ಹಿಂದೂ ಮಹಾಸಾಗರದಲ್ಲಿ ಕಡಲ್ಗಳ್ಳತನ, ಭಯೋತ್ಪಾದನೆ ಎದುರಿಸಲು ಭಾರತ ಬದ್ಧ: ಪ್ರಧಾನಿ ಮೋದಿ

|

Updated on: Mar 19, 2024 | 10:35 AM

ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅದರ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಪ್ರಮುಖ ಕ್ರಮ ತೆಗೆದುಕೊಂಡು ಭಾರತೀಯ ನೌಕಾಪಡೆ ಹಾಗೂ ಪ್ರಧಾನಿ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ. ಇದೀಗ ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತದ ಬದ್ಧತೆವಾಗಿದೆ ಎಂದು ಹೇಳಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಕಡಲ್ಗಳ್ಳತನ, ಭಯೋತ್ಪಾದನೆ ಎದುರಿಸಲು ಭಾರತ ಬದ್ಧ: ಪ್ರಧಾನಿ ಮೋದಿ
Follow us on

ದೆಹಲಿ, ಮಾ.19: ಮೂರು ತಿಂಗಳ ಹಿಂದೆ ಏಡನ್ ಕೊಲ್ಲಿಯಿಂದ ಅಪಹರಣಕ್ಕೊಳಗಾಗಿದ್ದ ಎಂವಿ ರೂಯೆನ್ ಹಡಗನ್ನು ಭಾರತೀಯ ನೌಕಾಪಡೆಯು ರಕ್ಷಿಸಿತ್ತು. ಹಡಗಿನಲ್ಲಿದ್ದ 17 ಸಿಬ್ಬಂದಿಯನ್ನು ನೌಕಾಪಡೆಯ ಮಾರ್ಕೋಸ್ ಕಮಾಂಡೋಸ್ ರಕ್ಷಿಸಿದರು. ಇವರಲ್ಲಿ ಏಳು ಮಂದಿ ಬಲ್ಗೇರಿಯಾದ (Bulgarian ) ಪ್ರಜೆಗಳಿದ್ದರು. ಭಾರತೀಯ ನೌಕಾಪಡೆಯ ಈ ಕೆಲಸಕ್ಕೆ ಬಲ್ಗೇರಿಯಾ ಸರ್ಕಾರವು ಭಾರತೀಯ ನೌಕಾಪಡೆಯ ಈ ಶೌರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿತ್ತು. ಈ ಬಗ್ಗೆ ಬಲ್ಗೇರಿಯಾದ ಅಧ್ಯಕ್ಷ ರುಮೆನ್ ರಾದೇವ್ ಅವರು ಎಕ್ಸ್​​​ನಲ್ಲಿ ಬರೆದುಕೊಂಡಿದ್ದಾರೆ. ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅದರ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಪ್ರಮುಖ ಕ್ರಮ ತೆಗೆದುಕೊಂಡು ಭಾರತೀಯ ನೌಕಾಪಡೆ ಹಾಗೂ ಪ್ರಧಾನಿ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ. ಇದೀಗ ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತದ ಬದ್ಧತೆವಾಗಿದೆ ಎಂದು ಹೇಳಿದ್ದಾರೆ.

ಬಲ್ಗೇರಿಯಾದ ಅಧ್ಯಕ್ಷ ರಾದೇವ್ ಅವರಿಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮತ್ತು ಏಳು ಬಲ್ಗೇರಿಯನ್ ಪ್ರಜೆಗಳು ಸುರಕ್ಷಿತವಾಗಿದ್ದಾರೆ ಹಾಗೂ ಅವರು ಶೀಘ್ರದಲ್ಲೇ ಬಲ್ಗೇರಿಯಾಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದಾರೆ.

ಬಲ್ಗೇರಿಯಾದ ಉಪ ಪ್ರಧಾನಿ ಮಾರಿಯಾ ಗೇಬ್ರಿಯಲ್ ಅವರು ಕೂಡ ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಪಹರಣಕ್ಕೊಳಗಾದ ನೌಕಾಪಡೆಯ ರೂಯೆನ್ ಮತ್ತು 7 ನಾಗರಿಕರು ಸೇರಿದಂತೆ ಅದರ ಸಿಬ್ಬಂದಿಯನ್ನು ರಕ್ಷಿಸಿದ್ದಕ್ಕಾಗಿ ನಾನು ಭಾರತೀಯ ನೌಕಾಪಡೆಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದು ಎಕ್ಸ್​​​​ನಲ್ಲಿ ಬರೆದುಕೊಂಡಿದ್ದಾರೆ.

17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ

ಕಾರ್ಯಾಚರಣೆ ವೇಳೆ ಸೊಮಾಲಿಯಾದಲ್ಲಿ 35 ಕಡಲ್ಗಳ್ಳರನ್ನು ಸೆರೆಹಿಡಿದು, 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಲಪಡಿಸಲು ಮತ್ತು ಈ ಪ್ರದೇಶದಲ್ಲಿ ಕಡಲ್ಗಳ್ಳತನವನ್ನು ತಡೆಯಲು ಈ ಕ್ರಮ ಅಗತ್ಯ ಎಂದು ಸೇನೆ ಹೇಳಿದೆ. ಮತ್ತೆ ಇಲ್ಲಿ ಇಂತಹ ಘಟನೆಗಳನ್ನು ನಡೆಯಲು ನಅವು ಬಿಡುವುದಿಲ್ಲ ಎಂದು ಹೇಳಿದೆ.

MV ರೌನ್ ಹಡಗು ಅಪಹರಿಸಲಾಗಿತ್ತು.

ಭಾರತದ ಕರಾವಳಿ ಪ್ರದೇಶದ ಸುಮಾರು 2,600 ಕಿಮೀ ಪೂರ್ವಕ್ಕೆ ಮಾಲ್ಟಾ-ಧ್ವಜದ ವ್ಯಾಪಾರಿ ಹಡಗು (ಎಂವಿ) ರುಯೆನ್ ಅನ್ನು ಕಡಲ್ಗಳ್ಳರ ವಶಪಡಿಸಿಕೊಂಡಿದ್ದರು. ಆದರೆ ಇದನ್ನು ಭಾರತೀಯ ನೌಕಪಡೆ ರಕ್ಷಿಸಿದೆ. ಇನ್ನು ಕಳೆದ ಏಳು ವರ್ಷಗಳಲ್ಲಿ ಸೊಮಾಲಿಯಾ ಕಡಲ್ಗಳ್ಳರಿಂದ ಹಡಗನ್ನು ರಕ್ಷಿಸುವ ಕಾರ್ಯಾಚರಣೆ ಇದೇ ಮೊದಲ ಬಾರಿಗೆ ಯಶಸ್ವಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು, ಸಿಬ್ಬಂದಿ ರಕ್ಷಿಸಿದ ಭಾರತೀಯ ನೌಕಾಪಡೆ; ಮೋದಿಗೆ ಅಧ್ಯಕ್ಷರ ಕೃತಜ್ಞತೆ

ಕಾರ್ಯಾಚರಣೆಗಾಗಿ ವಿಶೇಷ ಮಾರ್ಕೋಸ್ ಕಮಾಂಡೋ

ಸುಮಾರು 40 ಗಂಟೆಗಳ ಕಾರ್ಯಾಚರಣೆಯಲ್ಲಿ ನೌಕಾಪಡೆಯು ಐಎನ್‌ಎಸ್ ಕೋಲ್ಕತ್ತಾ ಮತ್ತು ಐಎನ್‌ಎಸ್ ಸುಭದ್ರ ಮತ್ತು ಸೀ ಗಾರ್ಡಿಯನ್ ಡ್ರೋನ್‌ಗಳನ್ನು ನಿಯೋಜಿಸಿತ್ತು. ಕಾರ್ಯಾಚರಣೆಗಾಗಿ ವಿಶೇಷ ಮಾರ್ಕೋಸ್ ಕಮಾಂಡೋಗಳನ್ನು C-17 ವಿಮಾನದ ಮೂಲಕ ಕಳುಹಿಸಲಾಗಿತ್ತು. ಈ ಕಾರ್ಯಚರಣೆ ಬಗ್ಗೆ ಭಾರತದ ರಕ್ಷಣಾ ಸಚಿವ ರಾಜನಾಥ್​​ ಸಿಂಗ್ ಭಾರತೀಯ ಪಡೆಗಳನ್ನು ಅಭಿನಂದಿಸಿದ್ದಾರೆ.

ಭಾರತೀಯ ನೌಕಾಪಡೆಗೆ ಧನ್ಯವಾದಗಳು

ಬಲ್ಗೇರಿಯಾದ ವಿದೇಶಾಂಗ ಸಚಿವೆ ಹಾಗೂ ಉಪ ಪ್ರಧಾನಿ ಮರಿಯಾ ಗೇಬ್ರಿಯಲ್ ಅವರು ತನ್ನ ದೇಶದ ಏಳು ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಹಡಗು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆಗೆ ಕೃತಜ್ಞತೆ ಸಲ್ಲಿಸಿದರು. ಗೇಬ್ರಿಯಲ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಇದು ಸ್ನೇಹ ಎಂದು ಹೇಳಿದ್ದಾರೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Tue, 19 March 24