Red Meat: ಕೆಂಪು ಮಾಂಸವನ್ನು ಹೆಚ್ಚು ಸೇವಿಸುತ್ತೀರಾ? ಈ ಸಮಸ್ಯೆಗಳು ಕಾಡಬಹುದು ಎಚ್ಚರ

ಕೆಂಪು ಮಾಂಸವನ್ನು ಅತಿಯಾಗಿ ಸೇವಿಸಿದರೆ ಹೃದಾಯಾಘಾತಕ್ಕೆ ಕಾರಣವಾಗುತ್ತದೆ ಎಂದು ಈ ಹಿಂದೆ ಅಧ್ಯಯನವೊಂದು ಸಾಬೀತುಪಡಿಸಿತ್ತು. ಹೀಗಾಗಿ ಕೆಂಪು ಮಾಂಸದ ಸೇವನೆ ಕಡಿಮೆ ಇದ್ದರೆ ದೇಹಕ್ಕೂ ಹಿತ.

Red Meat: ಕೆಂಪು ಮಾಂಸವನ್ನು ಹೆಚ್ಚು ಸೇವಿಸುತ್ತೀರಾ? ಈ ಸಮಸ್ಯೆಗಳು ಕಾಡಬಹುದು ಎಚ್ಚರ
ಕೆಂಪು ಮಾಂಸ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Pavitra Bhat Jigalemane

Updated on: Mar 04, 2022 | 10:26 AM

ಬಾಯಿಗೆ ರುಚಿ ನೀಡುವ ಕೆಲವು ಆಹಾರ (Food) ಗಳು ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಅಂತಹವುಗಳಲ್ಲಿ ರೆಡ್​ ಮೀಟ್ (Red Meat)​ ಕೂಡ ಒಂದು. ರೆಡ್​ ಮೀಟ್​ ಅನ್ನು ಕುರಿ, ಜಿಂಕೆ, ಹಂದಿ, ಮೇಕೆ ಸೇರಿದಂತೆ ಕೆಲವೇ ಕೆಲವು ಪ್ರಾಣಿಗಳಿಂದ ಪಡೆಯುತ್ತಾರೆ. ಮಸಾಲೆಯುಕ್ತ ಈ ಮಾಂಸಗಳ ಖಾದ್ಯಗಳು ಬಾಯಿಗೆ ಹೆಚ್ಚು ರುಚಿ ನೀಡುತ್ತವೆ. ಆದರೆ ದೇಹದಲ್ಲಿ ಅತಿಯಾದ ಕೊಬ್ಬು ಸಂಗ್ರವಾಗುವಂತೆ ಮಾಡುತ್ತದೆ. ಜತೆಗೆ ರಕ್ತದ ಚಲನೆಯಲ್ಲಿ ಏರುಪೇರು ಮಾಡುತ್ತದೆ. ಅದರಲ್ಲೂ ಅತಿಯಾದ ರೆಡ್​ ಮಿಟ್​ ಸೇವನೆ ದೇಹಕ್ಕೆ ಸಾಕಷ್ಟು ಹಾನಿಯುಂಟು ಮಾಡುತ್ತದೆ. ಕೆಂಪು ಮಾಂಸವನ್ನು ಅತಿಯಾಗಿ ಸೇವಿಸಿದರೆ ಹೃದಾಯಾಘಾತಕ್ಕೆ ಕಾರಣವಾಗುತ್ತದೆ ಎಂದು ಈ ಹಿಂದೆ ಅಧ್ಯಯನವೊಂದು ಸಾಬೀತುಪಡಿಸಿತ್ತು. ಹೀಗಾಗಿ ಕೆಂಪು ಮಾಂಸದ ಸೇವನೆ ಕಡಿಮೆ ಇದ್ದರೆ ದೇಹಕ್ಕೂ ಹಿತ. ಹಾಗಾದರೆ ಕೆಂಪು ಮಾಂಸದ ಸೇವನೆಯಿಂದ ಯಾವೆಲ್ಲಾ ಅಪಾಯಗಳಿವೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ,

ಅತಿಯಾದ ತೂಕ : ಕೆಂಪು ಮಾಂಸದಲ್ಲಿರುವ ಲಿಪಿಡ್​ ಅಂಶಗಳು ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಗೊಳ್ಳುವಂತೆ ಮಾಡುತ್ತದೆ. ಇದರಿಂದ ಬೊಜ್ಜು ಬೆಳೆಯುತ್ತದೆ. ಇದರಿಂದ ದೇಹದಲ್ಲಿ ತೂಕ ಹೆಚ್ಚಲು ಕಾರಣವಾಗುತ್ತದೆ. ಸೊಂಟದ ಭಾಗದಲ್ಲಿ ಬೊಜ್ಜು ಬೆಳೆಯುವುದು, ತೂಳುಗಳಲ್ಲಿ ಅನಗತ್ಯ ಕೊಬ್ಬು ತುಂಬಿಕೊಂಡು ಸಮಸ್ಯೆಯನ್ನು ಉಲ್ಬಣಿಸುತ್ತದೆ.

ದೇಹದಿಂದ ಕೆಟ್ಟ ವಾಸನೆ: ಕೆಂಪು ಮಾಂಸ ಸೇವನೆಯಿಂದ ದೇಹದಲ್ಲಿ ಕೆಟ್ಟ ವಾಸನೆ ಉತ್ಪತ್ತಿಯಾಗುವಂತೆ ಮಾಡುತ್ತದೆ. ನೆನಪಿಡಿ ನಾವು ಸೇವಿಸುವ ಆಹಾರದಿಂದ ನಮ್ಮ ದೇಹದಲ್ಲಿ ಕೆಲವು ರಾಸಾಯನಿಕಗಳು ಉತ್ಪತ್ತಿಯಾಗುತ್ತದೆ. ಇದರಿಂದ ದೇಹದಿಂದ ಹೊರಸೂಸುವ ವಾಸನೆ ಕೂಡ  ಬದಲಾಗುತ್ತದೆ. ಕೆಂಪು ಮಾಂಸವನ್ನು ಅತಿಯಾಗಿ ಸೇವಿಸಿದರೆ ದೇಹ ಕೆಟ್ಟ ವಾಸನೆಯನ್ನು ಹೊರಸೂಸುತ್ತದೆ ಎನ್ನುತ್ತಾರೆ ತಜ್ಞರು.

ಕೊಲೆಸ್ಟ್ರಾಲ್​ ಅಸಮತೋಲನ: ಕೆಂಪು ಮಾಂಸ ಅನಾರೋಗ್ಯಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್​ ಅನ್ನು ಹೊಂದಿದೆ. ಹೀಗಾಗಿ ಕೆಂಪು ಮಾಂಸದ ಅತಿಯಾದ ಸೇವನೆ ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ಏರುಪೇರು ಮಾಡಿ, ಹೃದಯಕ್ಕೂ ಹಾನಿಯುಂಟು ಮಾಡುತ್ತದೆ. ಹೀಗಾಗಿ ಕೆಂಪು ಮಾಂಸದ ಬದಲು ದೇಹಕ್ಕೆ ಹಾನಿ ಮಾಡದ ಮಾಂಸಗಳನ್ನು ರುಚಿಗಾಗಿ ತಿನ್ನಬಹುದು ಎನ್ನುವುದು ತಜ್ಞರ ಮಾತು.

ಕೆಟ್ಟ ಉಸಿರು: ಕೆಂಪು ಮಾಂಸದ ಸೇವನೆಯಿಂದ ದೇಹದಲ್ಲಿ ಒಂದಷ್ಟು ರಾಸಾಯನಿಕ ಉತ್ಪತ್ತಿಯಾಗಿ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್​ಗೆ ಕಾರಣವಾಗುತ್ತದೆ. ಇದರಿಂದ ಕೆಟ್ಟವಾಸನೆಯ ಗಾಳಿ ದೇಹದಿಂದ ಹೊರಬರುವಂತೆ ಮಾಡುತ್ತದೆ. ಹೀಗಾಗಿ ಕೆಂಪು ಮಾಂಸದ ಸೇವನೆ ಕಡಿಮೆ ಇದಷ್ಟೂ ಒಳ್ಳೆಯದು.

ಜೀರ್ಣಕ್ರಿಯೆಗೆ ಸಮಸ್ಯೆ: ದೇಹದಲ್ಲಿ ಜೀರ್ಣಕ್ರಿಯೆ ಅತಿ ಮುಖ್ಯವಾಗಿದ್ದು. ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇದ್ದರೆ ಅದರಿಂದ ಉಂಟಾಗುವ ಸಮಸ್ಯೆ ಒಂದೆರಡಲ್ಲ. ಕೆಂಪು ಮಾಂಸ ಕೂಡ ಜೀರ್ಣಕ್ರಿಯೆಗೆ ಸಮಸ್ಯೆ ಉಂಟುಮಾಡುತ್ತದೆ. ಹೆಚ್ಚಿನ ಕೊಬ್ಬನ್ನು ಹೊಂದಿರುವುದರಿಂದ ಸುಲಭವಾಗಿ ಜೀರ್ಣವಾಗದೆ ಹೊಟ್ಟೆಯಲ್ಲೇ ಕುಳಿತು ಅಜೀರ್ಣ, ಮಲಬದ್ಧತೆಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ:

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದಾಗುವ ಲಾಭಗಳೇನು? ತಿಳಿದುಕೊಳ್ಳಿ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ