Independence Day 2022: ಗಿನ್ನೆಸ್ ದಾಖಲೆ ಪುಟ ಸೇರಿದ ಭಾರತದ ಅತಿದೊಡ್ಡ ಮಾನವ ನಿರ್ಮಿತ ರಾಷ್ಟ್ರಧ್ವಜ

ಚಂಡೀಗಢ ವಿಶ್ವವಿದ್ಯಾನಿಲಯ ಮತ್ತು ಎನ್‌ಐಡಿ ಫೌಂಡೇಶನ್ ಶನಿವಾರ ಚಂಡೀಗಢದಲ್ಲಿ ರಾಷ್ಟ್ರಧ್ವಜದ ಅತಿದೊಡ್ಡ ಮಾನವ ಚಿತ್ರಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸಾಧಿಸಿದೆ. ಯುಎಇಯ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಭಾರತ ಮಾಡಿದೆ

Independence Day 2022: ಗಿನ್ನೆಸ್ ದಾಖಲೆ ಪುಟ ಸೇರಿದ ಭಾರತದ ಅತಿದೊಡ್ಡ ಮಾನವ ನಿರ್ಮಿತ ರಾಷ್ಟ್ರಧ್ವಜ
Flag in Guinness World Records
Edited By:

Updated on: Aug 13, 2022 | 3:13 PM

ಚಂಡೀಗಢ: ಚಂಡೀಗಢ ವಿಶ್ವವಿದ್ಯಾನಿಲಯ ಮತ್ತು ಎನ್‌ಐಡಿ ಫೌಂಡೇಶನ್ ಶನಿವಾರ ಚಂಡೀಗಢದಲ್ಲಿ ರಾಷ್ಟ್ರಧ್ವಜದ ಅತಿದೊಡ್ಡ ಮಾನವ ಚಿತ್ರಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸಾಧಿಸಿದೆ. ಯುಎಇಯ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಭಾರತ ಮಾಡಿದೆ, ಈ ಸಾಧನೆಯನ್ನು ಮಾಡಲು ಸಾಧಿಸಲು 5,885 ಜನರು ಒಟ್ಟುಗೂಡಿಸುವ ಮೂಲಕ ಹೊಸ ದಾಖಲೆಯನ್ನು ಮಾಡಲಾಯಿತು. ಚಂಡೀಗಢದ ಸೆಕ್ಟರ್ 16 ಸ್ಟೇಡಿಯಂನಲ್ಲಿ ಕೇಂದ್ರ ಸಚಿವ ಮೀನಕಾಶಿ ಲೇಖಿ ಕೂಡ ಉಪಸ್ಥಿತರಿದ್ದರು.

75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಇನ್ನುಷ್ಟು ಬಲ ನೀಡಲು ಚಂಡೀಗಢದ ನಿವಾಸಿಗಳು ಶನಿವಾರ ರಾಷ್ಟ್ರಧ್ವಜದ ಅತಿದೊಡ್ಡ ಮಾನವ ಚಿತ್ರಕ್ಕಾಗಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

ನಗರದ ಸೆಕ್ಟರ್ 16 ಕ್ರೀಡಾಂಗಣದಲ್ಲಿ. ಗಿನ್ನಿಸ್ ವಿಶ್ವ ದಾಖಲೆಯ ಅಧಿಕೃತ ತೀರ್ಪುಗಾರ ಸ್ವಪ್ನಿಲ್ ದಂಗಾರಿಕರ್ ಪ್ರಕಾರ, ಯುಎಇಯ ಹಿಂದಿನ ದಾಖಲೆಯನ್ನು ಮುರಿದು, 5885 ಜನರು ಈ ಸಾಧನೆ ಮಾಡಲು ಒಟ್ಟುಗೂಡಿದಾಗ ಹೊಸ ದಾಖಲೆಯನ್ನು ಇಲ್ಲಿ ರಚಿಸಲಾಗಿದೆ.

Published On - 3:13 pm, Sat, 13 August 22