ಭಾರತದ ಯುವ ವಿಜ್ಞಾನಿಗಳು ವಿಶ್ವದಲ್ಲೇ ಅತ್ಯುತ್ತಮರಾಗಬೇಕು: ಪ್ರಧಾನಿ ಮೋದಿ ಅಭಿಮತ

| Updated By: KUSHAL V

Updated on: Dec 22, 2020 | 7:26 PM

ವಿದೇಶಿ ಸಮುದಾಯಕ್ಕೆ ಆಹ್ವಾನವಿತ್ತ ಪ್ರಧಾನಿ ಮೋದಿ, ಭಾರತಕ್ಕೆ ಬಂದು ಅಧ್ಯಯನ ನಡೆಸಿ, ಹೊಸತನ್ನು ಕಂಡುಹಿಡಿಯಿರಿ, ಭಾರತದ ಪ್ರತಿಭೆಗಳ ಮೇಲೆ ವಿನಿಯೋಗ ಮಾಡಿ ಎಂದು ಕರೆ ನೀಡಿದರು.

ಭಾರತದ ಯುವ ವಿಜ್ಞಾನಿಗಳು ವಿಶ್ವದಲ್ಲೇ ಅತ್ಯುತ್ತಮರಾಗಬೇಕು: ಪ್ರಧಾನಿ ಮೋದಿ ಅಭಿಮತ
IISF ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮಾತು
Follow us on

ದೆಹಲಿ: ಉನ್ನತ ಗುಣಮಟ್ಟದ ಯುವ ಸಮೂಹವನ್ನು ಸೆಳೆಯುವುದು ಮತ್ತು ಅವರನ್ನು ಕ್ಷೇತ್ರದಲ್ಲಿ ಉಳಿಸಿಕೊಳ್ಳುವುದು ವಿಜ್ಞಾನದ ಮುಂದಿರುವ ಅತಿದೊಡ್ಡ ಸವಾಲು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತ್ತು ವಿಜ್ಞಾನ ಕಲಿಕೆಗೆ ಭಾರತ ಅತ್ಯಂತ ನಂಬಿಕಸ್ಥ ದೇಶವಾಗಬೇಕು ಎನ್ನುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದರು.

ಭಾರತ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಬಹುದೊಡ್ಡ ಪರಂಪರೆ ಹೊಂದಿದೆ. ಇದೇ ಸಂದರ್ಭದಲ್ಲಿ ವಿದೇಶಿ ಸಮುದಾಯಕ್ಕೆ ಆಹ್ವಾನವಿತ್ತ ಪ್ರಧಾನಿ ಮೋದಿ, ಭಾರತಕ್ಕೆ ಬಂದು ಅಧ್ಯಯನ ನಡೆಸಿ, ಹೊಸತನ್ನು ಕಂಡುಹಿಡಿಯಿರಿ, ಭಾರತದ ಪ್ರತಿಭೆಗಳ ಮೇಲೆ ವಿನಿಯೋಗ ಮಾಡಿ ಎಂದು ಕರೆ ನೀಡಿದರು. ನಮ್ಮ ದೇಶದ ಯುವ ವಿಜ್ಞಾನಿಗಳು ವಿಶ್ವದಲ್ಲೇ ಅತ್ಯುತ್ತಮವಾಗಿರಬೇಕು ಎಂಬುದು ನಮ್ಮ ಬಯಕೆ. ಅದಕ್ಕಾಗಿ ಯಾವುದೇ ಬಗೆಯ ಯೋಜನೆಗೂ ಸಹಕಾರ ನೀಡಲು ಸಿದ್ಧವಿದ್ದೇವೆ ಎಂದು ಭರವಸೆ ನೀಡಿದರು.

ರೊದ್ದಂ ನರಸಿಂಹ ಬರಹ | ನಾವು ನಮ್ಮ ಪೂರ್ವಕಾಲದ ಬಗ್ಗೆ ಅಸಂಭವ ಕತೆಗಳನ್ನೇನೂ ಶೋಧಿಸಬೇಕಿಲ್ಲ, ಈಗ ಕಷ್ಟಪಟ್ಟು ಕೆಲಸ ಮಾಡಬೇಕಷ್ಟೇ