ಪಶ್ಚಿಮ ಬಂಗಾಳ: ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂದ ಎನ್​ಜಿಟಿ

|

Updated on: Feb 29, 2024 | 8:33 AM

ಪಶ್ಚಿಮ ಬಂಗಾಳದ ಗಂಗಾ ನಧಿ ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹೆಚ್ಚಿನ ಪ್ರಮಾಣದಲ್ಲಿದ್ದು ಅದು ಸ್ನಾನಕ್ಕೆ ಯೋಗ್ಯವಾಗಿಲ್ಲ ಎನ್ನುವ ವಿಚಾರ ಬಹಿರಂಗವಾದ ಬೆನ್ನಲ್ಲೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದೆ. ದಿನಕ್ಕೆ ಸುಮಾರು 258.67 ಮಿಲಿಯನ್ ಲೀಟರ್ ಶುದ್ಧೀಕರಿಸದ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ.

ಪಶ್ಚಿಮ ಬಂಗಾಳ: ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂದ ಎನ್​ಜಿಟಿ
ಪಶ್ಚಿಮ ಬಂಗಾಳ ಗಂಗಾ ನದಿ
Image Credit source: Mint
Follow us on

ಪಶ್ಚಿಮ ಬಂಗಾಳದಲ್ಲಿ ಗಂಗಾ ನದಿ(Ganga River) ನೀರು ಸ್ನಾನಕ್ಕೆ ಯೋಜ್ಯವಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(NGT) ತಿಳಿಸಿದೆ. ಸಂಸ್ಕರಣೆ ಮಾಡದೆ ನದಿಗೆ ಕೊಳಚೆ ನೀರು ಬಿಡುವುದರಿಂದ ಗಂಗಾ ನದಿಗೆ ಈ ದುಸ್ಥಿತಿ ಉಂಟಾಗಿದೆ, ದಂಡ ವಿಧಿಸುವುದಾಗಿ ಪಶ್ಚಿಮ ಬಂಗಾಳ ಅಧಿಕಾರಿಗಳಿಗೆ ಎನ್​ಜಿಟಿ ಎಚ್ಚರಿಕೆ ನೀಡಿದೆ.

ಗಂಗಾ ನದಿಯ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋಲಿಫಾರ್ಮ್​ ಬ್ಯಾಕ್ಟೀರಿಯಾ ಕಂಡುಬಂದಿದೆ. ಈ ಬ್ಯಾಕ್ಟೀರಿಯಾವು ಮಲದಲ್ಲಿ ಬೆಳೆಯುತ್ತದೆ. ಪ್ರತಿದಿನ 258.67 ಮಿಲಿಯನ್ ಲೀಟರ್ ಸಂಸ್ಕರಿಸದ ಕೊಳಚೆ ನೀರನ್ನು ನೇರವಾಗಿ ಪಶ್ಚಿಮ ಬಂಗಾಳದ ಗಂಗಾ ನದಿಗೆ ಬಿಡಲಾಗುತ್ತಿದೆ ಎಂದು ಎನ್‌ಜಿಟಿ ವರದಿಯಲ್ಲಿ ತಿಳಿಸಿದೆ.

ಇದು ಗಂಗಾ ನದಿಯಲ್ಲಿ ಸ್ನಾನ ಮಾಡುವವರಿಗೆ ಮತ್ತು ನದಿಯ ದಡದಲ್ಲಿ ವಾಸಿಸುವವರಿಗೆ ಆರೋಗ್ಯದ ಅಪಾಯವನ್ನುಂಟುಮಾಡುತ್ತದೆ.

ಎನ್‌ಜಿಟಿ ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುವ ನ್ಯಾಯಾಂಗ ಸಂಸ್ಥೆಯಾಗಿದೆ. ಗಂಗಾ ನದಿಯು ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಮೂಲಕ ಹಾದುಹೋಗುತ್ತದೆ. ವಿವಿಧ ರಾಜ್ಯಗಳಲ್ಲಿ ಗಂಗಾ ನದಿಯಲ್ಲಿ ಹರಡುತ್ತಿರುವ ಮಾಲಿನ್ಯವನ್ನು ತಡೆಯಲು ಎನ್‌ಜಿಟಿ ಪ್ರಯತ್ನಗಳನ್ನು ಮಾಡುತ್ತಿದೆ.

ಮತ್ತಷ್ಟು ಓದಿ: My India My Life Goals: ಸತತ 9 ವರ್ಷಗಳಿಂದ ಗಂಗಾನದಿಯನ್ನು ಸ್ವಚ್ಛಗೊಳಿಸುತ್ತಿರುವ ರಾಜೇಶ್ ಶುಕ್ಲಾ

ಈ ಕುರಿತ ವಿಚಾರಣೆ ವೇಳೆ ಪಶ್ಚಿಮ ಬಂಗಾಳದ ಗಂಗಾ ನದಿಯ ಮಾಲಿನ್ಯದ ಬಗ್ಗೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಹಿಂದಿನ ನಿರ್ದೇಶನಗಳಿಗೆ ಪ್ರತಿಕ್ರಿಯೆಯಾಗಿ ಪಶ್ಚಿಮ ಬಂಗಾಳ ಸಲ್ಲಿಸಿದ ವರದಿಯನ್ನು ಎನ್‌ಜಿಟಿ ಪರಿಶೀಲಿಸುತ್ತಿದೆ.

ಉತ್ತರ 24 ಪರಗಣಗಳು, ಮುರ್ಷಿದಾಬಾದ್, ನಾಡಿಯಾ, ಮಾಲ್ಡಾ, ಹೂಗ್ಲಿ, ಪೂರ್ವ ಬುರ್ದ್ವಾನ್, ಹೌರಾ, ಪೂರ್ವ ಮೇದಿನಿಪುರ ಮತ್ತು ದಕ್ಷಿಣ 24 ಪರಗಣಗಳು ಸೇರಿದಂತೆ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಲ್ಲಿಸಿದ ವರದಿಗಳನ್ನು ಪರಿಶೀಲಿಸಿದ ನಂತರ ಎನ್‌ಜಿಟಿ ಪೀಠದ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ತೀವ್ರ ಕಳವಳ ವ್ಯಕ್ತಪಡಿಸಿದರು. ಸಂಸ್ಕರಿಸದ ಕೊಳಚೆ ನೀರನ್ನು ಗಂಗಾ ನದಿಗೆ ಬಿಡುವುದನ್ನು ನಿಲ್ಲಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಎನ್‌ಜಿಟಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ