ಅಬ್ಬಬ್ಬಾ ಹೆಮ್ಮಾರಿ ಹೆಂಡತಿ, ಆಸ್ತಿಗಾಗಿ ಗಂಡನನ್ನು ಸರಪಳಿಯಲ್ಲಿ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ ಪತ್ನಿ

|

Updated on: May 06, 2024 | 2:39 PM

ಅಬ್ಬಬ್ಬಾ ಹೆಮ್ಮಾರಿ ಹೆಂಡತಿ ನೋಡಿ ಈಕೆ, ಆಸ್ತಿಗಾಗಿ ಪ್ರೀತಿ, ನಂಬಿಕೆ, ಸುಖ, ಎಲ್ಲವನ್ನು ನೀಡಿದ ಗಂಡನಿಗೆ ಎಂತಹ ಶಿಕ್ಷೆ ನೀಡಿದ್ದಾಳೆ. ಈ ವಿಡಿಯೋವನ್ನು ಒಮ್ಮೆ ನೋಡಿದ್ರೆ, ನೀವು ಖಂಡಿತ ಹೇಳುತ್ತೀರಾ ಇಂತಹ ಸ್ಥಿತಿ ನಮ್ಮ ಶತ್ರುವಿಗೂ ಬರಬಾರದು ಎಂದು. ಈ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಆಸ್ತಿಗಾಗಿ ಪತ್ನಿ ತನ್ನ ಪತಿಯನ್ನು ಸರಪಳಿಯಲ್ಲಿ ಕಟ್ಟಿ ಹಾಕಿ ಮೂರು ದಿನ ಥಳಿಸಿದ್ದಾಳೆ.

ಆಸ್ತಿಗಾಗಿ ಜಗಳ ಮಾಡಿಕೊಳ್ಳವುದು ಸಹಜ, ಅದು ಅಣ್ಣ-ತಮ್ಮ, ಅಪ್ಪ-ಮಕ್ಕಳ ಮಧ್ಯೆ ಇದ್ದೇ ಇರುತ್ತದೆ, ಆದರೆ ಇಲ್ಲೊಂದು ಪ್ರಕರಣ ಉಲ್ಟಾವಾಗಿದೆ. ಆಸ್ತಿಗಾಗಿ ಗಂಡ – ಹೆಂಡತಿ ಜಗಳ ಶುರುವಾಗಿದೆ. ಆದರೆ ಇದರಲ್ಲೂ ಒಂದು ಟ್ವಿಸ್ಟ್​​ ಇದೆ. ಗಂಡ ಹೆಂಡತಿಗೆ ಶಿಕ್ಷೆ ಅಥವಾ ಕಾಟ ನೀಡಬೇಕು ಆದರೆ ಇಲ್ಲಿ ಪತ್ನಿ ತನ್ನ ಪತಿಗೆ ಚಿತ್ರಹಿಂಸೆ ನೀಡಿದ್ದಾಳೆ. ಪಾಪ ಆ ವ್ಯಕ್ತಿಗೆ ಕೊಡಬಾರದ ಹಿಂಸೆಯನ್ನು ಈ ಮಹಿಳೆ ನೀಡಿದ್ದಾಳೆ. ಗಂಡ ಹೆಂಡತಿಗೆ ಹೊಡೆಯುವುದು, ಹಿಂಸೆ ನೀಡುವುದನ್ನು ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ಇತ್ತೀಚಿಗಿನ ದಿನಗಳಲ್ಲಿ ಹೆಂಡತಿ ಪತಿಗೆ ಶಿಕ್ಷೆ ನೀಡುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇದೀಗ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಈ ಮಹಿಳೆ ತನ್ನ ಗಂಡನ್ನು ಆಸ್ತಿ ವಿಚಾರವಾಗಿ ಸರಪಳಿಯಲ್ಲಿ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ್ದಾಳೆ. ಇದೀಗ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಇದು ಒಂದು ಹೊಸ ಟ್ರೆಂಡ್​​​ ಸೃಷ್ಟಿ ಮಾಡುತ್ತಿದೆ ಎಂದು ಬಳಕೆದಾರರೂ ಹೇಳುತ್ತಿದ್ದಾರೆ. ಹಿಂದೆ ಗಂಡ ಹೆಂಡತಿಗೆ, ಅತ್ತೆ, ಸೊಸೆ ಹೀಗೆ ಸಣ್ಣ ಪುಟ್ಟ ಜಗಳಗಳು ನಡೆಯುತ್ತಿತ್ತು. ಆದರೆ ಇದೀಗ ಎಲ್ಲವೂ ಬದಲಾಗಿದೆ. ಈಗ ಎಲ್ಲ ರಿವರ್ಸ್ ಆಗಿ ನಡೆಯುತ್ತಿದೆ. ಹೆಂಡತಿ ಗಂಡನಿಗೆ ಸೊಸೆ ಅತ್ತೆ, ಶಿಕ್ಷೆ ನೀಡುತ್ತಿದ್ದಾರೆ. ಅಂಬೇಡ್ಕರ್ ನಗರದ 45 ವರ್ಷದ ಮಹಿಳೆಯೊಬ್ಬರು ಆಸ್ತಿಗಾಗಿ ಪತಿಯನ್ನು ಸರಪಳಿಯಲ್ಲಿ ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆ. ಮೂರು ದಿನಗಳಿಂದ ಗಂಡನನ್ನು ಕಟ್ಟಿಹಾಕಿ ಥಳಿಸಿದ್ದಾರೆ ಎಂದು ಹೇಳಲಾಗಿದೆ.

ಘಟಕೇಸರ ಪೊಲೀಸರ ಪ್ರಕಾರ, ಅಂಬೇಡ್ಕರ್ ನಗರದ ನಿವಾಸಿ ನರಸಿಂಹ (50) ಮತ್ತು ಅವರ ಪತ್ನಿ ಭಾರತಮ್ಮ (45) ನಡುವೆ ಆಸ್ತಿ ವಿಚಾರವಾಗಿ ಜಗಳ ನಡೆಯುತ್ತಿತ್ತು. ಅವರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರೂ ಇದ್ದಾರೆ. ನರಸಿಂಹನ ಹೆಸರಿನಲ್ಲಿರುವ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಅವರ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ನಿರಂತರವಾಗಿ ನರಸಿಂಹ ಅವರ ಜತೆಗೆ ಜಗಳವಾಡುತ್ತಿದ್ದರು. ನರಸಿಂಹ ತನ್ನ ಪತ್ನಿಯ ಜಮೀನಿನಲ್ಲಿ ಮನೆ ಕಟ್ಟಿದ್ದಾನೆ. ಮನೆ ನಿರ್ಮಾಣಕ್ಕೆ ತೆಗೆದುಕೊಂಡ ಸಾಲವನ್ನು ತೀರಿಸಲು ತನ್ನ ಹೆಸರಿಗೆ ಜಮೀನು ಮಾರಾಟ ಮಾಡಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ, ಮಕ್ಕಳು ನರಸಿಂಹ ಅವರ ಜತೆಗೆ ಜಗಳವಾಡಲು ಶುರು ಮಾಡಿದ್ದಾರೆ.

ಇನ್ನು ಇದರಿಂದ ಬೇಸತ್ತು ನರಸಿಂಹ ಅವರು ಮನೆ ಬಿಟ್ಟು ಬೇರೆ ಹೋಗಿದ್ದಾರೆ. ನಂತರ ನರಸಿಂಹ ಅವರು ನಾಪತ್ತೆ ಆಗಿರುವುದನ್ನು ತಿಳಿದು ಅವರನ್ನು ಹುಡುಕಲು ಶುರು ಮಾಡಿದ್ದಾರೆ. ನರಸಿಂಹ ಅವರು ಭುವನಗಿರಿ ಜಿಲ್ಲೆಯಲ್ಲಿ ಇರುವುದನ್ನು ತಿಳಿದ ಭಾರತಮ್ಮ ಆ.30ರಂದು ಮಕ್ಕಳೊಂದಿಗೆ ಅವರನ್ನು ಭೇಟಿಯಾಗಲು ಹೋಗಿ ಮನೆಗೆ ಕರೆತಂದಿದ್ದರು. ಮತ್ತೆ ಎಲ್ಲಿಗೂ ಹೋಗಬಾರದು ಎಂದು ನರಸಿಂಹನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಕೋಣೆಗೆ ಬೀಗ ಹಾಕಿದ್ದಾಳೆ. ಮೂರು ದಿನಗಳ ಕಾಲ ಆತನನ್ನು ತೀವ್ರವಾಗಿ ಥಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಗಂಡನ ಖಾಸಗಿ ಭಾಗಕ್ಕೆ ಸಿಗರೇಟ್​​​ನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪತ್ನಿ, ಆಕೆ ನೀಡಿದ ಹಿಂಸೆಯನ್ನು ಪಿನ್ ಟು ಪಿನ್​​​​ ವಿವರಿಸಿದ ಪತಿ

ಇದನ್ನು ಕಂಡು ಸ್ಥಳೀಯರು ಗುಟ್ಟಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಮಾಡಿದ್ದಾರೆ. ಹಾಗೂ ಪೊಲೀಸರಿಗೆ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿ, ನರಸಿಂಹ ಅವರನ್ನು ಸರಪಳಿಯಿಂದ ಮುಕ್ತಗೊಳಿಸಿದ್ದಾರೆ. ಪತ್ನಿ ಹಾಗೂ ಮಕ್ಕಳ ವಿರುದ್ಧ ದಾಖಲಿಸಿಕೊಂಡಿದ್ದು. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ