ಭಾರತದ ರಾಷ್ಟ್ರ ಧ್ವಜ
Image Credit source: iStock Photo
ಭಾರತ ಸ್ವಾತಂತ್ರ್ಯಗೊಂಡು 2022ರ ಆಗಸ್ಟ್ 15ಕ್ಕೆ 75 ವರ್ಷಗಳು ತುಂಬುತ್ತವೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಸಲಕ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯಡಿ ಹರ್ ಘರ್ ತಿರಂಗ ಅಭಿಯಾನವನ್ನು ನಡೆಸಲಾಗುತ್ತಿದೆ. ಅದರಂತೆ ದೇಶಾದ್ಯಂತ ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳು, ದೇಶವಾಸಿಗಳ ಮನೆಗಳಲ್ಲೂ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತಿದೆ. ಈ ರಾಷ್ಟ್ರಧ್ವಜದಲ್ಲಿನ ಕೇಸರಿ ಬಣ್ಣ ಧೈರ್ಯ, ಪರಿತ್ಯಾ, ದೇಶದ ಒಳಿತಿಗಾಗಿ ನಡೆಯುವ ಬಲಿದಾನದ ಸಂಕೇತವನ್ನು ಸೂಚಿಸಿದರೆ, ಬಿಳಿ ಬಣ್ಣವು ಸತ್ಯ, ಶಾಂತಿಯನ್ನು ಮತ್ತು ಹಸಿರು ಬಣ್ಣ ಪ್ರಗತಿಯ ಸಂಕೇವೂ ಆಗಿದೆ. ಜೊತೆಗೆ ಮನುಷ್ಯ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬಂಧವನ್ನು ತಿಳಿಸುತ್ತದೆ. ಈ ಬಣ್ಣಗಳ ನಡುವೆ ಇರುವ ಅಶೋಕ ಚಕ್ರವೂ ತನ್ನದೇ ಆದ ಸಂಕೇತವನ್ನು ಹೊಂದಿದೆ. ಈ ಚಕ್ರವು ಧರ್ಮವನ್ನು ಪ್ರತಿನಿಧಿಸುತ್ತದೆ. ಈ ಚಕ್ರದ ಇನ್ನಷ್ಟು ಸಂಗತಿಗಳು ಇಲ್ಲಿವೆ ನೋಡಿ
- ಗೆರೆಗಳಿಂದ ಪ್ರತಿನಿಧಿಸುವ ಅಶೋಕ ಚಕ್ರವು ಧರ್ಮಚಕ್ರದವನ್ನು ಸೂಚಿಸುತ್ತದೆ.
- ಅಶೋಕ ಚಕ್ರವು ತ್ರಿವರ್ಣ ಧ್ವಜದ ಮಧ್ಯದಲ್ಲಿದೆ ಮತ್ತು 24 ಗೆರೆಗಳನ್ನು ಹೊಂದಿದೆ. ಇದನ್ನು 1947ರ ಜುಲೈ 22 ರಂದು ಅಂಗೀಕರಿಸಲಾಯಿತು.
- ಅಶೋಕ ಚಕ್ರವನ್ನು ಕರ್ತವ್ಯದ ಚಕ್ರ ಎಂದೂ ಕರೆಯುತ್ತಾರೆ.
- ಭಾರತದ ಧ್ವಜದ ಬಿಳಿ ಬಣ್ಣದ ಮೇಲ್ಭಾಗದಲ್ಲಿ ನೀಲಿ ಬಣ್ಣದಲ್ಲಿ ಅಶೋಕ ಚಕ್ರವನ್ನು ಪ್ರದರ್ಶಿಸಲಾಗುತ್ತದೆ.
- ಜಲಂಧರ್‌ನ ಲಾಲಾ ಹಂಸರಾಜ್ ಅವರು ರಾಷ್ಟ್ರಧ್ವಜದಲ್ಲಿ ಚರಕ ಸೇರ್ಪಡಗೆ ಸಲಹೆ ನೀಡಿದ್ದರು. ಅದರಂತೆ ಮೊದಲು ಕೆಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜದಲ್ಲಿ ಚರಕವನ್ನು ಸೇರಿಸಲಾಯಿತು.
- ನಂತರ ಚರಕದ ಬದಲಿಗೆ ಭಾರತದ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರವನ್ನು ಬಳಸಲಾಯಿತು.
- ಅಶೋಕನ ಹಲವಾರು ಶಾಸನಗಳಲ್ಲಿ ಕಂಡುಬರುವ ‘ತಿರುಗುವ ಚಕ್ರ’ವನ್ನು ಅಶೋಕ ಚಕ್ರ ಎಂದು ಕರೆಯಲಾಗುತ್ತದೆ, ಅವುಗಳಲ್ಲಿ ಪ್ರಮುಖವಾದ ಅಶೋಕನ ಸಿಂಹ ಭಾರತದ ರಾಷ್ಟ್ರ ಲಾಂಛನವಾಗಿದೆ.
- ಪ್ರತಿಯೊಂದು ಚಕ್ರವು ಜೀವನದ ಒಂದು ತತ್ವ ಮತ್ತು ದಿನದ 24 ಗಂಟೆಗಳನ್ನೂ ಸಂಕೇತಿಸುತ್ತದೆ, ಅದಕ್ಕಾಗಿಯೇ ಇದನ್ನು ‘ಸಮಯದ ಚಕ್ರ’ ಎಂದೂ ಕರೆಯುತ್ತಾರೆ.
- ಈ ಚಕ್ರವು ಹಿಂದೂ ಧರ್ಮ, ಜೈನ ಧರ್ಮ ಮತ್ತು ವಿಶೇಷವಾಗಿ ಬೌದ್ಧ ಧರ್ಮದ ಧಾರ್ಮಿಕ ಲಕ್ಷಣವಾದ ‘ಧರ್ಮದ ಚಕ್ರ’ದ ಮಾದರಿಯಲ್ಲಿದೆ.
- ಕಡ್ಡಿಗಳು ಪ್ರತಿನಿಧಿಸುವ 24 ತತ್ವಗಳಲ್ಲಿ ಪ್ರೀತಿ, ಧೈರ್ಯ, ತಾಳ್ಮೆ, ಸ್ವಯಂ ತ್ಯಾಗ, ಸತ್ಯತೆ, ಸದಾಚಾರ, ಆಧ್ಯಾತ್ಮಿಕ ಜ್ಞಾನ, ನೈತಿಕತೆ, ಕಲ್ಯಾಣ, ಉದ್ಯಮ, ನಂಬಿಕೆ ಮತ್ತು ಸಮೃದ್ಧಿಯೂ ಸೇರಿದೆ.