸಲು ತುಪ್ಪ ಸಹಾಯಕಾಗಿದೆ.
  3.  ತುಪ್ಪ ಚರ್ಮದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.  ತುಪ್ಪವನ್ನು ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಬಳಸಬಹುದಾಗಿದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
  4.  ಕರುಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಲು ತುಪ್ಪ ಸಹಾಯಕವಾಗಿದೆ. ಅನಿಯಮಿತ ಕರುಳಿನ ಚಲನೆಯನ್ನು ತಡೆಗಟ್ಟಿ ಆಹಾರ ಸರಿಯಾಗಿ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ.
  5.  ತುಪ್ಪದ ಸೇವನೆಯಿಂದ ಹಸಿವೆಯನ್ನು ನಿಯಂತ್ರಿಸಬಹುದಾಗಿದೆ. ಅದೇ ರೀತಿ ತೂಕ ನಷ್ಟಕ್ಕೆ ತುಪ್ಪ ಸಹಾಯಕವಾಗಿದೆ. ಅದರಲ್ಲು ದೇಸಿ ಹಸುವಿನ ತುಪ್ಪದ ಸೇವನೆ ದೇಹವನ್ನು ಆರೋಗ್ಯವಾಗಿಡುವಂತೆ ಮಾಡುತ್ತದೆ.
  6.  ತುಪ್ಪವನ್ನು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಉರಿಯೂತ, ತಲೆನೋವಿನ ಪರಿಹಾರಕ್ಕೂ ತುಪ್ಪ ಅತ್ಯತ್ತಮ ಪದಾರ್ಥವಾಗಿದೆ. ಹೀಗಾಗಿ ಪ್ರತಿನಿತ್ಯ ತುಪ್ಪದ ಸೇವನೆ ಅಭ್ಯಸಿಸಿಕೊಳ್ಳಿ.

ಇದನ್ನೂ ಓದಿ:

Chickenpox: ಚಿಕನ್​ಪಾಕ್ಸ್​​ ಲಕ್ಷಣಗಳೇನು? ಹರಡುವಿಕೆ ಹೇಗೆ? ಇಲ್ಲಿದೆ ಮಾಹಿತಿ