ಗಂಡನ ಖಾಸಗಿ ಭಾಗಕ್ಕೆ ಸಿಗರೇಟ್​​​ನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪತ್ನಿ, ಆಕೆ ನೀಡಿದ ಹಿಂಸೆಯನ್ನು ಪಿನ್ ಟು ಪಿನ್​​​​ ವಿವರಿಸಿದ ಪತಿ

ಒಬ್ಬ ಮಹಿಳೆ ತನ್ನ ಗಂಡನಿಗೆ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಪತಿಯನ್ನು ಪ್ರಜ್ಞೆ ತಪ್ಪಿಸಿ ಆತನನ್ನು ಬೆತ್ತಲೆ ಮಾಡಿ ಚಿತ್ರಹಿಂಸೆ ನೀಡಿದ್ದಾಳೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆ ನೀಡಿದ ಚಿತ್ರಹಿಂಸೆಯನ್ನು ಒಮ್ಮೆ ಕೇಳಿದ್ರೆ, ಕಣ್ಣೀರು ಬರುತ್ತದೆ. ಪುಲ್​​ ಸ್ಟೋರಿ ಇಲ್ಲಿದೆ ನೋಡಿ.

ಗಂಡನ ಖಾಸಗಿ ಭಾಗಕ್ಕೆ ಸಿಗರೇಟ್​​​ನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪತ್ನಿ, ಆಕೆ ನೀಡಿದ ಹಿಂಸೆಯನ್ನು ಪಿನ್ ಟು ಪಿನ್​​​​ ವಿವರಿಸಿದ ಪತಿ
Follow us
ಅಕ್ಷಯ್​ ಪಲ್ಲಮಜಲು​​
|

Updated on:May 06, 2024 | 12:40 PM

ನೀವು ಪತಿ ಪತ್ನಿಗೆ ಚಿತ್ರಹಿಂಸೆ ನೀಡುವುದನ್ನು ಹೆಚ್ಚಾಗಿ ಕೇಳಿರಬಹುದು, ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನಿಗೆ ಚಿತ್ರ ಹಿಂಸೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈಕೆ ತನ್ನ ಗಂಡನಿಗೆ ನೀಡಿದ ಶಿಕ್ಷೆ ಎಷ್ಟು ಕಠೋರವಾಗಿತ್ತೆಂದರೆ ಒಂದು ಬಾರಿ ನಿಮ್ಮ ಕರುಳು ಚುರುಕ್ ಅನ್ನೋದು ಖಂಡಿತ, ಉತ್ತರ ಪ್ರದೇಶದ ಬಿಜ್ನೋರ್​ದಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಮಹಿಳೆಯೊಬ್ಬಳು ತನ್ನ ಗಂಡನಿಗೆ ಚಿತ್ರಹಿಂಸೆ ನೀಡಿ, ಆತನ ಖಾಸಗಿ ಭಾಗಗಳಿಗೆ ಹಾನಿ ಮಾಡಿದ್ದಾಳೆ. ಪತಿಯನ್ನು ಬೆತ್ತಲೆ ಮಾಡಿ, ಮಂಚದ ಮೇಲೆ ಮಲಗಿಸಿ, ಕೈ-ಕಾಲುಗಳನ್ನು ಕಟ್ಟಿ ಹಾಕಿ ಕ್ರೂರವಾಗಿ ನಡೆಸಿಕೊಂಡಿದ್ದಾಳೆ. ಎಷ್ಟೇ ಕಿರುಚಿದರು, ಬೇಡಿಕೊಂಡರು, ಮನುಷ್ಯತ್ವವಿಲ್ಲದಂತೆ ಕಾಟ ನೀಡಿದ್ದಾಳೆ.

ಪತಿಯನ್ನು ಮಂಚಕ್ಕೆ ಕಟ್ಟಿ ಹಾಕಿ, ಅವಳಿಗೆ ಹೇಗೆ ಬೇಕು ಹಾಗೆ ನಡೆಸಿಕೊಳ್ಳುತ್ತಿದ್ದಳು, ಮಂಚದಲ್ಲಿ ಅವನ ಜತೆಗೆ ಮಲಗುವುದು, ಸಿಗರೇಟ್​​​ ಸೇದುತ್ತಿದ್ದಳು, ಮದ್ಯಪಾನ ಕೂಡ ಮಾಡುತ್ತಿದ್ದಳು, ಇದರ ಮಧ್ಯೆ ಪತಿಗೆ ಚಿತ್ರಹಿಂಸೆ ಕೂಡ ನೀಡುತ್ತಿದ್ದಳು ಎಂದು ಹೇಳಲಾಗಿದೆ. ಪತಿಯ ಖಾಸಗಿ ಭಾಗಕ್ಕೆ ಮುಟ್ಟಿ ಚಿತ್ರಹಿಂಸೆಯನ್ನು ನೀಡುತ್ತಿದ್ದಳು. ಇದರಿಂದ ಸಮಾಧಾನವಾಗದಿದ್ದಾಗ ಪತಿಯ ಖಾಸಗಿ ಅಂಗದ ಮೇಲೆ ಚಾಕುವಿನಿಂದ ಗಾಯ ಮಾಡುತ್ತಿದ್ದಳು ಎಂದು ಪೊಲೀಸರು ಮುಂದೆ ಆತ ಹೇಳಿಕೊಂಡಿದ್ದಾನೆ.

ಆತ ಹೇಳುತ್ತಿದ್ದ ಒದೊಂದು ಘಟನೆಯನ್ನು ಕೇಳಿಸಿಕೊಂಡ ಪೊಲೀಸರಿಗೂ ಒಂದು ಬಾರಿ ಅಚ್ಚರಿ ಹಾಗೂ ಅಘಾತವಾಗಿದೆ. ಆಕೆ ಹಿಂಸೆ ನೀಡಿದ್ದಳು ಎಂಬುದಕ್ಕೆ ಸಿಸಿಟಿವಿ ಕೂಡ ಸಾಕ್ಷಿಯಾಗಿದೆ. ಪತಿ ಹಾಗೂ ಸಿಸಿ ಟಿವಿ ವಿಡಿಯೋ ಆಧಾರದ ಮೇಲೆ ಮಹಿಳೆಯ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆಕೆಯನ್ನು ಬಂಧಿಸಲಾಗಿದೆ.

ಏಳು ತಿಂಗಳ ಹಿಂದೆ ಪ್ರೇಮ ವಿವಾಹ

ಇವರಿಬ್ಬರದ್ದು ಪ್ರೇಮ ವಿವಾಹ ಎಂದು ಹೇಳಲಾಗಿದೆ. ಇಬ್ಬರ ಕುಟುಂಬ ಒಪ್ಪಿಗೆಯ ನಂತರ ಮುಸ್ಲಿಂ ಪದ್ಧತಿಯಂತೆ 17 ನವೆಂಬರ್ 2023 ರಂದು ವಿವಾಹವಾಗಿದ್ದಾರೆ. ಆತನ ತಾಯಿ ಕೂಡ ತನ್ನ ಸೊಸೆ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಪೊಲೀಸರಿಗೆ ಹೇಳಿದ್ದಾರೆ. ಮಲಗುವ ಕೋಣೆಯಲ್ಲಿ ಅವನೊಂದಿಗೆ ಅಸಹ್ಯಕರ ಕೆಲಸಗಳನ್ನು ಮಾಡುತ್ತಿದ್ದಳು.ಇದರಿಂದ ನೊಂದು ಮಗ ಮಲಗುವ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಸೊಸೆಯ ದುಷ್ಕೃತ್ಯ ಬಯಲಿಗೆಳೆದಿದ್ದಾಳೆ.

ಇದನ್ನೂ ಓದಿ: ಸೈಬರ್​ ಕ್ರೈಂ: 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ

ಖಾಸಗಿ ಭಾಗಗಳ ಮೇಲೆ ಗಾಯಗಳು

ಪತಿಯ ಹೇಳಿಕೆ ಪ್ರಕಾರ, ಏಪ್ರಿಲ್ 29, 2024 ರಂದು, ಹೆಂಡತಿ ಅವನಿಗೆ ಕುಡಿಯಲು ಹಾಲು ನೀಡಿದ್ದಾಳೆ. ಅದರಲ್ಲಿ ಮಾದಕ ಮಾತ್ರೆ ಬೆರೆಸಿದ್ದು, ಅದನ್ನು ಕುಡಿದ ತಕ್ಷಣ ಪತಿ ಪ್ರಜ್ಞೆ ತಪ್ಪಿದ್ದಾನೆ. ಬಳಿಕ ಈ ಮಹಿಳೆ ಅವನನ್ನು ಬೆತ್ತಲೆ ಮಾಡಿ ಮಂಚದ ಮೇಲೆ ಮಲಗಿಸಿ, ಎರಡೂ ಕೈ-ಕಾಲುಗಳನ್ನು ಕಟ್ಟಿ ಹಾಕಿದ್ದಾನೆ. ಆತನ ಖಾಸಗಿ ಅಂಗಗಳನ್ನು ಸಿಗರೇಟಿನಿಂದ ಸುಟ್ಟು ಗಾಯ ಮಾಡಿದ್ದಾಳೆ. ಚಾಕುವಿನಿಂದ ಆತನ ದೇಹದ ಮೇಲೆ ಗಾಯ ಮಾಡಿದ್ದಾಳೆ. ಆತ ಕೂಗುವುದು ಹೊರಗೆ ಕೇಳಬಾರದು ಎಂದು ಬಾಯಿಗೆ ಬಟ್ಟೆಯನ್ನು ಕಟ್ಟಿರುವುದನ್ನು ಕೂಡ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದೀಗ ಆಕೆ ಮಾಡಿದ ಕೃತ್ಯಕ್ಕೆ ಅವಳನ್ನು ಬಂಧಿಸಲಾಗಿದ್ದು, ಗಂಡನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:34 pm, Mon, 6 May 24

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ